‘ನೀವು ತಿದ್ದಿಕೊಳ್ಳಲ್ಲ, ನನ್ನ ಟೈಮ್ ನಿಮ್ಮ ಮೇಲೆ ವೇಸ್ಟ್ ಮಾಡಲ್ಲ’; ಆರ್ಯವರ್ಧನ್​ಗೆ ಕೈ ಮುಗಿದ ಸುದೀಪ್

| Updated By: ರಾಜೇಶ್ ದುಗ್ಗುಮನೆ

Updated on: Oct 03, 2022 | 7:51 PM

‘ಎಲ್ಲವೂ ಗ್ರಹಗತಿಗಳಿಂದ ಆಗುತ್ತಿದೆ’ ಎಂಬ ಉತ್ತರ ಆರ್ಯವರ್ಧನ್ ಕಡೆಯಿಂದ ಬಂತು. ಈ ಮಾತನ್ನು ಕೇಳಿ ಸುದೀಪ್ ಅಚ್ಚರಿಗೊಂಡರು. ಅಲ್ಲದೆ, ಮುಂದೆ ಯಾವುದೇ ಮಾತನಾಡಬಾರದು ಎಂದು ನಿರ್ಧರಿಸಿದರು.

‘ನೀವು ತಿದ್ದಿಕೊಳ್ಳಲ್ಲ, ನನ್ನ ಟೈಮ್ ನಿಮ್ಮ ಮೇಲೆ ವೇಸ್ಟ್ ಮಾಡಲ್ಲ’; ಆರ್ಯವರ್ಧನ್​ಗೆ ಕೈ ಮುಗಿದ ಸುದೀಪ್
ಆರ್ಯವರ್ಧನ್-ಸುದೀಪ್
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಅವರು ಬೇರೆ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಒಟಿಟಿ ಸೀಸನ್​ನಲ್ಲಿ ಎಲ್ಲರ ಮಾತು ಕೇಳಿಕೊಂಡಿದ್ದ ಅವರು, ಬದಲಾಗಿದ್ದಾರೆ. ಈಗ ಯಾರ ಮಾತನ್ನೂ ಕೇಳುತ್ತಿಲ್ಲ. ಬೇರೆಯವರಿಗೆ ಬುದ್ಧಿಮಾತು ಹೇಳುತ್ತಾ ದಿನ ಕಳೆಯುತ್ತಿದ್ದಾರೆ. ಇದರ ಜತೆಗೆ ಆರ್ಯವರ್ಧನ್ (Aravardhan Guruji) ಅವರು ಸಾಕಷ್ಟು ಅವಾಚ್ಯ ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ವೀಕೆಂಡ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮನೆಯವರು ಹೌದು ಎಂದಿದ್ದಾರೆ.

‘ಎಷ್ಟೇ ಪ್ರಯತ್ನಪಟ್ರೂ ಆರ್ಯವರ್ಧನ್​ಗೆ ಅವಾಚ್ಯ ಶಬ್ದಗಳನ್ನು ನಿಯಂತ್ರಿಸೋಕೆ ಆಗುತ್ತಿಲ್ಲ’ ಎಂಬ ಸ್ಟೇಟ್​ಮೆಂಟ್​ ಸುದೀಪ್ ನೀಡಿದ್ದಾರೆ. ಇದಕ್ಕೆ ಮನೆಯವರಿಂದ ‘ಹೌದು’ ಎಂಬ ಉತ್ತರ ಬಂತು. ‘ಆರ್ಯವರ್ಧನ್​ಗೆ ಕೆಟ್ಟ ಶಬ್ದಗಳು ನಿಯಂತ್ರಣವೇ ಆಗುತ್ತಿಲ್ಲ. ಇದು ಸಾರ್ವಜನಿಕ ವೇದಿಕೆ. ಟಿವಿಯಲ್ಲಿ ಜನ ಇದನ್ನು ನೋಡ್ತಾ ಇರ್ತಾರೆ ಎಂದು ನಾನು ಅನೇಕ ಬಾರಿ ಅವರಿಗೆ ಹೇಳಿದ್ದೇನೆ’ ಎಂದರು ಪ್ರಶಾಂತ್.

