Lakshana Serial: ಮಗ ಬದುಕಿರುವ ವಿಷಯ ಶಕುಂತಳಾದೇವಿಗೆ ಗೊತ್ತಾಗಿದೆ, ಡೆವಿಲ್ ಹುಡುಕಾಟದಲ್ಲಿ ಭೂಪತಿ- ನಕ್ಷತ್ರ
ಡೆವಿಲ್ ನಮ್ಮ ಮನೆಯ ಮೇಲೆ ಒಂದು ಕಣ್ಣು ಇಟ್ಟಿದ್ದಾಳೆ. ಇಂತಹ ಸಂದರ್ಭದಲ್ಲಿ ಅತ್ತೆಗೆ ಈ ವಿಷಯ ಹೇಳುವುದು ಸರಿಯಿರಲ್ಲ ಭೂಪತಿ ಅಂತ ನಕ್ಷತ್ರ ಹೇಳಿದರೂ ಅಮ್ಮನ ತೊಳಲಾಟವನ್ನು ನೋಡಲಾರದೆ ಭೂಪತಿ ತನ್ನ ತಾಯಿಗೆ ಸತ್ಯವನ್ನು ಹೇಳಲು ಹೋಗುತ್ತಾನೆ. ಆತನ ಹಿಂದೆಯೇ ನಕ್ಷತ್ರ ಕೂಡಾ ಹೋಗುತ್ತಾಳೆ.
ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಮೌರ್ಯ ಸತ್ತಿದ್ದಾನೆ ಎಂಬುದು ಒಂದು ನಾಟಕವಾಗಿತ್ತು. ಡೆವಿಲ್‌ಗೆ ಅವಳ ದಾರಿಯಲ್ಲೇ ಬುದ್ಧಿ ಕಲುಹಿಸಲು ಮೌರ್ಯ, ನಕ್ಷತ್ರ ಹಾಗೂ ಚಂದ್ರಶೇಖರ್ ಮಾಡಿರುವಂತಹ ಪ್ಲಾನ್ ಎಂಬುವುದನ್ನು ಭೂಪತಿಗೆ ಸ್ವತಃ ನಕ್ಷತ್ರಳೇ ಹೇಳುತ್ತಾಳೆ.
ಡೆವಿಲ್ ಹುಡುಕಾಟದಲ್ಲಿ ಭೂಪತಿ- ನಕ್ಷತ್ರ
ನೋಡುವುದಾದರೆ ನಕ್ಷತ್ರ ನಡೆದ ಘಟನೆಯ ಬಗ್ಗೆ ಹೇಳಿದ ಮೇಲೆ ಭೂಪತಿಗೆ ಒಂದು ಡೌಟ್ ಬರುತ್ತೆ. ಅದೇನೆಂದರೆ ನಿನ್ನ ತಂದೆ ಕೊಲೆ ಮಾಡಿಲ್ಲ ಅಂತಿದ್ದರೆ ಮೊನ್ನೆ ಏನಕ್ಕೆ ಪ್ರೆಸ್‌ನವರು ಅಲ್ಲಿದ್ದರು ಯಾಕೆ ಅಂತಾ. ಅದಕ್ಕೆ ನಕ್ಷತ್ರ ಅದೆಲ್ಲ ನಮ್ಮದೇ ಪ್ಲಾನ್, ಅವರೆಲ್ಲ ಅಪ್ಪನ ಕಡೆಯವರೇ, ಡೆವಿಲ್‌ಗೆ ನಂಬಿಕೆ ಬರಿಸಲು ಆ ರೀತಿಯ ನಾಟಕ ಮಾಡಬೇಕಾಯಿತು ಅಂತ ನಕ್ಷತ್ರ ಹೇಳುವಾಗ ಹಾಗಿದ್ದರೆ ನ್ಯೂಸ್ ಪೇಪರ್ ಫಸ್ಟ್ ಪೇಜ್‌ನಲ್ಲೇ ನಿನ್ನ ತಂದೆಯ ಸ್ಟೋರಿ ಬಂದಿದೆಯಲ್ಲ ನಕ್ಷತ್ರ ಎಂದು ಭೂಪತಿ ಹೇಳುತ್ತಾನೆ.
