‘ಫುಟ್ಪಾತ್ನಲ್ಲಿ ನಿದ್ದೆ’; ಅದೆಷ್ಟೋ ಕಷ್ಟ ಕಂಡು ಇಲ್ಲಿಯವರೆಗೆ ಬಂದಿದ್ದಾರೆ ತುಕಾಲಿ ಸಂತೋಷ್
ಹಾಸನದ ಬಳಿಯ ಹೊಳೆನರಸೀಪುರದವರು ತುಕಾಲಿ ಸಂತೋಷ್. ಊರಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಇದ್ದರು. ಅವರ ತಂದೆ ನಿಂಬೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ತುಕಾಲಿ ಸಂತೋಷ್ ಡಿಪ್ಲೋಮ ಮೊದಲ ಸೆಮಿಸ್ಟರ್ ಓದುವಾಗ ಅವರ ತಂದೆ ತೀರಿಕೊಂಡರು.
ಬಿಗ್ ಬಾಸ್ ಮನೆಯಲ್ಲಿ 112 ದಿನಗಳ ಕಾಲ ಇದ್ದ ತುಕಾಲಿ ಸಂತೋಷ್ (Tukali Santosh) ಅವರು ಟಾಪ್ ಆರರಲ್ಲಿ ಸ್ಥಾನ ಪಡೆದಿದ್ದರು. ಫಿನಾಲೆಯಿಂದ ಅವರು ಮೊದಲು ಔಟ್ ಆದರು. ಬಿಗ್ ಬಾಸ್ನಿಂದ ಹೊರ ಬಂದಿರುವುದು ಅವರಿಗೆ ಯಾವುದೇ ಬೇಸರ ಇಲ್ಲ. ಅವರು ಖುಷಿ ಖುಷಿಯಿಂದಲೇ ವೇದಿಕೆ ಏರಿದ್ದಾರೆ. ಅವರನ್ನು ಕಿಚ್ಚ ಸುದೀಪ್ ಅವರು ತುಂಬಾನೇ ಖುಷಿಯಿಂದ ಸ್ವಾಗತಿಸಿದ್ದಾರೆ. ತುಕಾಲಿ ಸಂತೋಷ್ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ. ಅವರು ಸಾಕಷ್ಟು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ಬಂದರು. ಅವರು ಆರಂಭದಲ್ಲಿ ಕಾಮಿಡಿ ಮಾಡುತ್ತಾ ಇದ್ದರು. ಇದರಿಂದ ಅನೇಕರಿಗೆ ನೋವುಂಟಾಗಿತ್ತು. ಈ ಕಾರಣಕ್ಕೆ ಅನೇಕರು ಅವರ ವಿರುದ್ಧ ಸಖತ್ ಸಿಟ್ಟಾದರು. ಹೀಗಾಗಿ, ಏನು ಮಾಡಬೇಕು ಎಂಬುದೇ ಗೊತ್ತಾಗಿಲ್ಲ. ಹೀಗಾಗಿ ಸೈಲೆಂಟ್ ಆದರು. ನಂತರ ಅವರು ಟ್ರ್ಯಾಕ್ಗೆ ಮರಳಿದರು. ಅವರಿಗೆ ವರ್ತೂರು ಸಂತೋಷ್ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಎಲ್ಲರನ್ನೂ ನಗಿಸಲು ಪ್ರಯತ್ನಿಸುವ ಸಂತೋಷ್ ಅವರು ಸಾಕಷ್ಟು ಕಷ್ಟಗಳನ್ನು ಕಂಡಿದ್ದಾರೆ. ರಸ್ತೆಬದಿಗಳಲ್ಲಿ ಮಲಗಿ ಅವರು ದಿನ ಕಳೆದಿದ್ದಿದೆ.
ಹಾಸನದ ಬಳಿಯ ಹೊಳೆನರಸೀಪುರದವರು ತುಕಾಲಿ ಸಂತೋಷ್. ಊರಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಇದ್ದರು. ಅವರ ತಂದೆ ನಿಂಬೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ತುಕಾಲಿ ಸಂತೋಷ್ ಡಿಪ್ಲೋಮ ಮೊದಲ ಸೆಮಿಸ್ಟರ್ ಓದುವಾಗ ಅವರ ತಂದೆ ತೀರಿಕೊಂಡರು. ಹೀಗಾಗಿ ಅವರ ತಾಯಿ ನಿಂಬೆ ಹಣ್ಣಿನ ವ್ಯಾಪಾರ ಆರಂಭಿಸಿದರು. ಅವರಿಗೆ ಮಲಗಲು ಜಾಗ ಇರಲಿಲ್ಲ. ಫುಟ್ಪಾತ್ನಲ್ಲಿ ನಿದ್ರಿಸಿ ಜೀವನ ಮುನ್ನಡೆಸುತ್ತಿದ್ದರು. ‘ಸರ್ವರ್ ಸೋಮಣ್ಣ’ ಸಿನಿಮಾ ನೋಡಿದ ತುಕಾಲಿ ಸಂತೋಷ್ ತಾಯಿ, ತಮ್ಮ ಮಗನೂ ಹಾಸ್ಯ ನಟ ಆಗಬೇಕು ಎಂದು ಕನಸು ಕಂಡಿದ್ದರು. ಈ ಆಸೆ ಈಡೇರಿದೆ. ಅನೇಕ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದು ತುಕಾಲಿ ಸಂತೋಷ್ ಎಂಟ್ರಿ ಕೊಟ್ಟ ಏಳನೇ ರಿಯಾಲಿಟಿ ಶೋ. ಅವರು ಯಾವ ರಿಯಾಲಿಟಿ ಶೋಗಳಿಂದಲೂ ಅರ್ಧಕ್ಕೆ ಬಂದವರಲ್ಲ. ‘ಬಿಗ್ ಬಾಸ್’ ಕೂಡ ಕೊನೆಯ ಹಂತ ತಲುಪಿ ಬಂದಿದ್ದಾರೆ. ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಬೇಕು ಎಂದು ಅವರು ಕನಸು ಕಂಡಿದ್ದಾರೆ.
ಇದನ್ನೂ ಓದಿ: ಈ 5 ಕಾರಣದಿಂದಲೇ ತುಕಾಲಿ ಸಂತೋಷ್ಗೆ ಮಿಸ್ ಆಯ್ತು ಬಿಗ್ ಬಾಸ್ ಟ್ರೋಫಿ
ಬಿಗ್ ಬಾಸ್ನಲ್ಲಿ ಸದ್ಯ ವಿನಯ್ ಗೌಡ, ವರ್ತೂರು ಸಂತೋಷ್, ಕಾರ್ತಿಕ್ ಗೌಡ, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಇದ್ದಾರೆ. ಈ ಬಾರಿಯ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ. ಇಂದು (ಜನವರಿ 28) ರಾತ್ರಿ 7:30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