ಹೊಂಗನಸು: ತಾನು ಧರಿಸಿದ ಬಟ್ಟೆ ಜಗತಿಯ ಗಿಫ್ಟ್ ಅಂತ ತಿಳಿದರೂ ಸುಮ್ಮನಾದ ರಿಷಿ; ದೇವಯಾನಿಗೆ ಶಾಕ್

Honganasu Serial Update: ಮನೆಯವರ ಸಂತಸವನ್ನು ದೇವಯಾನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಜಗತಿಯನ್ನು ಮನೆಯಿಂದ ಓಡಿಸಬೇಕೆಂದು ಆಕೆ ಪ್ಲ್ಯಾನ್ ಮಾಡುತ್ತಿದ್ದಾಳೆ.

ಹೊಂಗನಸು: ತಾನು ಧರಿಸಿದ ಬಟ್ಟೆ ಜಗತಿಯ ಗಿಫ್ಟ್ ಅಂತ ತಿಳಿದರೂ ಸುಮ್ಮನಾದ ರಿಷಿ; ದೇವಯಾನಿಗೆ ಶಾಕ್
ಹೊಂಗನಸು ಸೀರಿಯಲ್
Updated By: ಮದನ್​ ಕುಮಾರ್​

Updated on: Oct 08, 2022 | 8:45 AM

ಸಂಭ್ರಮದಲ್ಲಿ ಎಲ್ಲರೂ ಹಬ್ಬದ ಊಟ ಮಾಡುತ್ತಿದ್ದರು. ಎಲ್ಲರೂ ತುಂಬಾ ಸುಂದರವಾಗಿ ರೆಡಿಯಾಗಿದ್ದರು. ‘ಯಾರು ತುಂಬಾ ಚೆನ್ನಾಗಿ ರೆಡಿಯಾಗಿದ್ದಾರೆ ಹೇಳು’ ಎಂದು ರಿಷಿಗೆ ಗೌತಮ್ ಕೇಳಿದ. ವಸೂಧರಾ ಅಂತ ಹೇಳಲು ಗೌತಮ್ ಬೇಕು ಅಂತಾನೆ ಹೀಗೆ ಕೇಳುತ್ತಿದ್ದಾನೆ ಎಂದು ರಿಷಿ ಅಂದುಕೊಳ್ಳುತ್ತಾಳೆ. ರಿಷಿ ನೀನೆ ಮೊದಲು ಹೇಳು ಎಂದು ಗೌತಮ್ ಹೇಳಿದ. ರಿಷಿ ಎಲ್ಲರನ್ನೂ ನೋಡಿ ದೊಡ್ಡಮ್ಮ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ ಎಂದು ದೇವಯಾನಿ ಹೆಸರು ಹೇಳಿದ. ರಿಷಿಯ ಮಾತಿನಿಂದ ಹಿಗ್ಗಿದ ದೇವಯಾನಿ ‘ಯಾವತ್ತೂ ನನ್ನನ್ನು ಬಿಟ್ಟುಕೊಡುವುದಿಲ್ಲ ನನ್ನ ಕಂದ’ ಎಂದು ರಿಷಿಯನ್ನು ಹೊಗಳಿದಳು. ಬಳಿಕ ಗೌತಮ್ ಸರದಿ, ವಸೂಧರಾಳ ಹೆಸರು ಹೇಳುತ್ತಾನೆ ಅಂತ ಎಲ್ಲರೂ ಊಹಿಸಿದ್ದರು. ಆದರೆ ಗೌತಮ್ ತನ್ನ ಗೆಳೆಯ ರಿಷಿ ಹೆಸರು ಹೇಳಿ ಅಚ್ಚರಿ ಮೂಡಿಸಿದ.

ಗೌತಮ್ ಮಾತಿಗೆ ಜಗತಿ ತುಂಬಾ ಸಂತಸ ಪಟ್ಟಳು. ಬಟ್ಟೆ ತುಂಬಾ ಸುಂದರವಾಗಿದೆ ಯಾರು ಆಯ್ಕೆ ಮಾಡಿದ್ದೆಂದು ರಿಷಿಯನ್ನು ಕೇಳಿದ. ವಸೂಧರಾ ಕೊಟ್ಟ ಗಿಫ್ಟ್ ಎಂದು ಹೇಗೆ ಹೇಳಲಿ ಅಂತ ರಿಷಿ ಯೋಚಿಸುತ್ತಿದ್ದ. ಅಷ್ಟರಲ್ಲೇ ದೇವಯಾನಿ, ಜಗತಿ ಹೆಸರು ಹೇಳಿದಳು. ತಾನು ಧರಿಸಿದ್ದ ಬಟ್ಟೆ ಜಗತಿ ಆಯ್ಕೆನ ಎಂದು ಗೊತ್ತಾಗಿ ರಿಷಿಗೆ ಶಾಕ್ ಆಯಿತು.