ಇದೇ ವಿಷಯವನ್ನು ನಾನು ನಿನಗೆ ಹೇಳಬೇಕೆಂದು ಬಂದೆ. ಇಲ್ಲಿ ನೋಡು ಯಾವ ಪೇಪರ್‌ನಲ್ಲೂ ಬರದ ಸುದ್ದಿ ಬರೀ ಈ ಒಂದು ನ್ಯೂಸ್ ಪೇಪರ್‌ನಲ್ಲಿ ಬಂದಿದೆ. ಅಂದ್ರೆ ಇದು ಆ ಡೆವಿಲ್ ಕೆಲಸನೇ ಇರಬಹುದಲ್ವಾ ಎಂದು ನಕ್ಷತ್ರ ಹೇಳುತ್ತಾಳೆ. ಆ ತಕ್ಷಣ ನ್ಯೂಸ್ ಪೇಪರ್ ನೋಡಿದ ಭೂಪತಿ ಈ ಪತ್ರಿಕೆಯ ಎಡಿಟರ್‌ನ್ನು ಹಿಡಿದ್ರೆ ಖಂಡಿತವಾಗಿಯೂ ಡೆವಿಲ್ ಯಾರೆಂಬುವುದು ನಮಗೆ ಗೊತ್ತಾಗುತ್ತದೆ. ಈ ಒಂದು ಪ್ರೂಫ್ ಸಾಕು ನಕ್ಷತ್ರ, ಆಕೆಯ ಬಣ್ಣ ಬಯಲಾಗಲು ಅಂತ ಹೇಳಿ ಅದಕ್ಕಿಂತ ಮೊದಲು ಒಂದು ಕಾರ್ಯ ಆಗಬೇಕಿದೆ. ಅದೇನೆಂದರೆ ಮೌರ್ಯ ಬದುಕಿರುವ ವಿಷಯ ಅಮ್ಮನಿಗೆ ಗೊತ್ತಾಗಲೇಬೇಕು ಎಂದು ಭೂಪತಿ ಹೇಳುತ್ತಾನೆ.
ಡೆವಿಲ್ ನಮ್ಮ ಮನೆಯ ಮೇಲೆ ಒಂದು ಕಣ್ಣು ಇಟ್ಟಿದ್ದಾಳೆ. ಇಂತಹ ಸಂದರ್ಭದಲ್ಲಿ ಅತ್ತೆಗೆ ಈ ವಿಷಯ ಹೇಳುವುದು ಸರಿಯಿರಲ್ಲ ಭೂಪತಿ ಅಂತ ನಕ್ಷತ್ರ ಹೇಳಿದರೂ ಅಮ್ಮನ ತೊಳಲಾಟವನ್ನು ನೋಡಲಾರದೆ ಭೂಪತಿ ತನ್ನ ತಾಯಿಗೆ ಸತ್ಯವನ್ನು ಹೇಳಲು ಹೋಗುತ್ತಾನೆ. ಆತನ ಹಿಂದೆಯೇ ನಕ್ಷತ್ರ ಕೂಡಾ ಹೋಗುತ್ತಾಳೆ.
ಅವರಿಬ್ಬರೂ ಶಕುಂತಳಾದೇವಿ ಬಳಿ ಹೋದಂತಹ ಸಂದರ್ಭದಲ್ಲಿ ಮಗ ಸತ್ತು ಹೋದನೆಂದು ತಿಳಿದಿದ್ದ ಶಕುಂತಳಾದೇವಿ ಮೌರ್ಯನ ಫೋಟೋ ಹಿಡಿದು ಪುತ್ರ ವಿಯೋಗದಿಂದ ಯಾಕೋ ಈ ತಾಯಿಯನ್ನು ಬಿಟ್ಟು ಹೋದೆ ಎಂದು ಅಳುತ್ತಾ ಕೂತಿರುತ್ತಾರೆ. ಆಗ ನೀವು ಅಳುವ ಅವಶ್ಯಕತೆ ಇಲ್ಲ ಅಮ್ಮ. ಮೌರ್ಯ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಭೂಪತಿ ಹೇಳುತ್ತಾನೆ.
ಆತನ ಮಾತನ್ನು ಕೇಳಿ ಶಕುಂತಳಾದೇವಿಗೆ ನಂಬಲ ಸಾಧ್ಯವಾಗಿ ಏನು ಹೇಳುತ್ತಿದ್ದೀಯಾ ಎಂದು ಭೂಪತಿಯನ್ನೇ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಉತ್ತರಿಸಿದ ನಕ್ಷತ್ರ ಇದೆಲ್ಲಾ ನಿಜ ಅತ್ತೆ. ಮೌರ್ಯ ಅವರು ಬದುಕಿದ್ದಾರೆ. ಅಪ್ಪ ಅವನನ್ನು ಸೇಫ್ ಜಾಗದಲ್ಲಿ ಇರಿಸಿದ್ದಾರೆ ಎಂದು ಹೇಳುತ್ತಾಳೆ. ನಕ್ಷತ್ರಳ ಈ ಮಾತಿಗೆ ಕೋಪಗೊಂಡ ಶಕುಂತಳಾದೇವಿ ನೀವು ಅಪ್ಪ ಮಗಳು ಸೇರಿ ಏನು ಆಟ ಆಡುತಿದ್ದೀರಾ. ನನ್ನ ಮಗನ ಪ್ರಾಣದ ಜೊತೆಗೆ ಚೆಲ್ಲಾಟವಾಡಲು ಎಷ್ಟು ಧೈರ್ಯ, ನಿಮಗೆ ಮಾನವೀಯತೆ ಎನ್ನುವುದು ಚೂರಾದರೂ ಇದೆಯಾ ಅಂತ ನಕ್ಷತ್ರಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ.