‘ನಾನು ಹಳ್ಳಿಯವನು, ಅದಕ್ಕೆ ಆ ಶಬ್ದ ಬಳಸುತ್ತೀನಿ’ ಎಂದು ಸ್ಪಷ್ಟನೆ ನೀಡೋಕೆ ಹೋದರು ಆರ್ಯವರ್ಧನ್. ಇದಕ್ಕೆ ಸುದೀಪ್ ಸಿಟ್ಟಾದರು. ‘ಹಳ್ಳಿಯವನು ಎಂಬುದನ್ನು ಆಯುಧವನ್ನಾಗಿ ಮಾಡಿಕೊಳ್ಳಬೇಡಿ. ಎಲ್ಲ ಹಳ್ಳಿಯವರು ಆ ರೀತಿ ಇರಲ್ಲ. ಅಚ್ಚುಕಟ್ಟಾಗಿ ಕನ್ನಡ ಮಾತನಾಡುವವರೂ ಹಳ್ಳಿಯಲ್ಲಿ ಇದ್ದಾರೆ. ಅವರಿಗೆಲ್ಲ ನೀವು ಅವಮಾನ ಮಾಡ್ತಾ ಇದೀರಾ. ರಾಜ್​ಕುಮಾರ್ ಅವರೂ ಹಳ್ಳಿಯಿಂದಲೇ ಬಂದವರು’ ಎಂದು ಸುದೀಪ್ ಖಡಕ್ ಆಗಿಯೇ ಉತ್ತರ ಕೊಟ್ಟರು.

ಇದನ್ನೂ ಓದಿ
‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
BBK 9: ‘ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್’; ಏನಿದು ಸಮಾಚಾರ?

‘ಎಲ್ಲವೂ ಗ್ರಹಗತಿಗಳಿಂದ ಆಗುತ್ತಿದೆ’ ಎಂಬ ಉತ್ತರ ಆರ್ಯವರ್ಧನ್ ಕಡೆಯಿಂದ ಬಂತು. ಈ ಮಾತನ್ನು ಕೇಳಿ ಸುದೀಪ್ ಅಚ್ಚರಿಗೊಂಡರು. ಅಲ್ಲದೆ, ಮುಂದೆ ಯಾವುದೇ ಮಾತನಾಡಬಾರದು ಎಂದು ನಿರ್ಧರಿಸಿದರು. ಈ ಸಂದರ್ಭದಲ್ಲಿ ಒಂದು ಬ್ರೇಕ್ ನೀಡಲಾಯಿತು. ಮನೆ ಒಳಗೆ ಆರ್ಯವರ್ಧನ್ ಮತ್ತೆ ಮತ್ತೆ ಗ್ರಹಗತಿ ವಾದವನ್ನು ಮುಂದಿಡೋಕೆ ಶುರು ಮಾಡಿದರು.

ಬ್ರೇಕ್​​ನ ನಂತರ ಬಂದ ಸುದೀಪ್ ‘ನಾನು ಇಷ್ಟು ಹೇಳಿದಮೇಲೂ ಮತ್ತದೇ ರೀತಿ ಮಾಡ್ತೀರಲ್ಲ. ನಿಮ್ಮನ್ನು ತಿದ್ದೋಕೆ ಆಗಲ್ಲ, ನೀವು ತಿದ್ದಿಕೊಳ್ಳುವುದೂ ಇಲ್ಲ. ನನ್ನ ಟೈಮ್​ನ ನಿಮ್ಮ ಮೇಲೆ ವೇಸ್ಟ್ ಮಾಡಲ್ಲ. ನೀವು ಏನಾದರೂ ಮಾಡಿಕೊಳ್ಳಿ’ ಎಂದು ಕೈ ಮುಗಿದೇಬಿಟ್ಟರು ಸುದೀಪ್.

ಇದನ್ನೂ ಓದಿ: ‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್

ಆರ್ಯವರ್ಧನ್ ನಡೆದುಕೊಂಡ ರೀತಿ ಮನೆಯವರಿಗೆ ಸ್ವಲ್ಪವೂ ಇಷ್ಟ ಆಗಲಿಲ್ಲ. ಹೀಗಾಗಿ, ಆರ್ಯವರ್ಧನ್​ ಬಗ್ಗೆ ಬೇಸರ ಹೊರಹಾಕಿದರು. ಅವರ ಗ್ರಹಗತಿ ಹೇಳಿಕೆಯಿಂದ ಬಹುತೇಕರಿಗೆ ಶಾಕ್ ಆಗಿದೆ. ಈ ಬಗ್ಗೆ ಮನೆ ಮಂದಿಯೂ ಹೇಳಿಕೊಂಡಿದ್ದಾರೆ.