AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೆಯಲ್ಲಿ ಮೊದಲ ಬಾರಿಗೆ ಶಾಂತಿ ಸಿಕ್ಕಿದೆ’; ಕೊನೆಯ ದಿನದ ಅನುಭವ ವಿವರಿಸಿದ ವಿನಯ್ ಗೌಡ

ಫಿನಾಲೆ ಸಮಯದಲ್ಲಿ ಐವರು ಒಟ್ಟಿಗೆ ಕುಳಿತು ಕಾಫಿ ಹೀರಿದ್ದಾರೆ. ಆರಾಮಾಗಿ ಸಮಯ ಕಳೆದಿದ್ದಾರೆ. ವಿನಯ್ ಗೌಡ ಅವರಿಗೆ ಈ ಅನುಭವ ಖುಷಿ ನೀಡಿದೆ.

‘ಮನೆಯಲ್ಲಿ ಮೊದಲ ಬಾರಿಗೆ ಶಾಂತಿ ಸಿಕ್ಕಿದೆ’; ಕೊನೆಯ ದಿನದ ಅನುಭವ ವಿವರಿಸಿದ ವಿನಯ್ ಗೌಡ
ವಿನಯ್
ರಾಜೇಶ್ ದುಗ್ಗುಮನೆ
|

Updated on: Jan 28, 2024 | 8:02 PM

Share

ವಿನಯ್ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ವೈಲೆಂಟ್ ಆಗಿದ್ದಿದೆ. ಅವರಿಂದ ಇಡೀ ಮನೆ ಶಾಂತಿ ಕಳೆದುಕೊಂಡ ಉದಾಹರಣೆ ಇದೆ. ಈಗ ವಿನಯ್ ಗೌಡ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಶಾಂತಿ ಸಿಕ್ಕಿದೆ. ಅದೂ ಫಿನಾಲೆ ದಿನದಂದು. ಈ ಬಗ್ಗೆ ಫಿನಾಲೆ ಎಪಿಸೋಡ್​ನಲ್ಲಿ ವಿನಯ್ ಅವರು ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಎದುರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವಿನಯ್ ಗೌಡ, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಫಿನಾಲೆ ವೀಕ್​​ನಲ್ಲಿ ಈ ಐವರು ಒಟ್ಟಿಗೆ ಕುಳಿತು ಕಾಫಿ ಹೀರಿದ್ದಾರೆ. ಆರಾಮಾಗಿ ಸಮಯ ಕಳೆದಿದ್ದಾರೆ. ವಿನಯ್ ಗೌಡ ಅವರಿಗೆ ಈ ಅನುಭವ ಖುಷಿ ನೀಡಿದೆ. ಈ ಬಗ್ಗೆ ಹೇಳಿಕೊಂಡಿದ್ದಾರೆ.

‘ನಿನ್ನೆ ಹಾಯಾಗಿ ಸಮಯ ಕಳೆದೆವು. ಸಾಕಷ್ಟು ಗಾಳಿ ಬೀಸುತ್ತಿತ್ತು. ಮನೆಯಲ್ಲಿ ಮೊದಲ ಬಾರಿಗೆ ಶಾಂತಿ ಸಿಕ್ಕಿತು’ ಎಂದಿದ್ದಾರೆ ವಿನಯ್. ‘ಪಾಪ ಹೊರಗೆ ಹೋದವರು ಅಪಾರ್ಥ ಮಾಡಿಕೊಳ್ಳಬಹುದು. ಅವರು ಇಲ್ಲ ಎನ್ನುವ ಕಾರಣಕ್ಕೆ ಶಾಂತಿ ಸಿಕ್ಕಿದೆ ಎಂದರೆ ಬೇರೆ ರೀತಿ ಅರ್ಥ ಆಗುತ್ತದೆ’ ಎಂದರು ಸುದೀಪ್. ‘ಆ ರೀತಿ ಅಲ್ಲ ಸರ್. ನನಗೆ ನಿಜಕ್ಕೂ ಸೈಲೆಂಟ್ ಎನಿಸಿತು. ಇಷ್ಟು ದಿನ ಟಾಸ್ಕ್ ಅದು ಇದೂ ಅಂತ ಬ್ಯುಸಿ ಇರುತ್ತಿದ್ದೆವು. ಆದರೆ, ಈಗ ಆ ರೀತಿ ಅಲ್ಲ. ಅದಕ್ಕೆ ಸೈಲೆಂಟ್​ ಎನಿಸಿತು. ಸರಿಯಾಗಿ ನಿದ್ದೆ ಬರಲೇ ಇಲ್ಲ’ ಎಂದಿದ್ದಾರೆ ವಿನಯ್ ಗೌಡ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಹಿಂದೆಂದೂ ಕೊಟ್ಟಿರದ ಆಫರ್​ ಕೊಟ್ಟ ವಿನಯ್ ಗೌಡ

ವಿನಯ್ ಗೌಡ ಅವರು ಟಾಪ್​ ಐದರಲ್ಲಿ ಒಬ್ಬರಾಗಿದ್ದಾರೆ. ಅವರು ಕಪ್ ಹಿಡಿದುಕೊಂಡು ಮನೆಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಈ ಕನಸು ನನಸಾಗುತ್ತದೆಯೋ ಅಥವಾ ಇಲ್ಲವೋ ಎಂಬುದು ಇಂದು ರಾತ್ರಿ ಗೊತ್ತಾಗಲಿದೆ. ಇಂದು (ಜನವರಿ 28) ಫಿನಾಲೆ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾ ಒಟಿಟಿಯಲ್ಲೂ ಎಪಿಸೋಡ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