ಹೊಂಗನಸು: ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಹೇಂದ್ರ; ಮತ್ತಷ್ಟು ಕೆಂಡವಾದ ರಿಷಿ

| Updated By: ಮದನ್​ ಕುಮಾರ್​

Updated on: Oct 22, 2022 | 8:19 PM

Honganasu Serial Update: ರಿಷಿ, ಮಹೇಂದ್ರ ಮತ್ತು ಜಗತಿ ಈ ಮೂವರನ್ನು ಸಂಭಾಳಿಸುವುದು ವಸುಧರಾಳಿಗೆ ಕಷ್ಟವಾಗಿದೆ. ಫೋನ್ ಮಾಡಿ ವಿಚಾರಿಸಲು ಪ್ರಯತ್ನ ಪಟ್ಟರೂ ರಿಷಿ ಮತ್ತು ಮಹೇಂದ್ರ ಇಬ್ಬರೂ ಫೋನ್ ಪಿಕ್ ಮಾಡುವುದಿಲ್ಲ.

ಹೊಂಗನಸು: ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಹೇಂದ್ರ; ಮತ್ತಷ್ಟು ಕೆಂಡವಾದ ರಿಷಿ
ಹೊಂಗನಸು ಸೀರಿಯಲ್
Follow us on

ಜಗತಿನೇ ತನ್ನ ತಾಯಿ ಎನ್ನುವ ಸತ್ಯ ಪ್ರಪಂಚಕ್ಕೆ ಗೊತ್ತಾಯಿತಲ್ಲಾ ಎನ್ನುವ ಕೋಪದಲ್ಲಿ ರಿಷಿ ಕಾರ್ಯಕ್ರದಿಂದ ಅರ್ಧಕ್ಕೆ ಹೊರಟು ಹೋದ. ವಸುಧರಾ ಮತ್ತು ಗೌತಮ್ ಇಬ್ಬರೂ ಸಮಾಧಾನ ಮಾಡಿದರೂ ರಿಷಿಯ ಕೋಪ ತಣ್ಣಗಾಗಿಲ್ಲ. ಬಳಿಕ ಗೌತಮ್, ರಿಷಿಯನ್ನು ಮನೆಗೆ ಕರೆದುಕೊಂಡು ಹೊರಟ. ‘ಕಡಿಮೆ ಮಾತನಾಡುತ್ತೀಯ, ಕಡಿಮೆ ಎಕ್ಸ್‌ಪ್ರೆಸ್ ಮಾಡುತ್ತೀಯಾ, ಮನಸ್ಸಲ್ಲೇ ಎಲ್ಲಾ ಇಟ್ಟುಕೊಳ್ತೀಯಾ. ಭಾರವನ್ನು ಹೊರಹಾಕು’ ಎಂದು ಗೌತಮ್ ರಿಷಿಗೆ ಎಷ್ಟು ಹೇಳಿದರೂ ರಿಷಿ ಏನೂ ಮಾತನಾಡದೆ ಸೈಲೆಂಟ್ ಆಗಿ ಕುಳಿತಿದ್ದ. ಇತ್ತ ದೇವಯಾನಿ ಈ ಘಟನೆಯನ್ನು ಮತ್ತಷ್ಟು ದೊಡ್ಡದು ಮಾಡಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಳು. ದೇವಯಾನಿ ಮಾತಿನಿಂದ ಕೋಪಗೊಂಡ ಆಕೆಯ ಪತಿ, ‘ಈ ಬಗ್ಗೆ ಮಾತನಾಡಬೇಡ ಮನೆಯಲ್ಲಿ ನೆಮ್ಮದಿ ಬೇಕೆಂದರೆ ಈ ವಿಚಾರವನ್ನು ಮತ್ತೆ ಎತ್ತಬೇಡ’ ಎಂದು ಖಡಕ್ ಆಗಿ ಹೇಳಿ ಹೊರಟ. ಅಷ್ಟೊತ್ತಿಗೆ ಮಹೇಂದ್ರ ಮನೆಯೊಳಗೆ ಎಂಟ್ರಿ ಕೊಟ್ಟ. ಸ್ವಲ್ಪ ಹೊತ್ತಿನಲ್ಲೇ ರಿಷಿ ಕೂಡ ಬಂದ. ಈ ಸಮಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ದೇವಯಾನಿ ಮಹೇಂದ್ರನನ್ನು ತಡೆದು ನಿಲ್ಲಿಸಿದಳು.

