Honganasu: ಗಂಡನ ಮನೆ ಸೇರಿದ ಜಗತಿ; ದೇವಯಾನಿಗೆ ಬುದ್ಧಿ ಕಲಿಸುತ್ತಾಳಾ?

Honganasu Serial Update: ‘ನನಗೆ ಒಳ್ಳೆಯ ತಾಯಿಯಂತೂ ಆಗಿಲ್ಲ. ಆದರೆ ತಂದೆಗೆ ಒಳ್ಳೆಯ ಪತ್ನಿಯಾಗಿ ಆದರೂ ಈ ಮನೆಯಲ್ಲಿರಿ’ ಎಂದ ರಿಷಿ. ಮಗನ ಚುಚ್ಚು ಮಾತು ಜಗತಿಯನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿತು.

Honganasu: ಗಂಡನ ಮನೆ ಸೇರಿದ ಜಗತಿ; ದೇವಯಾನಿಗೆ ಬುದ್ಧಿ ಕಲಿಸುತ್ತಾಳಾ?
ಹೊಂಗನಸು ಸೀರಿಯಲ್
Updated By: ಮದನ್​ ಕುಮಾರ್​

Updated on: Nov 16, 2022 | 9:27 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿಯ ಆಸೆಯಂತೆ ಮಹೇಂದ್ರನನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಯಲ್ಲೇ ತಂದೆಯ ಹುಟ್ಟುಹಬ್ಬ ಆಚರಣೆ ಮಾಡುವ ನೆಪದಲ್ಲಿ ಅಪ್ಪನನ್ನು ಮನೆಗೆ ಕರೆಸಿದ್ದಾನೆ ರಿಷಿ. ಅಪ್ಪನ ಆಸೆಯಂತೆ ಜಗತಿಯನ್ನು ಸಹ ಮನೆಯಲ್ಲೇ ಇರುವಂತೆ ಹೇಳಿದ ರಿಷಿ. ಆದರೆ ಮಗನ ನಿರ್ಧಾರದಿಂದ ಜಗತಿ ಗೊಂದಲಕ್ಕೆ ಸಿಲುಕಿದ್ದಾಳೆ. ರಿಷಿ ಯಾಕೆ ತನ್ನನ್ನು ಮನೆಗೆ ಕರೆಸಿದ್ದಾನೆ ಎಂದು ಯೋಚಿಸುತ್ತಿದ್ದಾಳೆ.

ರಿಷಿ ಹೇಳಿದ ಹಾಗೆ ಜಗತಿ ಕೂಡ ಮಹೇಂದ್ರನ ಮನೆಯಲ್ಲೇ ಇರುವಂತೆ ಆಗಿದೆ. ರಿಷಿಗೆ ‘ನನ್ನನ್ನು ಯಾಕೆ ಈ ಮನೆಗೆ ಕರೆದುಕೊಂಡು ಬಂದೆ’ ಎಂದು ಪ್ರಶ್ನೆ ಮಾಡಿದಳು ಜಗತಿ. ‘ಅಪ್ಪನ ಆಸೆ ಈಡೇರಿಸಲು’ ಎಂದ ರಿಷಿ ತಂದೆಯ ಪತ್ನಿಯಾಗಿ ಈ ಮನೆಯಲ್ಲೇ ಇರಿ ಎಂದು ಜಗತಿಗೆ ಹೇಳಿದ. ‘ತಂದೆಯ ಎಲ್ಲಾ ಆಸೆಯನ್ನು ಈಡೇರಿಸುತ್ತೇನೆ. ಆದರೆ ಒಂದು ಆಸೆಯನ್ನು ಬಿಟ್ಟು’ ಎಂದು ಜಗತಿಗೆ ರಿಷಿ ಚುಚ್ಚು ಮಾತಾಡಿದ. ತನ್ನನ್ನ ತಾಯಿ ಎಂದು ಯಾವತ್ತೂ ಒಪ್ಪಿಕೊಳ್ಳಲ್ಲ ಎಂದು ಗೊತ್ತು ಅಂತ ಜಗತಿ ಮನಸ್ಸಲ್ಲೇ ಅಂದುಕೊಂಡಳು. ‘ನನಗೆ ಒಳ್ಳೆಯ ತಾಯಿ ಅಂತೂ ಆಗಿಲ್ಲ. ಆದರೆ ತಂದೆಗೆ ಒಳ್ಳೆಯ ಪತ್ನಿಯಾಗಿ ಆದರೂ ಈ ಮನೆಯಲ್ಲಿ ಇರಿ’ ಎಂದು ಹೇಳಿ ರಿಷಿ ಹೊರಟು ಹೋದ. ಮಗನ ಚುಚ್ಚು ಮಾತು ಜಗತಿಯನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿತು.

