Lakshana Serial: ಮೌರ್ಯ ಬದುಕಿದ್ದಾನೆ! ಶಾಕಿಂಗ್ ಸುದ್ದಿ ನೀಡಿದ ನಕ್ಷತ್ರ

ನಕ್ಷತ್ರ ಭೂಪತಿಯ ಮುಂದೆ ನಿಂತು ಒಂದು ಸಾರಿ ಅತ್ತೆಯ ಜೊತೆ ಮಾತನಾಡಲು ಅವಕಾಶ ಮಾಡಿಕೊಡೋ ಎಂದು ಕೇಳಿಕೊಳ್ಳುತ್ತಾಳೆ. ಆದರೆ ಭೂಪತಿ ಅದಕ್ಕೆ ಒಪ್ಪಿಕೊಳ್ಳದೆ ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡು, ಈಗ ಏನನ್ನೂ ಮಾತನಾಡಲು ಹೋಗಬೇಡ ಎಂದು ಹೇಳಿ ಹೋಗುತ್ತಾನೆ.

Lakshana Serial: ಮೌರ್ಯ ಬದುಕಿದ್ದಾನೆ! ಶಾಕಿಂಗ್ ಸುದ್ದಿ ನೀಡಿದ ನಕ್ಷತ್ರ
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 03, 2022 | 10:31 AM

ಧಾರಾವಾಹಿ: ಲಕ್ಷಣ (Lakshana)

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಚಂದ್ರಶೇಖರ್ ಮಾಡಿರುವ ತಪ್ಪಿಗೆ ಭೂಪತಿಯ ಮನೆಯವರ ಮುಂದೆ ನಕ್ಷತ್ರ ತಪ್ಪಿತಸ್ಥೆಯ ಸ್ಥಾನದಲ್ಲಿ ನಿಲ್ಲಬೇಕಾಯಿತು. ಇದಲ್ಲದೆ ಮಗನನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಸಂದರ್ಭದಲ್ಲಿ ಅತ್ತೆ ನಿಮ್ಮ ಜೊತೆ ಮಾತನಾಡಬೇಕೆಂದು ನಕ್ಷತ್ರ ಶಕುಂತಳಾದೇವಿ ಬಳಿ ಕೇಳಿಕೊಳ್ಳುತ್ತಾಳೆ. ಆದರೆ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ.

ಮೌರ್ಯ ಸತ್ತಿಲ್ಲ, ಭೂಪತಿ ಶಾಕ್

ನಕ್ಷತ್ರ ಭೂಪತಿಯ ಮುಂದೆ ನಿಂತು ಒಂದು ಸಾರಿ ಅತ್ತೆಯ ಜೊತೆ ಮಾತನಾಡಲು ಅವಕಾಶ ಮಾಡಿಕೊಡೋ ಎಂದು ಕೇಳಿಕೊಳ್ಳುತ್ತಾಳೆ. ಆದರೆ ಭೂಪತಿ ಅದಕ್ಕೆ ಒಪ್ಪಿಕೊಳ್ಳದೆ ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡು, ಈಗ ಏನನ್ನೂ ಮಾತನಾಡಲು ಹೋಗಬೇಡ ಎಂದು ಹೇಳಿ ಹೋಗುತ್ತಾನೆ. ಅತ್ತೆ ಹಾಗೂ ಗಂಡನ ಜೊತೆ ಮಾತನಾಡಲು ಅವರಿಗೆ ಸಮಾಧಾನ ಮಾಡಲು ಅವಕಾಶವೇ ಸಿಗುತ್ತಿಲ್ಲ ಎಂಬ ಚಿಂತೆಯಿಂದ ರಾತ್ರಿ ಪೂರ ಕಾಲ ಕಳೆಯುತ್ತಾಳೆ. ಅಮ್ಮ ಆರತಿಗೆ ಕಾಲ್ ಮಾಡಿ ಸಮಾಧಾನ ಮಾಡಲು ಮುಂದಾಗುತ್ತಾಳೆ. ಆದರೆ ತಾಯಿಗೆ ಮಗಳ ಮೇಲೆ ಸಿಟ್ಟು ತುಸು ಹೆಚ್ಚೇ ಇತ್ತು. ಯಾಕೆಂದರೆ ತಂದೆಯ ವಿರುದ್ಧವೇ ಹೆತ್ತ ಮಗಳು ನಿಂತರೆ ಯಾವ ತಾಯಿ ಸುಮ್ಮನಿರುಯತ್ತಾಳೆ ಹಾಗೇ ಆರತಿ ಕೂಡಾ ನಕ್ಷತ್ರಳ ಜೊತೆ ಕೋಪದಿಂದಲೇ ಮಾತನಾಡುತ್ತಾಳೆ. ನನ್ನ ಗಂಡನನ್ನು ಹೇಗಾದರೂ ನಾನು ಜೈಲಿನಿಂದ ಬಿಡಿಸುತ್ತೇನೆ. ಅವರ ಘನತೆಗೆ ಕುತ್ತು ಬರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭಾರ್ಗವಿ ಬಳಿ ಹೇಳಿಕೋಳ್ಳುತ್ತಾಳೆ.