ರಿಷಿಯ ಮುಂದೆ ತನ್ನ ನಾಟಕ ಶುರು ಮಾಡಿದ ದೇವಯಾನಿ ಮಹೇಂದ್ರನಿಗೆ ಟಾಂಗ್ ಕೊಟ್ಟು ಮಾತಡಿದಳು. ‘ನೀನು ಮಾಡಿದ್ದು ಸರಿನಾ’ ಎಂದು ಮಹೇಂದ್ರನಿಗೆ ದೇವಯಾನಿ ಪ್ರಶ್ನೆ ಮಾಡಿದಳು. ‘ಇಲ್ಲಿ ಯಾರು ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ, ತಪ್ಪು-ಸರಿ ಬಗ್ಗೆ ಮಾತನಾಡುವ ಅಧಿಕಾರ ಕೂಡ ಯಾರಿಗೂ ಇಲ್ಲ, ನಾನು ಹೇಳಿದ್ದು ನಿಜನೇ. ಸುಳ್ಳು ಹೇಳಿಲ್ಲ’ ಎಂದು ಮಹೇಂದ್ರ ಖಡಕ್ ಆಗಿ ಹೇಳಿ ಅಲ್ಲಿಂದ ಹೊರಟ. ಮಹೇಂದ್ರನ ಮಾತು ರಿಷಿಗೆ ಮತ್ತಷ್ಟು ಕೋಪ ತರಿಸಿತು. ಈ ಸಮಯಕ್ಕಾಗಿ ಕಾಯುತ್ತಿದ್ದ ದೇವಯಾನಿ, ‘ಇದು ಸರಿಯಾ, ಮನೆ ಮರ್ಯಾದೆ ತೆಗೆದಿದ್ದು ಸರಿನಾ’ ಎಂದು ರಿಷಿ ಮುಂದೆ ಅಳುವ ಹಾಗೆ ನಾಟಕ ಮಾಡಿದಳು. ಆದರೆ ರಿಷಿ ದೊಡ್ಡಮ್ಮನ ಮಾತು ಕೇಳಿಕೊಳ್ಳದೆ ಅಲ್ಲಿಂದ ಹೊರಟು ಹೋದ.

ರಿಷಿ, ಮಹೇಂದ್ರ ಮತ್ತು ಜಗತಿ ಈ ಮೂವರನ್ನು ಸಂಭಾಳಿಸುವುದು ವಸುಧರಾಳಿಗೆ ಕಷ್ಟವಾಗಿದೆ. ಫೋನ್ ಮಾಡಿ ವಿಚಾರಿಸಲು ಪ್ರಯತ್ನ ಪಟ್ಟರೂ ರಿಷಿ ಮತ್ತು ಮಹೇಂದ್ರ ಇಬ್ಬರೂ ಫೋನ್ ಪಿಕ್ ಮಾಡುವುದಿಲ್ಲ. ಬಳಿಕ ಗೌತಮ್‌ಗೆ ಕಾಲ್ ಮಾಡಿ ‘ರಿಷಿ ಸರ್‌ನ ಚೆನ್ನಾಗಿ ನೋಡಿಕೊಳ್ಳಿ, ಅವರ ಪಕ್ಕದಲ್ಲೇ ಇರಿ’ ಎಂದು ವಸುಧರಾ ಹೇಳಿದಳು. ಮನೆಯ ಅಂಗಳದಲ್ಲಿ ಒಬ್ಬನೇ ಕುಳಿತ್ತಿದ್ದ ರಿಷಿಯನ್ನು ಮಾತನಾಡಿಸಲು ಬಂದ ಮಹೇಂದ್ರ ತನ್ನ ಮಾತನ್ನು ಸಮರ್ಥಿಸಿಕೊಂಡ. ಸಂಬಂಧದ ಬಗ್ಗೆ ವಿವರವಾಗಿ ಹೇಳಿದ. ‘ನಿನ್ನ ದೊಡ್ಡಪ್ಪನಿಗೆ ನಾನು ತಮ್ಮ, ಧರಣಿಗೆ ನಾನು ಮಾವ, ನಿನಗೆ ಅಪ್ಪ, ಜಗತಿಗೆ ನಾನು ಗಂಡ’ ಎಂದು ಮತ್ತೆ ರಿಷಿ ಮುಂದೆ ಹೇಳಿದ ಮಹೇಂದ್ರ. ತಂದೆಯ ಮಾತು ರಿಷಿಗೆ ಹಿಡಿಸಲಿಲ್ಲ. ಜಗತಿಯನ್ನು ತಾಯಿ ಎಂದು ಒಪ್ಪಿಕೊಳ್ಳಲು ಇಷ್ಟವಿಲ್ಲದ ರಿಷಿಗೆ ಸಂಬಂಧದ ಬಗ್ಗೆ ಮಹೇಂದ್ರ ಸೂಕ್ಷ್ಮವಾಗಿ ವಿವರಿಸಿದರೂ ಕಿವಿಗೆ ಹಾಕಿಕೊಳ್ಳದೆ ಅಲ್ಲಿಂದ ಹೊರಟ.

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಬೆಳಗ್ಗೆ ಕಾಲೇಜಿಗೆ ಬಂದ ವಸು ರಿಷಿ ಬರ್ತಾರಾ ಇಲ್ವಾ ಎಂದು ಯೋಚಿಸುತ್ತಾ ಕುಳಿತಿದ್ದಳು. ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರ್ತಿದ್ದ ರಿಷಿ ಸಮಯ ಮೀರಿದರೂ ಬಂದಿಲ್ಲ ಎಂದು ವಸು ಗಲಿಬಿಲಿಯಾಗಿದ್ದಳು. ರಿಷಿಗಾಗಿ ಕಾಲೇಜು ಆವರಣದಲ್ಲಿ ಕಾಯುತ್ತ ಕುಳಿತ್ತಿದ್ದಳು. ಅಷ್ಟೊತ್ತಿಗೆ ಎಂಟ್ರಿ ಕೊಟ್ಟ ರಿಷಿ ನೋಡಿ ವಸು ಫುಲ್ ಖುಷ್ ಆದಳು. ರಿಷಿ ಎಂದಿನಂತೆ ವಸುಧರಾ ಬಳಿ ಮಾತನಾಡುತ್ತಾನಾ? ಜಗತಿ ಕೂಡ ಕಾಲೇಜಿಗೆ ಬರುತ್ತಾಳಾ? ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.