ಹೊಂಗನಸು: ಜಗತಿ ಆಸೆ ಈಡೇರಿಸಿದ ವಸೂಧರಾ; ಅಮ್ಮ ಕೊಟ್ಟ ಉಡುಗೊರೆ ಎಂದು ರಿಷಿಗೆ ಗೊತ್ತಾಯ್ತಾ?

| Updated By: ಮದನ್​ ಕುಮಾರ್​

Updated on: Oct 06, 2022 | 4:06 PM

Honganasu Serial Update: ಜಗತಿ ತನ್ನ ಮಗ ರಿಷಿಗಾಗಿ ಉಡುಗೊರೆ ತಂದಿದ್ದಳು. ಹೇಗೆ ಕೊಡುವುದೆಂದು ಯೋಚಿಸುತ್ತಿದ್ದಳು. ತಾಯಿ ತಂದ ಉಡುಗೊರೆ ಎಂದರೆ ರಿಷಿ ಖಂಡಿತ ತೆಗೆದುಕೊಳ್ಳಲ್ಲ ಎನ್ನುವ ಸತ್ಯ ಜಗತಿ ಗೊತ್ತಿತ್ತು.

ಹೊಂಗನಸು: ಜಗತಿ ಆಸೆ ಈಡೇರಿಸಿದ ವಸೂಧರಾ; ಅಮ್ಮ ಕೊಟ್ಟ ಉಡುಗೊರೆ ಎಂದು ರಿಷಿಗೆ ಗೊತ್ತಾಯ್ತಾ?
ಹೊಂಗನಸು ಸೀರಿಯಲ್
Follow us on

ಹಬ್ಬದ ಖುಷಿಯಲ್ಲಿ ಎಲ್ಲರೂ ಸಿಹಿ ಸವಿಯುತ್ತಿದ್ದಾರೆ. ಆದರೆ ವಸೂಧರಾ ತಿನ್ನುತ್ತಿದ್ದ ಪಾಯಸವನ್ನು ರಿಷಿ ಕೆಳಗೆ ಬೀಳಿಸಿದ. ಬಳಕ ರಿಷಿ ತಾನೇ ತಿನ್ನುತ್ತಿದ್ದ ಪಾಯಸವನ್ನು ವಸೂಧರಾಳಿಗೆ ನೀಡಿದ. ರಿಷಿ ಎಂಜಲು ಮಾಡಿದ ಪಾಯಸವನ್ನು ವಸೂಧರಾ ತಿಂದಳು ಎಂದು ದೇವಯಾನಿ ಕೋಪ ಮಾಡಿಕೊಂಡು ಎದ್ದು ನಡೆದಳು. ರಿಷಿ ಮತ್ತು ವಸೂಧರಾಳ ಆತ್ಮೀಯತೆ ನೋಡಿದ ಜಗತಿ ಇಬ್ಬರ ನಡುವೆ ಪ್ರೀತಿ ಇದೆ ಎಂದು ತನ್ನ ಪತಿ ಮಹೇಂದ್ರನ ಬಳಿ ಹೇಳಿದಳು. ಅದನ್ನು ಒಪ್ಪಿಕೊಳ್ಳಲು ರಿಷಿ ತಯಾರಿಲ್ಲ ಎಂದು ಮಹೇಂದ್ರ ಹೇಳಿದ. ಸಿಹಿ ತಿಂದು ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ಮನೆಯವರ ಸಂತಸ ನೋಡಿ ದೇವಯಾನಿ ಮತ್ತಷ್ಟು ಉರಿದುಕೊಂಡು ಡಾನ್ಸ್ ಅರ್ಧದಲ್ಲೇ ಬಿಟ್ಟು ಹೋದಳು.

ಹಬ್ಬಕ್ಕೆ ಸುಂದರವಾಗಿ ರೆಡಿಯಾಗಿದ್ದ ವಸೂಧರಾಳನ್ನು ರಿಷಿ ಹಾಡಿಹೊಗಳಿದ. ಅಷ್ಟರಲ್ಲೇ ಗೌತಮ್ ಕೂಡ ವಸೂಧರಾಳನ್ನು ಹೊಗಳಿದ. ರಿಷಿ ಮತ್ತು ಗೌತಮ್ ಇಬ್ಬರೂ ಪೈಪೋಟಿಗೆ ಬಿದ್ದ ಹಾಗೆ ವಸೂಧರಾಳನ್ನು ಪಟಾಯಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಪ್ಲಿಮೆಂಟ್‌ನಲ್ಲೂ ರಿಷಿ ತನಗೆ ಪೈಪೋಟಿ ಆಗಿದ್ದಾನೆ ಎಂದು ಗೌತಮ್ ಮನಸಲ್ಲೇ ಬೈಯ್ದುಕೊಂಡ.

