ಬಿಗ್ ಬಾಸ್​​ನ ಗಿಲ್ಲಿನೇ ಗೆಲ್ಲೋದು; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ

ಶಿವರಾಜ್​​ಕುಮಾರ್ ಅವರು ಗಿಲ್ಲಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಪರಿಚಿತರಾದ ಇವರ ಬಾಂಧವ್ಯ ಈಗಲೂ ಗಟ್ಟಿಯಾಗಿದೆ. ಗಿಲ್ಲಿಯ ಪ್ರತಿಭೆಗೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಗಿಲ್ಲಿ ಅಭಿಮಾನಿಗಳಿಗೆ ಖುಷಿ ತಂದಿವೆ. ಶಿವಣ್ಣನ ವಿಡಿಯೋ ಈಗ ವೈರಲ್ ಆಗಿದೆ.

ಬಿಗ್ ಬಾಸ್​​ನ ಗಿಲ್ಲಿನೇ ಗೆಲ್ಲೋದು; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ
ಗಿಲ್ಲಿ-ಶಿವಣ್ಣ

Updated on: Jan 16, 2026 | 1:55 PM

ಶಿವರಾಜ್​​ಕುಮಾರ್ (Shivarajkumar) ಹಾಗೂ ಗಿಲ್ಲಿ ನಟನ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯ ಶಿವರಾಜ್​​ಕುಮಾರ್ ಅವರಿಗೆ ಆಗಿತ್ತು. ಈ ಸಂದರ್ಭದಲ್ಲಿ ಗಿಲ್ಲಿಯನ್ನು ನೋಡಿ ಶಿವಣ್ಣ ಇಂಪ್ರೆಸ್ ಆಗಿದ್ದರು. ಈಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್​​ಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಗಿಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗಿಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಗಿಲ್ಲಿ ಟ್ಯಾಲೆಂಟ್ ನೋಡಿ ಶಿವಣ್ಣನಿಗೆ ಖುಷಿ ಆಗಿತ್ತು. ಈಗ ಗಿಲ್ಲಿ ಬಿಗ್ ಬಾಸ್​​ನಲ್ಲಿದ್ದಾರೆ. ಅಶ್ವಿನಿ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ರಘು ಹಾಗೂ ಧನುಶ್ ಜೊತೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಗೆಲುವು ಗಿಲ್ಲಿಗೆ ಸಿಗಲಿದೆ ಎಂಬುದು ಶಿವಣ್ಣನ ಅಭಿಪ್ರಾಯ.

ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ, ‘ಗಿಲ್ಲಿಯೇ ಗೆಲ್ಲೋದು’ ಎಂದು ಟೇಬಲ್ ತಟ್ಟಿ ಹೇಳಿದ್ದಾರೆ ಶಿವಣ್ಣ. ಇಷ್ಟೇ ಅಲ್ಲ, ಶಿವರಾಜ್​​ಕುಮಾರ್ ಅವರು ಗಿಲ್ಲಿಗೆ ಆಲ್​ ದಿ ಬೆಸ್ಟ್ ಕೂಡ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಗಿಲ್ಲಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಈ ಮೊದಲು ಗಿಲ್ಲಿ ಬಗ್ಗೆ ಮಾತನಾಡಿದ್ದ ಶಿವಣ್ಣ, . ‘ಗಿಲ್ಲಿನ ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು. ಗಿಲ್ಲಿ ನೋಡಿದಾಗಲೆಲ್ಲ ತಮಿಳಿನ ಹಾಸ್ಯ ನಟ ಚಂದ್ರಬಾಬುನ ನೆನಪಾಗುತ್ತಾರೆ. ಚಂದ್ರಬಾಬು ಅದ್ಭುತ ಕಾಮಿಡಿಯನ್. ಗಿಲ್ಲಿ ಜೊತೆ ಖಂಡಿತವಾಗಿಯೂ ಒಂದು ಸಿನಿಮಾ ಮಾಡುತ್ತೇನೆ’ ಎಂದಿದ್ದರು ಶಿವಣ್ಣ.

ಇದನ್ನೂ ಓದಿ: ನಟ ಶಿವರಾಜ್​​ಕುಮಾರ್ ಸಾವು ಗೆದ್ದು ಒಂದು ವರ್ಷ; ಅಂದು ನಡೆದಿದ್ದೇನು?

ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದ ಜೋಗಿ ಪ್ರೇಮ್ ಅವರು ಗಿಲ್ಲಿಗೆ ವಿಶೇಷ ಪ್ರೀತಿ ತೋರಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೋಗುವಾಗ, ‘ಹೊರಗೆ ಬಂದ್ಮೇಲೆ ಸಿಗು’ ಎಂದಿದ್ದರು. ಹೀಗಾಗಿ, ಪ್ರೇಮ್ ಕೂಡ ಗಿಲ್ಲಿಗೆ ಸಿನಿಮಾದಲ್ಲಿ ಒಂದು ಪಾತ್ರ ಕೊಡಬಹುದು ಎಂದು ಅನೇಕರು ಊಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:54 pm, Fri, 16 January 26