ಇದನ್ನು ಓದಿ: Lakshana Serial: ಮೌರ್ಯ ಬದುಕಿದ್ದಾನೆ! ಶಾಕಿಂಗ್ ಸುದ್ದಿ ನೀಡಿದ ನಕ್ಷತ್ರ
ಅತ್ತೆ ಇಷ್ಟು ಮಾತನಾಡಿದರೂ ಬೇಜಾರಾಗದ ನಕ್ಷತ್ರ ಇದೆಲ್ಲ ನಾಟಕವನ್ನು ಡೆವಿಲ್ ಸಲುವಾಗಿ ಮಾಡಬೇಕಾಯಿತು ಎಂದು ಹೇಳುತ್ತಾಳೆ. ಡೆವಿಲ್ ಎಂಬ ಪದವನ್ನು ಕೇಳಿ ಕೋಪಗೊಂಡ ಶಕುಂತಳಾದೇವಿ ನಕ್ಷತ್ರಳ ಕಪಾಳಕ್ಕೆ ಒಂದು ಬಾರಿಸಿ, ಅವಳ ಕಾರಣಕ್ಕೆ ನನ್ನ ಮಗನ ಪ್ರಾಣದ ಜೊತೆ ಆಟ ಆಡುತ್ತಿರಾ ಎಂದು ಹೇಳುತ್ತಾರೆ. ಆಗ ಭೂಪತಿ ಡೆವಿಲ್‌ನಿಂದ ಪ್ರಾಣಕ್ಕೆ ಅಪಾಯ ಇರುವುದು ಮೌರ್ಯನಿಗೆ ಅಮ್ಮ. ಆಕೆಯೇ ಮೌರ್ಯನನ್ನು ಸಾಯಿಸಲು ಹೋದದ್ದು ಅಂತ ಅಮ್ಮನಿಗೆ ನಡೆದ ಘಟನೆಯ ಬಗ್ಗೆ ವಿವರಿಸುತ್ತಾನೆ. ಇದರಿಂದ ಭಯಗೊಂಡ ಶಕುಂತಳಾದೇವಿ ಇವಳ್ಯಾರು ಡೆವಿಲ್ ಈಕೆಗೆ ಏನಕ್ಕೆ ನನ್ನ ಮಕ್ಕಳ ಪ್ರಾಣದ ಜೊತೆ ಆಟವಾಡುತ್ತಿದ್ದಾಳೆ.
ಲಾಸ್ಟ್ ಟೈಮ್ ನೀನು ಭೂಪತಿ ಈ ಸಲ ಮೌರ್ಯನ ಪ್ರಾಣಕ್ಕೆ ಕುತ್ತು ತರಲು ಹೊರಟಿದ್ದಾಳಾ ಎಂದು ಚಿಂತೆ ಮಾಡಿಕೊಳ್ಳುತ್ತಾರೆ. ಅಮ್ಮನ ಈ ಪರಿಸ್ಥಿತಿಯನ್ನು ಕಂಡು ಅಮ್ಮ ಮೌರ್ಯ ಈಗ ಸೇಫ್ ಆಗಿದ್ದಾನೆ ಅಲ್ವ ನೀನೇನು ಚಿಂತೆ ಮಾಡಬೇಡ. ಆ ಡೆವಿಲ್ ಬಗ್ಗೆ ಒಂದು ಕ್ಲೂ ಸಿಕ್ಕಿದೆ. ಅದರಿಂದ ಅವಳಿಗೆ ಸುಲಭವಾಗಿ ಬದಲಾಯಿಸಬಹುದು ಎಂದು ಭೂಪತಿ ಹೇಳುತ್ತಾನೆ. ಆಗ ಶಕುಂತಳಾದೇವಿ ಆ ಸಿ.ಎಸ್‌ಗಾಗಿ ನೀನು ಯಾಕೆ ಈ ರಿಸ್ಕ್ ಎಲ್ಲ ತೆಗೆದುಕೊಳ್ಳಬೇಕು, ಸುಮ್ಮನೆ ಇರು ನೀನು ಎಂದು ಭೂಪತಿಗೆ ಹೇಳಿದಾಗ, ಆಕೆಯಿಂದ ತೊಂದರೆ ಇರುವಂತಹದ್ದು ನಮ್ಮ ಮೌರ್ಯನಿಗೆ ಅಮ್ಮ. ಅವನನ್ನು ಕಾಪಡಲು ಈ ಕೆಲಸ ಮಾಡಲೇಬೇಕಾಗಿದೆ ಎಂದು ಹೇಳುತ್ತಾನೆ. ನಕ್ಷತ್ರ, ಭೂಪತಿ ಪ್ಲಾನ್ ಪ್ರಕಾರ ಡೆವಿಲ್ ಇವರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾಳಾ ಎಂಬುವುದನ್ನು ಮುಂದೆ ನೋಡಬೇಕಾಗಿದೆ. ಮಧುಶ್ರೀ ಅಂಚನ್
Published On - 10:08 am, Wed, 7 December 22