Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?

Honganasu Serial Update: ಅಪ್ಪನ ಮುಖ ನೋಡಿ ಜಗತಿಗೆ ರಿಷಿ ವಿಡಿಯೋ ಕಾಲ್ ಮಾಡಿದ. ಇದರಿಂದ ಸಂತಸಗೊಂಡ ವಸೂಧರಾ ಮತ್ತು ಜಗತಿ ಇಬ್ಬರೂ ಮಹೇಂದ್ರ ಬಳಿ ಮಾತನಾಡಿದರು.

Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು ಸೀರಿಯಲ್
Edited By:

Updated on: Oct 01, 2022 | 7:15 AM

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವ ಮಹೇಂದ್ರನನ್ನು ಮಗ ರಿಷಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಆದರೆ ಮಹೇಂದ್ರನಿಗೆ ಪತ್ನಿ ಜಗತಿಯದ್ದೇ ಚಿಂತೆ. ರಿಷಿ ನಿಮ್ಮ ನೋವೇನು ಎಂದು ತಂದೆಗೆ ಕೇಳಿದರೂ ಮಹೇಂದ್ರ ತನ್ನ ನೋವನ್ನು ಹೊರಹಾಕಿಲ್ಲ. ರಿಷಿನೇ ಊಟ ತಂದುಕೊಟ್ಟು, ಔಷಧಿ ನೀಡಿ ಅಪ್ಪನನ್ನು ಮಲಗಿಸುತ್ತಿರುವಾಗ ಪತ್ನಿ ಜಗತಿಯಿಂದ ಮಹೇಂದ್ರನಿಗೆ ಫೋನ್ ಬಂತು. ತಂದೆಯ ಫೋನ್ ನೋಡಿದ ರಿಷಿ ಜಗತಿ ಫೋನ್ ಎಂದು ಗೊತ್ತಾಗುತ್ತಿದ್ದಂತೆ ತಂದೆಗೆ ಫೋನ್ ನೀಡದೆ ತಾನೆ ರಿಸೀವ್ ಮಾಡಿದ. ಅತ್ತ ಜಗತಿ ತನ್ನ ಪತಿ ಮಹೇಂದ್ರನನ್ನು ನೆನೆದು ಕಣ್ಣೀರಿಡುತ್ತಿದ್ದಳು. ವಸೂಧರಾ ಸಮಾಧಾನ ಮಾಡಿ ಊಟ ನೀಡಿದರೂ ಜಗತಿ ಊಟ ಮಾಡಲ್ಲ ಎಂದು ಹಠ ಹಿಡಿದಿದ್ದಳು. ಹಾಗಾಗಿ ವಸೂಧರಾ ಜಗತಿ ಫೋನ್ ನಿಂದ ಮಹೇಂದ್ರನಿಗೆ ಫೋನ್ ಮಾಡಿದ್ದಳು. ಆದರೆ ಫೋನ್ ಪಿಕ್ ಮಾಡಿದ ರಿಷಿ ವಸೂಧರಾ ಮಾತನಾಡುತ್ತಿದ್ದಂತೆ ಕಟ್ ಮಾಡಿದ.

ತನ್ನ ಪತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು ತಿಳಿಯಲು ಕಾಯುತ್ತಿದ್ದ ಜಗತಿಗೆ ರಿಷಿ ಫೋನ್ ಕಟ್ ಮಾಡಿದ್ದು ಮತ್ತಷ್ಟು ನೋವು ತಂದಿತು. ಆದರೆ ಅಪ್ಪನ ಮುಖ ನೋಡಿ ಜಗತಿಗೆ ರಿಷಿ ಮತ್ತೆ ವಿಡಿಯೋ ಕಾಲ್ ಮಾಡಿದ. ಇದರಿಂದ ಸಂತಸಗೊಂಡ ವಸೂಧರಾ ಮತ್ತು ಜಗತಿ ಇಬ್ಬರೂ ಮಹೇಂದ್ರ ಬಳಿ ಮಾತನಾಡಿದರು.

