ಬಿಗ್ ಬಾಸ್ ಪ್ರೋಮೋದಲ್ಲಿ ಸದಾ ಕಾಣಿಸಿಕೊಳ್ಳೋಕೆ ಹನುಮಂತನ ಬಳಿ ಇದೆ ಐಡಿಯಾ; ಶಾಕ್ ಆದ ಮನೆ ಮಂದಿ

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ, ಅವರ ನೇರ ನುಡಿ ಮತ್ತು ಮನೋರಂಜನೆಯಿಂದ ಜನರ ಮನಗೆದ್ದಿದ್ದಾರೆ. ಕುರಿ ಕಾಯುತ್ತಾ ಜೀವನ ನಡೆಸುತ್ತಿದ್ದ ಅವರು, ಈಗ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.

ಬಿಗ್ ಬಾಸ್ ಪ್ರೋಮೋದಲ್ಲಿ ಸದಾ ಕಾಣಿಸಿಕೊಳ್ಳೋಕೆ ಹನುಮಂತನ ಬಳಿ ಇದೆ ಐಡಿಯಾ; ಶಾಕ್ ಆದ ಮನೆ ಮಂದಿ
ಹನುಮಂತ

Updated on: Nov 14, 2024 | 7:22 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಹನುಮಂತ ಅವರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹಾಡುಗಳ ಮೂಲಕ ಎಲ್ಲರಿಗೂ ಮನರಂಜನೆ ನೀಡುತ್ತಿದ್ದಾರೆ. ಅವರು ಮುಗ್ಧನ ರೀತಿ ಇರೋದು ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಏನೇ ಇದ್ದರೂ ಓಪನ್ ಆಗಿ ಹೇಳುತ್ತಾರೆ. ಅವರಿಗೆ ಬಿಗ್ ಬಾಸ್ ಪ್ರೋಮೋದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂಬುದರ ಐಡಿಯಾ ಇದೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ.

ನವೆಂಬರ್ 13ರ ಎಪಿಸೋಡ್​ನಲ್ಲಿ ಒಂದು ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಪ್ರತಿ ಜೋಡಿ ಮಣ್ಣಿನಲ್ಲಿ ತಮ್ಮ ಹೆಸರನ್ನು ರಚಿಸಬೇಕು. ಈ ರೀತಿ ರಚಿಸಿದ ಬಳಿಕ ಅದಕ್ಕೆ ಎದುರಾಳಿಗಳು ಅಡಚಣೆ ಉಂಟು ಮಾಡಬಹುದು. ಈ ಟಾಸ್ಕ್ ಆಡುವಾಗ ಹನುಮಂತ ಜಾರಿ ಬಿದ್ದಿದ್ದಾರೆ. ಎಲ್ಲರೂ ಹನುಮಂತನ ಬಳಿ ಎಚ್ಚರಿಕೆಯಿಂದ ಆಡುವಂತೆ ಹೇಳಿದ್ದಾರೆ. ಇದಕ್ಕೆ ಅವರು ಕೊಟ್ಟ ಉತ್ತರ ಫನ್ನಿ ಆಗಿತ್ತು.

‘ಈ ರೀತಿ ಬಿದ್ದರೆ ಪ್ರೋಮೋ ಕಟ್ ಹಾಕ್ತಾರೆ’ ಎಂದು ಹನುಮಂತ ಅವರು ಹೇಳಿದ್ದಾರೆ. ಇದಕ್ಕೆ ಎಲ್ಲರೂ ನಕ್ಕಿದ್ದಾರೆ. ಬಿಗ್ ಬಾಸ್​ನಲ್ಲಿ ಆ ರೀತಿ ನಡೆಯುವುದು ಕೂಡ ನಿಜ. ಜಾರಿ ಬಿದ್ದಿದ್ದು, ಕಿತ್ತಾಟ ಮಾಡಿಕೊಂಡಿದ್ದರ ಒಂದು ಕ್ಲಿಪ್​ನ ಪ್ರೋಮೋದಲ್ಲಿ ಹೈಲೈಟ್ ಮಾಡಲಾಗುತ್ತದೆ. ಈ ತಂತ್ರ ಹನುಮಂತ ಅವರಿಗೆ ತಿಳಿದಿದೆ. ಆದರೆ, ನಿಜಕ್ಕೂ ಅವರು ಈ ರೀತಿ ಆಟ ಆಡುತ್ತಿಲ್ಲ.

ಇದನ್ನೂ ಓದಿ: ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಆದರೆ ಕಾದಿದೆ ಟ್ವಿಸ್ಟ್

ಹನುಮಂತ ಅವರು ನೇರ ಮಾತುಗಳಿಂದ ಇಷ್ಟ ಆಗುತ್ತಾರೆ. ಅವರು ಉಸ್ತುವಾರಿ ವಹಿಸಿಕೊಂಡಾಗ ನೀಡುತ್ತಿದ್ದ ನಿರ್ಧಾರಗಳ ಬಗ್ಗೆ ಅನೇಕರಿಗೆ ಮೆಚ್ಚುಗೆ ಇದೆ. ಅವರಿಂದಾಗಿ ಅನೇಕರಿಗೆ ಮನರಂಜನೆ ಸಿಗುತ್ತಿದೆ. ಹನುಮಂತ ಅವರು ಜೀ ಕನ್ನಡ ವೇದಿಕೆಯಲ್ಲಿ ಮಿಂಚಿದವರು. ಈಗ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಮೂಲತಃ ಹಾವೇರಿ ಅವರಾಗಿದ್ದು, ಕುರಿ ಕಾಯುವ ಕಾಯಕದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.