
ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಬಿಗ್ ಬಾಸ್ (Bigg Boss) ಅಲ್ಲಿ ಒಳ್ಳೆಯ ಕಾಂಪಿಟೇಷನ್ ಬೆಳೆದಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್ಗಳು ಆಗುತ್ತಲೇ ಇರುತ್ತವೆ. ಜನವರಿ 2ರ ಎಪಿಸೋಡ್ನಲ್ಲಿ ಇಬ್ಬರ ಮಧ್ಯೆ ಕಿರಕ್ ಆಗಿದೆ. ಕಳಪೆ ಕೊಡೋ ವಿಷಯದಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಘನಘೋರ ಜಗಳ ನಡೆದಿದೆ. ಅಶ್ವಿನಿ ಟ್ರಿಗರ್ ಮಾಡಿ, ಅವರಿಗೆ ತಿರುಗೇಟು ನೀಡಿದ್ದಾರೆ ಗಿಲ್ಲಿ.
ಅಶ್ವಿನಿ ಗೌಡ ಅವರು ಮೊದಲು ಗಿಲ್ಲಿಗೆ ಕಳಪೆ ನೀಡಿದರು. ಇದಕ್ಕೆ ಅವರು ಕೊಟ್ಟ ಕಾರಣ ಸೂಕ್ತ ಆಗಿರಲಿಲ್ಲ ಎಂದು ಗಿಲ್ಲಿಗೆ ಅನಿಸಿದೆ. ಇಬ್ಬರ ಮಧ್ಯೆ ಈ ವಿಯಕ್ಕೆ ಚರ್ಚೆಗಳು ನಡೆದವು. ಆ ಬಳಿಕ ಗಿಲ್ಲಿ ನಟ ಅವರು ಕಳಪೆಗೆ ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಈ ವೇಳೆ ಏಟಿನ ಮೇಲೆ ಏಟನ್ನು ಕೊಟ್ಟಿದ್ದಾರೆ.
‘ನೀನು ಜೋಕರ್’ ಎಂದು ಅಶ್ವಿನಿ ಅವರು ಗಿಲ್ಲಿಗೆ ಹೇಳಿದರು. ಇದಕ್ಕೆ ತಿರುಗೇಟು ಕೊಟ್ಟ ಗಿಲ್ಲಿ, ‘ಹೌದು ನಾನು ಜೋಕರ್’ ಎಂಬುದನ್ನು ಒಪ್ಪಿಕೊಂಡರು. ಹಾಸ್ಯ ಶೋಗಳನ್ನು ಮಾಡುತ್ತಾ ಎಲ್ಲರನ್ನೂ ನಗಿಸೋ ಕೆಲಸ ಗಿಲ್ಲಿಯದ್ದು. ಈ ಕಾರಣದಿಂದಲೇ ಅವರು ತಮ್ಮನ್ನು ತಾವು ಜೋಕರ್ ಎಂದು ಕರೆದುಕೊಂಡರು.
ಅಶ್ವಿನಿ ಗೌಡ ಅವರು ಈವರೆಗೆ ಕ್ಯಾಪ್ಟನ್ ಆಗಿಯೇ ಇಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಈ ವಿಷಯ ಇಟ್ಟುಕೊಂಡು ಗಿಲ್ಲಿ ಕೌಂಟರ್ ಕೊಟ್ಟರು. ‘ನಿಮಗೆ ಈವರೆಗೆ ಕ್ಯಾಪ್ಟನ್ ಆಗೋಕೆ ಸಾಧ್ಯವಾಗಿಲ್ಲ’ ಎಂದರು. ಈ ಮಾತು ಅಶ್ವಿನಿಗೆ ಚುಚ್ಚಿದೆ.
ಇದನ್ನೂ ಓದಿ: ಈ ವಾರ ಬಿಗ್ ಬಾಸ್ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಫೈನಲ್ ಟಾಸ್ಕ್ ಅಲ್ಲಿ ಅಶ್ವಿನಿ ಹಾಗೂ ಧನುಷ್ ಆಡಬೇಕಿತ್ತು. ಇದಕ್ಕಾಗಿ ಪೋಸ್ಟರ್ ಹಾಕಲಾಗಿತ್ತು. ಇದನ್ನು ಅಶ್ವಿನಿ ಹೈಲೈಟ್ ಮಾಡಿದರು. ‘ನನ್ನ ಫೋಟೋ ಕೊನೆಪಕ್ಷ ಪೋಸ್ಟರ್ ಅಲ್ಲಾದರೂ ಬಂತು’ ಎಂದು ಹೆಮ್ಮೆಯಿಂದ ಬೀಗಿದರು. ಇದಕ್ಕೆ ಗಿಲ್ಲಿ ನಟ ಕೊಟ್ಟ ಕೌಂಟರ್ ಅವರಿಂದ ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ‘ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ ಅದ್ರಲ್ಲೇನಿದೆ’ ಎಂದರು. ಈ ಡೈಲಾಗ್ಗೆ ಅವರಿಂದ ಉತ್ತರ ಹೇಳಲು ಸಾಧ್ಯವಾಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:17 am, Sat, 3 January 26