ಬೆಳಗ್ಗೆ ಎದ್ದು ನೋಡಿದ್ರೆ ಜಗತಿ ಮನೆಯಿಂದ ಕಾಣೆಯಾಗಿದ್ದಳು. ಜಗತಿಯನ್ನು ಎಲ್ಲಾ ಕಡೆ ಹುಡುಕಿ ಸುಸ್ತಾದ ಮಹೇಂದ್ರ ಅಡುಗೆ ಮನೆಗೆ ಬಂದ. ಅಷ್ಟರಲ್ಲೇ ದೇವಯಾನಿ ಕೂಡ ಎಂಟ್ರಿ ಕೊಟ್ಟಳು.  ಏನು ಮಹೇಂದ್ರ ಎಂದು ವಿಚಾರಿಸಿದಳು. ‘ಜಗತಿ ಮನೆಯಲ್ಲಿ ಇಲ್ಲ’ ಎಂದು ಹೇಳುತ್ತಿದ್ದಂತೆ ದೇವಯಾನಿ ಕೂಗುತ್ತಾ ಗಂಡ ಮತ್ತು ರಿಷಿ ಇದ್ದ ಜಾಗಕ್ಕೆ ಓಡಿದಳು. ಗಾಬರಿಯಾದ ರಿಷಿ ಏನು ದೊಡ್ಡಮ್ಮ ಎಂದು ಪ್ರಶ್ನಿಸಿದ. ‘ಜಗತಿ ಮನೆಯಲ್ಲಿ ಇಲ್ಲ, ಹೇಳದೆ ಕೇಳದೆ ಹೊರಟು ಹೋಗಿದ್ದಾಳೆ’ ಎಂದಳು. ‘ರಿಷಿ ಮಾತಿಗೆ ಬೆಲೆ ಕೊಡದೆ ಹೋದಳು. ಮಹೇಂದ್ರನಿಗೂ ಹೇಳದೆ ಹೋಗಿದ್ದಾಳೆ ಅಂದರೆ ಅವಳು ಯಾರಿಗೆ ಗೌರವ ಕೊಡುತ್ತಾಳೆ’ ಎಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿಯುವಂತೆ ದೇವಯಾನಿ ಮಾತಾಡಿದಳು. ಅಷ್ಟರಲ್ಲೇ ಜಗತಿ ವಸುಧರಾ ಜೊತೆ ಎಂಟ್ರಿ ಕೊಟ್ಟಳು. ಲಗೇಜ್ ಸಮೇತ ಬಂದ ಜಗತಿ ನೋಡಿ ದೇವಯಾನಿ ಶಾಕ್ ಆದಳು.

‘ಎಲ್ಲಿಗೆ ಹೋಗಿದ್ದೆ ಜಗತಿ’ ಎಂದು ಮಹೇಂದ್ರ ಓಡೋಡಿ ಬಂದು ಕೇಳಿದ. ವಸು ಒಬ್ಬಳೇ ಇದ್ದಳು ಹಾಗಾಗಿ ಹೋಗಿದ್ದೆ ಎಂದು ಜಗತಿ ಉತ್ತರಿಸಿದಳು. ಜಗತಿ ವಾಪಾಸ್ ಬಂದಿರುವುದು ಮನೆಯವರೆಲ್ಲರಿಗೂ ಖುಷಿ ನೀಡಿತು. ಜಗತಿ ಅಡುಗೆ ಮಾಡಿ ಕಾಲೇಜಿಗೆ ತೆಗೆದುಕೊಂಡು ಹೋಗುತ್ತಿದ್ದಳು. ಅದನ್ನು ನೋಡಿದ ದೇವಯಾನಿ, ‘ನೀನು ತೆಗೆದುಕೊಂಡು ಹೋದ ಊಟವನ್ನು ರಿಷಿ ತಿನ್ನಲ್ಲ. ಮತ್ಯಾಕೆ ತೆಗೆದುಕೊಂಡು ಹೋಗುತ್ತೀಯ’ ಎಂದು ಜಗತಿಯನ್ನು ಕೆಣಕಿದಳು. ದೇವಯಾನಿಗೆ ಸರಿಯಾಗಿ ಟಾಂಗ್ ಕೊಟ್ಟ ಜಗತಿ ಲಂಚ್ ಬಾಕ್ಸ್ ಹಿಡಿದು ಹೊರಟಳು.

ಮಹೇಂದ್ರ, ಜಗತಿ ಮತ್ತು ಪಣೀಂದ್ರ ಎಲ್ಲರೂ ಒಟ್ಟಿಗೆ ಊಟ ಮಾಡಲು ಸಜ್ಜಾಗಿದ್ದರು. ಜಗತಿ ಇದ್ದಿದ್ದು ನೋಡಿ ರಿಷಿ ಆಮೇಲೆ ಊಟ ಮಾಡುವುದಾಗಿ ಹೇಳಿ ಹೊರಟ. ಮಹೇಂದ್ರ ಎಷ್ಟೇ ಕರೆದರೂ ಬೇಡ ಎಂದು ಹೇಳಿದ. ಇತ್ತ ವಸು ಕೂಡ ಊಟ ಮಾಡದೆ ಹಾಗೆ ಕುಳಿತ್ತಿದ್ದಳು. ವಸುಧರಾಳನ್ನು ಊಟಕ್ಕೆ ಕರೆದ ರಿಷಿ. ಜಗತಿ ಜೊತೆ ಊಟ ಮಾಡಲು ನಿರಾಕರಿಸುತ್ತಿರುವ ರಿಷಿ ತಾಯಿ ಅಂತ ಒಪ್ಪಿಕೊಳ್ಳುತ್ತಾನಾ? ಜಗತಿ ಜೊತೆ ಮಾತನಾಡುತ್ತಾನಾ ಎಂದು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.