‘ಯಾರೂ ಬರಿಗೈಯಲ್ಲಿ ಹೋಗ್ತಾ ಇಲ್ಲ’; ಟಾಪ್ 6 ಸ್ಪರ್ಧಿಗಳಿಗೆ ಸಿಗ್ತಿದೆ ಭರ್ಜರಿ ಹಣ

| Updated By: ರಾಜೇಶ್ ದುಗ್ಗುಮನೆ

Updated on: Jan 28, 2024 | 8:36 PM

ಐದನೇ ರನ್ನರ್ ಅಪ್​ ಆಗಿ ತುಕಾಲಿ ಸಂತೋಷ್ ಅವರು ಹೊರಗೆ ಬಂದಿದ್ದಾರೆ. ಅವರು ಖುಷಿಯಿಂದಲೇ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಇದನ್ನು ಸುದೀಪ್ ಘೋಷಣೆ ಮಾಡಿದರು.

‘ಯಾರೂ ಬರಿಗೈಯಲ್ಲಿ ಹೋಗ್ತಾ ಇಲ್ಲ’; ಟಾಪ್ 6 ಸ್ಪರ್ಧಿಗಳಿಗೆ ಸಿಗ್ತಿದೆ ಭರ್ಜರಿ ಹಣ
ಬಿಗ್ ಬಾಸ್ ಸ್ಪರ್ಧಿಗಳು
Follow us on

ಬಿಗ್ ಬಾಸ್​ನಲ್ಲಿ (Bigg Boss) ಇದೇ ಮೊದಲ ಬಾರಿ ಟಾಪ್​ ಐದು ಕಾನ್ಸೆಪ್ಟ್ ಬದಲು, ಟಾಪ್​ 6 ಕಾನ್ಸೆಪ್ಟ್ ತರಲಾಗಿದೆ. ಅಂದರೆ ಫಿನಾಲೆಯಲ್ಲಿ ಐವರ ಬದಲು ಆರು ಜನ ಇದ್ದಾರೆ. ವಿನ್ನರ್​ಗೆ ಮಾತ್ರ ಅಲ್ಲ ಟಾಪ್​ 6ರಲ್ಲಿ ಇರುವ ಎಲ್ಲರಿಗೂ ಹಣ ಸಿಗುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ಪ್ರತಿ ಸ್ಪರ್ಧಿಗೂ ಈ ಬಾರಿ ಹಣ ಸಿಗಲಿದೆ. ಹೀಗಾಗಿ ಯಾವ ಸ್ಪರ್ಧಿಗಳಿಗೂ ನಿರಾಸೆ ಆಗುತ್ತಿಲ್ಲ.

ಫಿನಾಲೆ ಎಪಿಸೋಡ್​​ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಅವರು ರನ್ನರ್​ಅಪ್​ಗಳಿಗೂ ಹಣ ಸಿಗಲಿದೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಯಾರಿಗೆ ಎಷ್ಟು ಲಕ್ಷ ರೂಪಾಯಿ ಸಿಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಇದನ್ನು ಕೇಳಿ ದೊಡ್ಮನೆ ಒಳಗೆ ಇರುವ ಸ್ಪರ್ಧಿಗಳು ಹಾಗೂ ಶನಿವಾರ (ಜನವರಿ 28) ಎಪಿಸೋಡ್​​ನಲ್ಲಿ ಔಟ್ ಆಗಿರುವ ತುಕಾಲಿ ಸಂತೋಷ್ ಅವರು ಖುಷಿಪಟ್ಟಿದ್ದಾರೆ.

ಐದನೇ ರನ್ನರ್ ಅಪ್​ ಆಗಿ ತುಕಾಲಿ ಸಂತೋಷ್ ಅವರು ಹೊರಗೆ ಬಂದಿದ್ದಾರೆ. ಅವರು ಖುಷಿಯಿಂದಲೇ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಇದನ್ನು ಸುದೀಪ್ ಘೋಷಣೆ ಮಾಡಿದರು. ಅವರು ವೇದಿಕೆ ಮೇಲೆ ಬಂದು ಚೆಕ್ ತೆಗೆದುಕೊಂಡು ಹೋದರು. ಇನ್ನು ನಾಲ್ಕನೇ ರನ್ನರ್ ಅಪ್​ಗೂ ಎರಡು ಲಕ್ಷ ರೂಪಾಯಿ ಸಿಗುತ್ತಿದೆ.

ಮೂರನೇ ರನ್ನರ್ ಅಪ್​ಗೆ ಸ್ವಲ್ಪ ಹೆಚ್ಚಿನ ಹಣ ಸಿಗುತ್ತಿದೆ. ಐದು ಲಕ್ಷ ರೂಪಾಯಿ ಹಣವನ್ನು ಅವರು ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ. ಎರಡನೇ ರನ್ನರ್​ಅಪ್​ಗೆ ಬರೋಬ್ಬರಿ ಏಳು ಲಕ್ಷ ರೂಪಾಯಿ ಸಿಗಲಿದೆ. ಮೊದಲ ರನ್ನರ್ ಅಪ್​ಗೆ 10 ಲಕ್ಷ ರೂಪಾಯಿ ಹಣ ಸಿಗಲಿದೆ. ಇದನ್ನು ಕೇಳಿ ಸ್ಪರ್ಧಿಗಳು ಖುಷಿ ಪಟ್ಟಿದ್ದಾರೆ. ಮೊದಲ ರನ್ನರ್​ಅಪ್​ಗೆ ಬೌನ್ಸ್ ಬೈಕ್ ಕೂಡ ಸಿಗುತ್ತಿದೆ.

ಇನ್ನು ವಿನ್ನರ್​ಗೆ ಸಾಕಷ್ಟು ಧಮಾಕಾ ಇದೆ. ಈ ಬಗ್ಗೆ ಕಿಚ್ಚ ಸುದೀಪ್ ಈ ಮೊದಲೇ ಘೋಷಣೆ ಮಾಡಿದ್ದರು. ವಿನ್ನರ್​ಗೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಸಿಗುತ್ತಿದೆ. ಇದರ ಜೊತೆಗೆ ಮಾರುತಿ ಸುಜುಕಿ ಬ್ರೇಜಾ ಕಾರು ಸಿಗುತ್ತಿದೆ. ಜೊತೆಗೆ ಒಂದು ಬೌನ್ಸ್​ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ಈ ಕುರಿತು ಕಿಚ್ಚ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Tukali Santhosh: ಈ 5 ಕಾರಣದಿಂದಲೇ ತುಕಾಲಿ ಸಂತೋಷ್​ಗೆ ಮಿಸ್​ ಆಯ್ತು ಬಿಗ್ ಬಾಸ್​ ಟ್ರೋಫಿ

ಬಿಗ್ ಬಾಸ್ ಫೈನಲ್​ಡೇಗೆ ಉಳಿದುಕೊಂಡಿದ್ದು ಐದು ಮಂದಿ ಮಾತ್ರ. ವರ್ತೂರು ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಆಟ ಮುಂದುವರಿಸಿದ್ದಾರೆ. ಇವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಇಂದು (ಜನವರಿ 28) ಮಧ್ಯರಾತ್ರಿ ವೇಳೆಗೆ ಈ ವಿಚಾರ ಅನೌನ್ಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