ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ವರ್ಧನ್ ಸಂಸ್ಥೆಯಿಂದ ಮೀರಾ ಹೆಗಡೆ ರಿಸೈನ್ ಮಾಡುವ ನಿರ್ಧಾರಕ್ಕೆ ಬಂದಿದ್ದಳು. ಆದರೆ, ಇದಕ್ಕೆ ಅನು ಸಿರಿಮನೆ ಅವಕಾಶ ನೀಡಲೇ ಇಲ್ಲ. ಆಕೆಯ ಮನ ಒಲಿಸಿದ್ದಳು ಅನು. ಈ ಕಾರಣಕ್ಕೆ ಆಕೆ ಕಂಪನಿಗೆ ಮರಳುತ್ತಿದ್ದಾಳೆ. ಮತ್ತೊಂದು ಕಡೆ ಝೇಂಡೆಯನ್ನು ಮರಳಿ ಕಂಪನಿಗೆ ಸೇರಿಸಿಕೊಳ್ಳುವ ಬಗ್ಗೆ ಅನು ಚಿಂತನೆ ನಡೆಸಿದ್ದಾಳೆ. ಇದಕ್ಕೆ ಹರ್ಷ ಹಾಗೂ ಸಂಜು ಒಪ್ಪಿಗೆ ನೀಡಿದ್ದಾರೆ.
ಸಂಜುಗೆ ಹಳೇ ನೆನಪು ಮರಳಿಸುವ ಪ್ರಯತ್ನ
ಸಂಜುನೇ ಆರ್ಯವರ್ಧನ್ ಅನ್ನೋ ವಿಚಾರ ಝೇಂಡೆಗೆ ಗೊತ್ತಾಗಿದೆ. ಪ್ಲ್ಯಾನ್ ಮಾಡಿ ಈ ವಿಚಾರವನ್ನು ಪ್ರಿಯದರ್ಶಿನಿಯಿಂದ ತಿಳಿದುಕೊಂಡಿದ್ದಾನೆ ಝೇಂಡೆ. ಈ ಕಾರಣಕ್ಕೆ ಆತ ಸಂಜು ಹಿಂದೆ ಬಿದ್ದಿದ್ದಾನೆ. ವರ್ಧನ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಆರ್ಯವರ್ಧನ್ ಸಹಾಯ ಬೇಕೇ ಬೇಕು ಎಂಬುದು ಝೇಂಡೆಗೆ ಗೊತ್ತಾಗಿದೆ. ಈ ಕಾರಣಕ್ಕೆ ಆತ ಸಂಜುನ ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.
ಆರ್ಯವರ್ಧನ್ ಹಾಗೂ ಝೇಂಡೆ ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಆ ಸಂದರ್ಭದಲ್ಲಿ ಟೀ ಕುಡಿಯೋಕೆ ಹೋಗುತ್ತಿದ್ದುದು ಒಂದು ಗೂಡಂಗಡಿಗೆ. ಈ ಗೂಡಂಗಡಿಗೆ ಸಂಜುನ ಕರೆದುಕೊಂಡು ಹೋಗಿದ್ದಾನೆ ಝೇಂಡೆ. ಈ ಮೂಲಕ ಆತನಿಗೆ ಹಳೆಯ ನೆನಪು ಮರಳಿಸುವ ಪ್ರಯತ್ನ ಮಾಡುತ್ತಿದ್ದಾನೆ.
ಇದನ್ನೂ ಓದಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್
ಸಂಜು ತಾನು ಸಮಯ ಕಳೆದ ಹಳೆಯ ಜಾಗದಲ್ಲಿ ಸುತ್ತಾಟ ನಡೆಸಿದರೆ ನೆನಪು ಮರಳುತ್ತದೆ ಎನ್ನುವ ಮಾತನ್ನು ವೈದ್ಯರು ಹೇಳಿದ್ದಾರೆ. ಈ ಕಾರಣಕ್ಕೆ ಪ್ರಿಯದರ್ಶಿನಿ ಆತನನ್ನು ರಾಜ ನಂದಿನಿ ವಿಲಾಸದಲ್ಲಿ ಬಿಟ್ಟು ಹೋಗಿದ್ದಳು. ಹಳೆಯ ಜಾಗದಲ್ಲಿ ಓಡಾಟ ನಡೆಸಿದಾಗ ಸಂಜುಗೆ ಆಗಾಗ ಹಳೆಯ ನೆನಪು ಕಾಡುತ್ತಿದೆ.
