‘ಇಲ್ಲಿ ಎಲ್ಲರೂ ತಿಪ್ಪೆಗುಂಡಿ, ಕೆದರಿದ್ರೆ ಹೊಲಸು ಬರ್ತಾ ಇರುತ್ತೆ’; ಸ್ಪರ್ಧಿಗಳ ವಿರುದ್ಧ ಹರಿಹಾಯ್ದ ಹನುಮಂತ

|

Updated on: Nov 20, 2024 | 6:55 AM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತ ಅವರ ಆಟ ಅನೇಕರಿಗೆ ಇಷ್ಟವಾಗುತ್ತಿದೆ. ಕ್ಯಾಪ್ಟನ್ ಭವ್ಯಾ ಅವರು ವೈಯಕ್ತಿಕ ಕಾರಣಗಳಿಗಾಗಿ ಹನುಮಂತರನ್ನು ನಾಮಿನೇಟ್ ಮಾಡಿದರು. ಆದರೆ, ಹನುಮಂತ ಅವರು ಶಾಂತವಾಗಿ ಪ್ರತಿಕ್ರಿಯಿಸಿದರು.

‘ಇಲ್ಲಿ ಎಲ್ಲರೂ ತಿಪ್ಪೆಗುಂಡಿ, ಕೆದರಿದ್ರೆ ಹೊಲಸು ಬರ್ತಾ ಇರುತ್ತೆ’; ಸ್ಪರ್ಧಿಗಳ ವಿರುದ್ಧ ಹರಿಹಾಯ್ದ ಹನುಮಂತ
ಹನುಮಂತ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಆಟ ಆಡುವ ರೀತಿಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟ. ಯಾರಾದರೂ ಅವರನ್ನು ನಾಮಿನೇಟ್ ಮಾಡಿದರೆ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಅವರಿಗೆ ಯಾವುದೇ ಚಿಂತೆ ಇಲ್ಲ. ಮಂಗಳವಾರದ (ನವೆಂಬರ್ 19) ಎಪಿಸೋಡ್​ನಲ್ಲಿ ಕ್ಯಾಪ್ಟನ್ ಭವ್ಯಾ ಗೌಡ ಅವರು ಹನುಮಂತ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಈ ಬಗ್ಗೆ ಅವರು ತುಟುಕ್ ಪಿಟಕ್ ಎನ್ನಲಿಲ್ಲ. ಆದರೆ, ಆ ಬಳಿಕ ಈ ಬಗ್ಗೆ ಅವರು ಮಾತನಾಡಿದರು.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ನಾಮಿನೇಷನ್ ಪ್ರಕ್ರಿಯೆ ಭಿನ್ನವಾಗಿ ನಡೆದಿದೆ. ಒಬ್ಬರು ಮೂವರನ್ನು ನಾಮಿನೇಟ್ ಮಾಡಬೇಕಿತ್ತು. ಆ ಪೈಕಿ ಒಬ್ಬರನ್ನು ಹೊರಕ್ಕೆ ಇಡುವ ಅಧಿಕಾರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಶೋಭಾ ಶೆಟ್ಟಿ ಹಾಗೂ ರಜತ್ ಅವರಿಗೆ ಇತ್ತು. ಈ ಪ್ರಕ್ರಿಯೆಯ ಅನುಸಾರ ಚೈತ್ರಾ, ಮಂಜು, ತ್ರಿವಿಕ್ರಮ್, ಗೌತಮಿ, ಮೋಕ್ಷಿತಾ, ಧರ್ಮ ನಾಮಿನೇಟ್ ಆದರು.

ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಿ ಕ್ಯಾಪ್ಟನ್​ಗೆ ವಿಶೇಷ ಅಧಿಕಾರ ಇರುತ್ತದೆ. ಒಬ್ಬರನ್ನು ನಾಮಿನೇಟ್ ಮಾಡಲು ಅಥವಾ ನಾಮಿನೇಷನ್​ನಿಂದ ಬಚಾವ್ ಮಾಡುವ ಅಧಿಕಾರ ಇರುತ್ತದೆ. ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಭವ್ಯಾಗೆ ಬಿಗ್ ಬಾಸ್ ನೀಡಿದರು. ಇದರ ಪ್ರಕಾರ ಹನುಮಂತ ಅವರನ್ನು ಭವ್ಯಾ ನಾಮಿನೇಟ್ ಮಾಡಿದರು. ‘ಟಾಸ್ಕ್ ಬಗ್ಗೆ ನಾನು ಏನನ್ನೂ ಹೇಳಲ್ಲ. ವೈಯಕ್ತಿಕವಾಗಿ ಕೆಲವು ವಿಚಾರ ಇಷ್ಟ ಆಗುವುದಿಲ್ಲ. ಏನಾದರೂ ಹೇಳಿದ್ರೆ, ನಂದು ನಾನು ಹೇಳಿದ್ದೀನಿ, ನಿಂದು ಬಂದಾಗ ನೀನು ಹೇಳಿಕೋ ಎನ್ನುತ್ತಾರೆ’ ಎಂಬ ಕಾರಣ ನೀಡಿ ಭವ್ಯಾ ನಾಮಿನೇಟ್ ಮಾಡಿದರು.

ಇದನ್ನೂ ಓದಿ: ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಬಿಗ್ ಬಾಸ್ ಮಂದಿ

ಆ ಬಳಿಕ ಧನರಾಜ್ ಅವರು ಈ ಬಗ್ಗೆ ಹನುಮಂತ ಬಳಿ ಚರ್ಚೆ ಮಾಡಿದರು. ‘ಭವ್ಯಾ ನಿಮಗೆ ವೈಯಕ್ತಿಕ ಕಾರಣ ನೀಡಿ ನಾಮಿನೇಟ್ ಮಾಡಿದರು. ನೀವು ಕೂಡ ಟಾಸ್ಕ್ ಬದಲು ವೈಯಕ್ತಿಕ ಕಾರಣ ನೀಡಿ ನಾಮಿನೇಟ್ ಮಾಡಬೇಕಿತ್ತು’ ಎಂದು ಹೇಳಿದರು. ‘ಇಲ್ಲಿ ಎಲ್ಲರೂ ತಿಪ್ಪೆಗುಂಡಿ, ಅದನ್ನು ಕೆದರುತ್ತಿದ್ದರೆ ಹೊಲಸು ಬರುತ್ತಲೇ ಇರುತ್ತದೆ’ ಎಂದರು ಹನುಮಂತ. ಈ ಮೂಲಕ ಎಲ್ಲರೂ ಹಣೆಬರಹ ಒಂದೇ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:51 am, Wed, 20 November 24