ಜಗತಿ ತನ್ನ ಮಗ ರಿಷಿಗಾಗಿ ಉಡುಗೊರೆ ತಂದಿದ್ದಳು. ಹೇಗೆ ಕೊಡುವುದೆಂದು ಯೋಚಿಸುತ್ತಿದ್ದಳು. ತಾಯಿ ತಂದ ಉಡುಗೊರೆ ಎಂದರೆ ರಿಷಿ ಖಂಡಿತ ತೆಗೆದುಕೊಳ್ಳಲ್ಲ ಎನ್ನುವ ಸತ್ಯ ಜಗತಿ ಗೊತ್ತು. ಹಾಗಾಗಿ ಜಗತಿ ಉಡುಗೊರೆಯನ್ನು ವಸೂಧರಾಗೆ ಕೊಟ್ಟು ರಿಷಿಗೆ ಕೊಡುವಂತೆ ಹೇಳಿದಳು. ಜಗತಿ ಮತ್ತು ವಸೂಧರಾ ಇಬ್ಬರೂ ಮಾತನಾಡಿದ್ದನ್ನು ದೇವಯಾನಿ ಕೇಳಿಸಿಕೊಂಡಳು. ತಾನೆ ನಿನಗೆ ಸರಿಯಾದ ಗಿಫ್ಟ್ ಕೊಡ್ತೀನಿ ಎಂದು ಹೇಳುತ್ತಾ ಅಲ್ಲಿಂದ ಹೊರಟಳು. ಬಳಿಕ ವಸೂಧರಾ, ಜಗತಿ ಆಸೆಯಂತೆ ಕೊಟ್ಟ ಉಡುಗೊರೆಯನ್ನು ರಿಷಿಗೆ ನೀಡಿದಳು. ಬೇಡ ಎನ್ನಬಾರದು ಎನ್ನುವ ಕಂಡೀಷನ್ ಹಾಕಿ ರಿಷಿಗೆ ಉಡುಗೊರೆ ನೀಡಿದಳು. ವಸೂಧರಾ ಕೊಟ್ಟ ಉಡುಗೊರೆ ಎಂದು ರಿಷಿ ಖುಷಿಯಾಗಿ ತೆಗೆದುಕೊಂಡ.

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ವಸೂಧರಾ ಮತ್ತೊಂದು ಗೇಮ್ ಪ್ಲಾನ್ ಮಾಡಿದಳು. ಗೇಮ್‌ನಲ್ಲಿ ಸೋತವರು ದಿನಪೂರ್ತಿ ಗೆದ್ದವರ ಮಾತು ಕೇಳಬೇಕು ಎಂದು ವಸೂಧರಾ ಹೇಳಿದಳು. ರಿಷಿ ಒಪ್ಪಿಕೊಂಡು ಗೇಮ್‌ಗೆ ರೆಡಿಯಾದ. ಆದರೆ ಗೇಮ್‌ನಲ್ಲಿ ವಸೂಧರಾ ಗೆದ್ದಳು. ಬಳಿಕ ರಿಷಿ ಜಗತಿಯನ್ನು ಅಮ್ಮ ಎಂದು ಕರೆಯುವಂತೆ ವಸೂಧರಾ ಈಗ ಹೇಳುತ್ತಾಳೆ ಎಂದು ಮನಸ್ಸಿನಲ್ಲೇ ಊಹಿಸಿಕೊಂಡು ಗಾಬರಿಯಾದ. ಆದರೆ ವಸೂಧರಾ ದಿನ ಪೂರ್ತಿ ಕೋಪ ಮಾಡಿಕೊಳ್ಳಬಾರದು ಎಂದು ರಿಷಿಗೆ ಕಂಡೀಷನ್ ಹಾಕಿದಳು. ವಸೂಧರಾ ಮಾತು ಕೇಳಿ ರಿಷಿ ‘ಇಷ್ಟೆನಾ.. ಇನ್ನೇನೋ ಹೇಳ್ತೀಯಾ ಅಂತ ಅಂದುಕೊಂಡಿದ್ದೆ’ ಎಂದು ನಿಟ್ಟುಸಿರುಬಿಟ್ಟು ಗಿಫ್ಟ್ ತೆಗೆದುಕೊಂಡು ಹೋದ.

ಇತ್ತ ಅಡುಗೆ ಮಾಡುತ್ತಿದ್ದ ಜಗತಿ ಬಳಿ ಬಂದ ದೇವಯಾನಿ ತುಂಬಾ ಸಂಭ್ರಮ ಪಡಬೇಡ ಜಾಸ್ತಿ ಹೊತ್ತು ಇರಲು ನಾನು ಬಿಡಲ್ಲ ಎಂದು ಹೇಳಿದಳು. ಜಗತಿ ಕೂಡ ಅಕ್ಕ ದೇವಯಾನಿಗೆ ಸರಿಯಾಗೆ ಟಾಂಗ್ ನೀಡಿ ಹೋದಳು. ಜಗತಿ ತನ್ನ ಗಂಡನ ಮನೆಯಲ್ಲೇ ಇರ್ತಾಳಾ ಅಥವಾ ಹಬ್ಬ ಮುಗಿಸಿ ವಾಪಾಸ್ ಹೊರಡುತ್ತಾಳಾ? ರಿಷಿ ತನ್ನ ತಾಯಿಯನ್ನು ಒಪ್ಪಿಕೊಳ್ತಾನಾ ಎಂದು ತಿಳಿದುಕೊಳ್ಳಬೇಕೆಂದರೆ ಮುಂದಿನ ಸಂಚಿಕೆವರೆಗೂ ಕಾಯಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:06 pm, Thu, 6 October 22