AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಅಧಿವೇಶನದಲ್ಲೂ ಚರ್ಚೆ ಆಯ್ತು ಗಿಲ್ಲಿ ನಟನ ಹೆಸರು; ಪ್ರಸ್ತಾಪಿಸಿದ್ದು ಯಾರು? ಕಾರಣವೇನು?

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ಹೆಸರು ಇಂದಿಗೂ ಎಲ್ಲೆಡೆ ಚರ್ಚೆಯಲ್ಲಿದೆ. ಅವರ ಜನಪ್ರಿಯತೆ ಹೆಚ್ಚಿದೆ. ಆದರೆ, ಅವರ ಬಹುಮಾನದ 50 ಲಕ್ಷ ರೂಪಾಯಿಗಳ ತೆರಿಗೆ ಲೆಕ್ಕಾಚಾರ ರಾಜ್ಯ ಅಧಿವೇಶನದಲ್ಲೂ ಚರ್ಚೆಯಾಗಿದೆ. ಶಾಸಕ ಪ್ರದೀಪ್ ಈಶ್ವರ್, ಗಿಲ್ಲಿಗೆ ಸಿಕ್ಕ 50 ಲಕ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂದು ವಿವರಿಸಿದ್ದಾರೆ. ಇದರಿಂದ ನಿಜವಾದ ವಿನ್ನರ್ ನಿರ್ಮಲಾ ಸೀತಾರಾಮನ್ ಎಂದಿದ್ದಾರೆ.

ವಿಶೇಷ ಅಧಿವೇಶನದಲ್ಲೂ ಚರ್ಚೆ ಆಯ್ತು ಗಿಲ್ಲಿ ನಟನ ಹೆಸರು; ಪ್ರಸ್ತಾಪಿಸಿದ್ದು ಯಾರು? ಕಾರಣವೇನು?
Gilli Nata (25)
ರಾಜೇಶ್ ದುಗ್ಗುಮನೆ
|

Updated on: Jan 28, 2026 | 7:02 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ವಿನ್ನರ ಗಿಲ್ಲಿ ನಟ ಅವರ ಹೆಸರು ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಅವರು ಗೆದ್ದು ಎರಡು ವಾರ ಪೂರ್ಣಗೊಳ್ಳುತ್ತಾ ಬಂದರೂ ಅವರ ಹವಾ ನಿಂತಿಲ್ಲ. ಹೋದಲ್ಲಿ ಬಂದಲ್ಲಿ ಗಿಲ್ಲಿ ಹೆಸರು ಚರ್ಚೆಯಲ್ಲಿದೆ. ನಾನಾ ಉತ್ಸವಗಳಿಗೆ ತೆರಳಿ ಅವರು ಮನರಂಜನೆ ನೀಡುತ್ತಿದ್ದಾರೆ. ಈಗ ಗಿಲ್ಲಿ ನಟನ ಹೆಸರು ರಾಜ್ಯದ ವಿಶೇಷ ಅಧಿವೇಶನದಲ್ಲೂ ಚರ್ಚೆಯಾಗಿದೆ. ಈ ಹೆಸರನ್ನು ಪ್ರಸ್ತಾಪ ಮಾಡಿದ್ದು ಶಾಸಕ ಪ್ರದೀಪ್ ಈಶ್ವರ್.

ಗಿಲ್ಲಿ ನಟ ಅವರು ಹಾಸ್ಯದ ಮೂಲಕ ಗಮನ ಸೆಳೆದವರು. ಅವರು ಮಾತಿನ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಲಕ್ಷ ಇದ್ದ ಅವರ ಹಿಂಬಾಲಕರ ಸಂಖ್ಯೆ ಈಗ 20 ಲಕ್ಷ ತಲುಪಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿ. ಅಧಿವೇಶನದಲ್ಲಿ ಗಿಲ್ಲಿ ಹೆಸರು ಚರ್ಚೆ ಆಗಿದ್ದು ಅವರ ಜನಪ್ರಿಯತೆ ಕಾರಣಕ್ಕೆ ಅಲ್ಲ, ಬದಲಿಗೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಟ್ಯಾಕ್ಸ್ ಕಾರಣಕ್ಕೆ.

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಶೋ ಕಡೆಯಿಂದ 50 ಕೋಟಿ ರೂಪಾಯಿ ಸಿಕ್ಕಿದೆ. ಆದರೆ, ಇದರಲ್ಲಿ ಸಂಪೂರ್ಣ ಹಣ ಗಿಲ್ಲಿಗೆ ಸೇರೋದಿಲ್ಲ. ಈ ವಿಷಯವನ್ನು ಪ್ರದೀಪ್ ಈಶ್ವರ್ ಪ್ರಸ್ತಾಪಿಸಿದ್ದಾರೆ. ‘ಎಲ್ಲರೂ ಬಿಗ್ ಬಾಸ್ ವಿನ್ನರ್ ಗಿಲ್ಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ, ಶೋನ ವಿನ್ನರ್ ಅವರಲ್ಲ, ನಿರ್ಮಲಾ ಸೀತಾರಾಮನ್. ಕೊಟ್ಟಿರೋ 50 ಲಕ್ಷ ರೂಪಾಯಿಗೆ 18 ಪರ್ಸೆಂಟ್ ಜಿಎಸ್​ಟಿ, 13 ಇನ್​​ಕಮ್​ ಟ್ಯಾಕ್ಸ್, 4 ಪರ್ಸೆಂಟ್ ಸೆಸ್. ಎಲ್ಲಾ ಸೇರಿ 52 ಪರ್ಸೆಂಟ್ ನಿರ್ಮಲಾ ಅವರಿಗೆ ಹೋಗುತ್ತದೆ. ನಿಜವಾದ ಬಿಗ್ ಬಾಸ್ ವಿನ್ನರ್ ನಿರ್ಮಲಾ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬಿಗ್ ಬಾಸ್ ಸತೀಶ್​ಗೆ ಕೊಲೆ ಬೆದರಿಕೆ ಹಾಕಿದ ಗಿಲ್ಲಿ ಫ್ಯಾನ್ಸ್ ಅರೆಸ್ಟ್: 80 ಜನರ ಮೇಲೆ ಕೇಸ್

ಗಿಲ್ಲಿ ನಟ ಅವರಿಗೆ 50 ಲಕ್ಷದಲ್ಲಿ 35 ಲಕ್ಷ ರೂಪಾಯಿ ಸಿಗುತ್ತಿದೆ ಎಂಬುದು ನಿಜವಾದ ಲೆಕ್ಕ. ಪ್ರದೀಪ್ ಅವರು ಇದನ್ನು ಸ್ವಲ್ಪ ಎಗ್ಸಾಗರೇಷನ್ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. 50 ಲಕ್ಷದ ಜೊತೆ ಗಿಲ್ಲಿ ನಟನಿಗೆ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ, ಮಾರುತು ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