ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ನಿತ್ಯ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಆಗುತ್ತಲೇ ಇದೆ. ಇಬ್ಬರೂ ಸದಾ ಹೊಸಹೊಸ ವಿಚಾರಕ್ಕೆ ಕಿತ್ತಾಡುತ್ತಾರೆ. ಇವರ ನಡುವಿನ ವಾಗ್ವಾದ ಕೆಲವೊಮ್ಮೆ ಮಿತಿಮೀರಿದ್ದೂ ಇದೆ. ಈಗ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ (Prashanth Sambargi) ಮಧ್ಯೆ ಮತ್ತೆ ಕಿತ್ತಾಟ ನಡೆದಿದೆ. ‘ರೂಪೇಶ್ ರಾಜಣ್ಣ ರೋಲ್ಕಾಲ್ ಮಾಡಿ ದುಡ್ಡು ಮಾಡಿದ್ದಾರೆ’ ಎಂಬ ಆರೋಪವನ್ನು ಪ್ರಶಾಂತ್ ಮಾಡಿದ್ದಾರೆ. ಇದಕ್ಕೆ ರೂಪೇಶ್ ಕೂಡ ಸಿಟ್ಟಾಗಿದ್ದು, ಅವರಿಗೆ ತಿರುಗೇಟು ನೀಡಿದ್ದಾರೆ. ಇವರ ನಡುವಿನ ಜಗಳದಿಂದ ಬಿಗ್ ಬಾಸ್ ಮನೆಯಲ್ಲಿ ಕೆಲ ಹೊತ್ತು ಟೆನ್ಷನ್ ವಾತಾವರಣ ನಿರ್ಮಾಣ ಆಗಿತ್ತು.
ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮೊದಲ ವಾರವೇ ಕುತಂತ್ರಿ ಎಂಬ ಪಟ್ಟ ನೀಡಿದ್ದರು. ಅವರು ಸಿಕ್ಕಾಪಟ್ಟೆ ಡಬಲ್ ಗೇಮ್ ಆಡುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಕರೆದಿದ್ದರು. ಇದೇ ವಿಚಾರವನ್ನು ರೂಪೇಶ್ ತೆಗೆದಿದ್ದಾರೆ. ‘ಆಟವನ್ನು ಸರಿ ಆಡುವುದಿಲ್ಲ. ನಿಮಗೆ ಕುತಂತ್ರಿ ಎಂಬ ಪಟ್ಟ ಸರಿ ಇದೆ’ ಎಂಬ ಮಾತನ್ನು ರೂಪೇಶ್ ರಾಜಣ್ಣ ಹೇಳಿದರು. ಇದಕ್ಕೆ ಪ್ರಶಾಂತ್ ಟ್ರಿಗರ್ ಆದರು.
‘ರೋಲ್ಕಾಲ್ ಮಾಡಿ ಯಾರು ಎಲ್ಲೆಲ್ಲಿ ಜೀವನ ಮಾಡಿದಾರೆ ಅನ್ನೋದು ಗೊತ್ತು. ಕನ್ನಡದ ಕಂದ ಹೇಡಿ. ಆಗದಿದ್ದವನು ಮೈ ಪರಚಿಕೊಂಡನಂತೆ’ ಎಂದು ಸಿಟ್ಟಲ್ಲೇ ಹೇಳಿದರು ಪ್ರಶಾಂತ್. ‘ಕೋಟಿಕೋಟಿ ವ್ಯವಹಾರ ಮಾಡುವ ಕುತಂತ್ರಿಗಳಲ್ಲ ನಾವು. ಹೆದರಿಕೊಂಡು ಓಡೋದು ನಮ್ಮ ಜಾಯಮಾನದಲ್ಲಾಗಲೀ, ಕನ್ನಡಿಗರ ಜಾಯಮಾನದಲ್ಲಾಗಲಿ ಇಲ್ಲ. ನಾನು ರೋಲ್ಕಾಲ್ ಮಾಡಿದ್ದು ಪ್ರೂವ್ ಮಾಡಿದ್ರೆ ನೇಣು ಹಾಕಿಕೊಳ್ತಿನಿ’ ಎಂದು ಸಂಬರ್ಗಿಗೆ ಸವಾಲ್ ಹಾಕಿದರು ಅವರು.
ಇದನ್ನೂ ಓದಿ: ‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ
ಇಬ್ಬರ ಮಧ್ಯೆ ಚರ್ಚೆ ಕಾವೇರುತ್ತಿರುವುದನ್ನು ಗಮನಿಸಿದ ಮನೆ ಮಂದಿ ರೂಪೇಶ್ ರಾಜಣ್ಣ ಅವರನ್ನು ಸಮಾಧಾನ ಮಾಡಲು ನೋಡಿದರು. ನಂತರ ಅವರು ಕೊಂಚ ತಣ್ಣಗಾದರು. ಈ ಮೊದಲು ಭಾಷಾ ವಿಚಾರಕ್ಕೆ ಇವರ ಮಧ್ಯೆ ಕಿತ್ತಾಟ ನಡೆದಿತ್ತು. ‘ಕನ್ನಡ ಭಾಷೆಯ ಉಳಿಸುವ ವಿಚಾರ ಬಂದರೆ ಸಂಬರ್ಗಿ ಉರಿದುಕೊಳ್ತಾರೆ’ ಎಂದು ರೂಪೇಶ್ ರಾಜಣ್ಣ ಟೀಕೆ ಮಾಡಿದ್ದರು.