ಇದನ್ನೂ ಓದಿ: ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ
ಪತಿಯ ಸಾವಿನ ರಹಸ್ಯ ಬೆನ್ನತ್ತಿ ಹೊರಟ ಅನು
ಅನುಗೆ ಪತಿ ಆರ್ಯವರ್ಧನ್ ಸಾವಿನ ಬಗ್ಗೆ ಅನುಮಾನ ಮೂಡಿದೆ. ಈ ವಿಚಾರದಲ್ಲಿ ಆಕೆ ತನಿಖೆ ಆರಂಭಿಸಿದ್ದಾಳೆ. ಏನೇ ಮಾಡಿದರೂ ಪತಿಯ ಮರಣಪತ್ರ ಸಿಗುತ್ತಿಲ್ಲ. ಇದು ಆಕೆಗೆ ಸಾಕಷ್ಟು ಗೊಂದಲ ಮೂಡಿಸಿದೆ. ಅಲ್ಲದೆ ಸಾಕಷ್ಟು ಅನುಮಾನ ಕೂಡ ಹುಟ್ಟುಹಾಕಿದೆ. ಈ ವಿಚಾರದಲ್ಲಿ ಝೇಂಡೆಗೂ ಅನುಮಾನ ಮೂಡಿತ್ತು. ಅದನ್ನು ಬೆನ್ನತ್ತಿ ಹೋದಾಗ ವಿಶ್ವ ಸತ್ತಿದ್ದಾನೆ, ಆರ್ಯವರ್ಧನ್ ಬದುಕಿದ್ದಾನೆ ಎನ್ನುವ ವಿಚಾರ ತಿಳಿದುಕೊಂಡಿದ್ದ. ಈಗ ಅನು ಕೂಡ ಇದೇ ವಿಚಾರವನ್ನು ಹುಡುಕಿ ಹೊರಟಿದ್ದಾಳೆ.
ಗೊತ್ತಾಗಲಿದೆ ನಿಜ ವಿಚಾರ?
ಸಂಜು ತಾಯಿ ಪ್ರಿಯದರ್ಶನಿ ಸತ್ಯ ಹೇಳಬೇಕು ಎಂದು ರಾಜ ನಂದಿನಿ ವಿಲಾಸಕ್ಕೆ ಬಂದಿದ್ದಳು. ಆಗ ಎದುರಾದ ಝೇಂಡೆ ಸುಳ್ಳು ಹೇಳಿದ್ದ. ಅನುನಿಂದಲೇ ಆರ್ಯನಿಗೆ ಅಪಾಯ ಇದೆ ಎಂದಿದ್ದ. ಇದನ್ನು ನಂಬಿದ್ದ ಪ್ರಿಯದರ್ಶಿನಿ ಸತ್ಯ ಹೇಳಲು ಹಿಂದೇಟು ಹಾಕಿದ್ದಳು. ಈಗ ಅನು ಸತ್ಯವನ್ನು ಹುಡುಕಿ ಹೊರಟಿದ್ದಾಳೆ. ಒಂದೊಮ್ಮೆ ಪ್ರಿಯದರ್ಶಿನಿ ಮನೆಗೆ ಹೋಗಿದ್ದೇ ಆದಲ್ಲಿ ಅಲ್ಲಿ ವಿಶ್ವನ ಫೋಟೋಗೆ ಹೂವು ಹಾಕಲಾಗಿದೆ. ಇದನ್ನು ಕಂಡರೂ ಸಾಕು ಅನುಗೆ ಅಸಲಿ ವಿಚಾರ ಗೊತ್ತಾಗಬಹುದು. ಇನ್ನು ಆಸ್ಪತ್ರೆಗೆ ಹೋಗಿ ವಿಚಾರಣೆ ನಡೆಸಿದರೂ ಅಸಲಿ ವಿಚಾರ ಗೊತ್ತಾಗಲಿದೆ.
ಸಂಜು ನಡೆದುಕೊಳ್ಳುವ ಪ್ರತಿ ನಡೆ ಕೂಡ ಅನುಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಆರ್ಯವರ್ಧನ್ನೇ ಕಂಡಂತೆ ಆಕೆಗೆ ಅನಿಸುತ್ತಿದೆ. ಈ ವಿಚಾರದಲ್ಲಿ ಆಕೆಗೆ ಅನುಮಾನ ಮೂಡಿತ್ತು. ಆರ್ಯವರ್ಧನ್ ರೀತಿ ಮತ್ತೊಂದು ವ್ಯಕ್ತಿ ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಆಕೆಯನ್ನು ಕಾಡಿತ್ತು. ಈಗ ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಾದರೆ ಆಕೆಗೆ ಹೇಗೆ ವರ್ತಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.