ಮಹೇಂದ್ರ ತನ್ನ ಪತ್ನಿ ಜಗತಿ ನೆನಪಲ್ಲೇ ಮಲಗಿದ್ದನು. ರಿಷಿ ಮಲಗುತ್ತಿದ್ದಂತೆ ಮಹೇಂದ್ರ ಜಗತಿಗೆ ಕದ್ದು ಮಸೇಜ್ ಮಾಡಿದ. ಫೋನ್ ಮಾಡೋದ ಎಂದು ಕೇಳಿದ ಜಗತಿಗೆ ಮಹೇಂದ್ರ, ‘ರಿಷಿ ಇಲ್ಲೇ ಪಕ್ಕದಲ್ಲೇ ಇದ್ದಾನೆ’ ಎಂದು ಹೇಳಿದ. ಅಷ್ಟರಲ್ಲೇ ಎಚ್ಚರ ಆದ ರಿಷಿ ತಂದೆಗೆ ಏನಾಯಿತು ಎಂದು ನೋಡಿದ. ಮಹೇಂದ್ರ ಫೋನ್ ಆನ್ ಮಾಡಿ ಬಳಸುತ್ತಿದ್ದುದನ್ನು ನೋಡಿ ಮತ್ತೆ ಫೋನ್ ನೋಡುತ್ತಿದ್ದೀರಾ ಎಂದು ಕೇಳಿದ. ತನಗೆ ನಿದ್ದೆ ಬರುತ್ತಿಲ್ಲ ಹಾಗಾಗಿ ಫೋನ್ ಆನ್ ಮಾಡಿದೆ ಎಂದು ಮಹೇಂದ್ರ ಹೇಳಿದ. ನಿದ್ದೆ ಮಾಡಬೇಕು ತಾನೆ ಎಂದು ಹೇಳಿದ್ದಕ್ಕೆ, ‘ಎಷ್ಟೇ ಕಂಫರ್ಟ್ ಆಗಿದ್ದರೂ ಸಂತೋಷ ಇರಲ್ಲ’ ಎಂದು ಮಹೇಂದ್ರ ಪರೋಕ್ಷವಾಗಿ ಜಗತಿಯ ಬಗ್ಗೆ ರಿಷಿಗೆ ವಿವರಿಸಿದ.

ಇದನ್ನೂ ಓದಿ
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

‘ನೀವು ಸಂತೋಷವಾಗಿ ಇರಬೇಕೆಂದರೆ ಏನು ಮಾಡಬೇಕು’ ಎಂದು ರಿಷಿ ಕೇಳಿದ. ‘ನನ್ನ ಸಂತೋಷವೇ ಜಗತಿ’ ಎಂದು ಮಹೇಂದ್ರ ಉತ್ತರಿಸಿದ. ಪತ್ನಿ ಜೊತೆಯಲ್ಲೇ ಇದ್ದರೆ ಎಷ್ಟು ಚೆನ್ನಾಗಿ ಇರುತ್ತೆ ಎಂದು ಪುತ್ರನಿಗೆ ವಿವರಣೆ ನೀಡಿದ. ಆದರೆ ತಂದೆಯ ಮಾತಿನಿಂದ ಕೋಪಗೊಂಡ ರಿಷಿ ಏನೂ ಮಾತನಾಡದೆ ಅಪ್ಪನ ರೂಮಿನಿಂದ ಹೊರನಡೆದ.

ಬೆಳಗ್ಗೆ ಎದ್ದ ರಿಷಿ ತಂದೆಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ತಾನು ಸಿದ್ಧ ಎಂದು ಯೋಚನೆ ಮಾಡಿದ. ನಂತರ ವಸೂಧರಾಳನ್ನು ಭೇಟಿಯಾಗಲು ರೆಸ್ಟೋರೆಂಟ್‌ಗೆ ಬಂದ. ವಸೂಧರಾ ಬಳಿ ಬಂದು ಕಾರು ಹತ್ತು ಹೋಗೋಣ ಎಂದ. ಗಲಿಬಿಲಿಯಾದ ವಸೂಧರಾ ತನಗೆ ಕೆಲಸ ಇದೆ ಎಂದು ಹೇಳಿದರೂ ಬಿಡದ ರಿಷಿ ತನ್ನ ಪರ್ಸನಲ್ ವಿಷಯ ಹೇಳಬೇಕೆಂದು ಕರೆದುಕೊಂಡ ಹೋದ. ರಿಷಿ, ವಸೂಧರಾ ಬಳಿ ಏನು ಹೇಳುತ್ತಾನೆ? ತಂದೆಯ ಮಾತಿನಂತೆ ತಾಯಿ ಜಗತಿಯನ್ನು ಆತ ಮನೆಗೆ ಕರೆದುಕೊಂಡು ಬರ್ತಾನಾ ಎನ್ನುವುದು ಗೊತ್ತಾಗಬೇಕಾದರೆ ಮುಂದಿನ ಸಂಚಿಕೆವರೆಗೂ ಕಾಯಲೇಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Web

TV9 Kannada

Read More
Loading...
Unable to load recommendations.
Follow Us