ರಿಷಿ ಕೋಪ ಮಾಡಿಕೊಂಡು ಜಗತಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ ಅಂತ ದೇವಯಾನಿ ಭಾವಿಸಿದ್ದಳು. ಆದರೆ ವಸೂಧರಾಗೆ ಕೋಪ ಮಾಡಿಕೊಳ್ಳುವುದಿಲ್ಲ ಎಂದು ರಿಷಿ ಮಾತು ಕೊಟ್ಟಿದ್ದರಿಂದ ಏನೂ ಹೇಳದೇ ಸುಮ್ಮನೆ ಊಟ ಮಾಡಿದ. ರಿಷಿಯ ಮೌನ ದೇವಯಾನಿಗೆ ಅಚ್ಚರಿ ಮೂಡಿಸಿತು. ತನ್ನ ಪ್ಲಾನ್ ವರ್ಕೌಟ್ ಆಗಿಲ್ಲ ಎಂದು ಮತ್ತಷ್ಟು ನೊಂದುಕೊಂಡಳು.

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಊಟದ ಬಳಿಕ ಜಗತಿ ತನ್ನ ಪತಿ ಮಹೇಂದ್ರನ ಕೈ ಹಿಡಿದು ಓಡಾಡುತ್ತಿದ್ದಳು. ಇಬ್ಬರನ್ನೂ ನೋಡಿದ ದೇವಯಾನಿ, ಮನೆಯಲ್ಲಿ ಗೌತಮ್ ಇದ್ದಾನೆ ಹೀಗೆಲ್ಲ ಕೈ ಕೈ ಹಿಡಿದು ಓಡಾಡಿ ಮನೆ ಮರ್ಯಾದೆ ಕಳೆಯಬೇಡಿ ಎಂದು ರೇಗಿದಳು. ಅದಕ್ಕೆ ಮಹೇಂದ್ರ, ‘ಯಾರಿಗೋ ಭಯ ಪಟ್ಟುಕೊಂಡು ನಾವಿಲ್ಲಿ ಇಲ್ಲ, ರಿಷಿ ಮನಸ್ಸು ನೋಯಿಸಬಾರದು ಎಂದು ಸೈಲೆಂಟ್ ಆಗಿದ್ದೀವಿ’ ಎಂದು ದೇವಯಾನಿಗೆ ತಿರುಗೇಟು ನೀಡಿ ಹೊರಟ. ಬಳಿಕ ದೇವಯಾನಿ, ‘ಯಾರೂ ಇಲ್ಲ ಅಂತ ಮಹೇಂದ್ರನ ರೂಮಿಗೆ ಹೋಗಬೇಡ’ ಎಂದು ಜಗತಿಗೆ ಟಾಂಗ್ ಕೊಟ್ಟಳು. ಗರಂ ಆದ ಜಗತಿ, ‘ನಿಮ್ಮ ಮಾತು ಹದ್ದುಮೀರಿದ್ರೆ ನಾನು ಮರ್ಯಾದೆ ಬಿಟ್ಟು ಮಾತನಾಡಬೇಕಾಗುತ್ತೆ. ನಿಮ್ಮನ್ನು ಕಂಡರೆ ಭಯ ಅಂತಲ್ಲ. ರಿಷಿಗಾಗಿ ಸೈಲೆಂಟ್ ಆಗಿರುವುದು’ ಎಂದು ವಾರ್ನ್ ಮಾಡಿದಳು. ಆಗ ರಿಷಿ ಎಂಟ್ರಿ ಕೊಟ್ಟ. ‘ಇಷ್ಟೊತ್ತಿಗೆ ಏನು ಮಾಡುತ್ತಿದ್ದೀರಿ ದೊಡ್ಡಮ್ಮ’ ಎಂದು ಕೇಳಿದ. ಅದಕ್ಕೆ ಜಗತಿ ಇಲ್ಲಿನ ಸೌಕರ್ಯಗಳ ಬಗ್ಗೆ ಅಕ್ಕ ಕೇಳುತ್ತಿದ್ದರು ಎಂದು ಮಾತು ಬದಲಾಯಿಸಿದಳು.

ಗೌತಮ್ ಗಾಳಿಪಟ ಸ್ಪರ್ಧೆ ಏರ್ಪಡಿಸಿದ. ತಾನೇ ಗೊಲ್ಲೋದು ಎಂದು ಆಟಕ್ಕೂ ಮೊದಲೇ ಗೌತಮ್ ಬೀಗತೊಡಗಿದ. ಹಾರ್ಟ್ ಸಿಂಬಲ್ ಇರೋ ಗಾಳಿಪಟ ತಯಾರಿಸಿ ರಿಷಿ ಜೊತೆ ಹಾರಿಸಲು ಸಜ್ಜಾದ. ರಿಷಿ ಮತ್ತು ಗೌತಮ್ ಇಬ್ಬರೂ ಗಾಳಿಪಟ ಹಾರಿಸಲು ಮುಂದಾದರು. ಆದರೆ ಗೌತಮ್ ಗಾಳಿಪಟವನ್ನು ಕಟ್ ಮಾಡಿ ರಿಷಿ ಗೆದ್ದು ಬೀಗಿದ. ಬಳಿಕ ಮನೆಯವರೆಲ್ಲ ಸೇರಿ ಮಹೇಂದ್ರನ ಕಾಲೆಳೆಯಲು ಶುರು ಮಾಡಿದರು.

ಮನೆಯವರ ಸಂತಸ ದೇವಯಾನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಜಗತಿಯನ್ನು ಮನೆಯಿಂದ ಓಡಿಸಬೇಕೆಂದು ಪ್ಲಾನ್ ಮಾಡುತ್ತಿದ್ದಾಳೆ. ದೇವಯಾನಿ ಪ್ಲಾನ್ ವರ್ಕೌಟ್ ಆಗುತ್ತಾ ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.