ಇತ್ತ ಕಡೆ ಬೆಳಗಾಗುತ್ತಿದ್ದಂತೆ ನಕ್ಷತ್ರ ಒಂದಷ್ಟು ನ್ಯೂಸ್ ಪೇಪರ್​ಗಳನ್ನು ಮನೆಗೆ ತೆಗೆದುಕೊಂಡು ಬಂದು ಆಕೆಯ ತಂದೆಯ ಕುರಿತ ಏನಾದರೂ ಸುದ್ದಿ ಬಂದಿದೆಯಾ ಎಂದು ನೋಡುತ್ತಿರುವಾಗ ಫ್ರಂಟ್ ಪೇಜ್‌ನಲ್ಲೇ ಚಂದ್ರಶೇಖರ್ ಅವರು ಮೌರ್ಯನ ಕೊಲೆ ಮಾಡಿರುವ ಸುದ್ದಿಯನ್ನು ದೊಡ್ಡದಾಗಿ ಬರೆಯಲಾಗಿತ್ತು. ಇದನ್ನು ನೋಡಿದ ನಕ್ಷತ್ರಳಿಗೆ ನೋವುಂಟಾಗುತ್ತದೆ.

ಆ ತಕ್ಷಣವೇ ಭೂಪತಿಯ ಬಳಿ ಹೋಗಿ ನ್ಯೂಸ್ ಪೇಪರ್ ತೋರಿಸಿ ತನ್ನ ತಂದೆಯ ಬಗ್ಗೆ ಹೀಗೆಲ್ಲಾ ಸುದ್ದಿ ಬಂದಿದೆ ಏನು ಮಾಡೋದು ಭೂಪತಿ ಎಂದು ಆತನ ಬಳಿ ಹೇಳುತ್ತಾಳೆ. ನ್ಯೂಸ್ ಪೇಪರ್‌ನಲ್ಲಿ ಬಂದಿರುವುದು ಸುಳ್ಳು ಸುದ್ದಿಯೇನು ಅಲ್ಲಲ್ವ. ಅದು ನೀಜನೇ ತಾನೆ. ನಿನ್ನ ತಂದೆ ಮಾಡಿರುವ ತಪ್ಪಿನ ಬಗ್ಗೆಯೇ ಸುದ್ದಿ ಬಂದಿರೋದು ಅಲ್ವ. ಹೋ ತಂದೆಯ ಪರ ವಹಿಸಿಕೊಂಡು ಬರುತ್ತಿರುವೆಯಾ ಮೊದಲು ಇಲ್ಲಿಂದ ಹೊರ ಹೋಗು, ನನ್ನನ್ನು ಒಬ್ಬನೇ ಇರೋದಕ್ಕೆ ಬಿಡು ಅಂತ ಹೇಳುತ್ತಾ ಭೂಪತಿ ತಮ್ಮನನ್ನು ಕಳೆದುಕೊಂಡ ನೋವಿನಲ್ಲೇ ಮಾತನಾಡುತ್ತಾನೆ.

ಇದನ್ನು ಓದಿ: Lakshana Serial: ತಂದೆ ಮಾಡಿದ ತಪ್ಪಿಗೆ ಭೂಪತಿಯ ಮನೆಯವರ ಮುಂದೆ ಕೆಟ್ಟವಳಾಗಿ ನಿಂತಿದ್ದಾಳೆ ನಕ್ಷತ್ರ

ಆದರೆ ನಕ್ಷತ್ರ ನನಗೆ ಏನೋ ಮಾತನಾಡಲು ಇದೆ. ಒಂದು ಅವಕಾಶ ನೀಡು ಭೂಪತಿ ಎಂದು ಕೇಳಿಕೋಳ್ಳುತ್ತಾಳೆ. ಆದರೆ ಭೂಪತಿ ಆಕೆಯ ಮಾತನ್ನು ಕೇಳಲು ತಯಾರಿರುವುದಿಲ್ಲ. ಆದರೂ ನಕ್ಷತ್ರ ಸತ್ಯ ಏನೆಂಬುವುದುನ್ನು ಭೂಪತಿಗೆ ತಿಳಿಸಲೇಬೇಕು ಎಂದು ಧೃಡ ನಿರ್ಧಾರ ಮಾಡಿ ಮೌರ್ಯನ ಕೊಲೆ ಆಗಿಲ್ಲ ಅವನು ಬದುಕಿದ್ದಾನೆ ಎನ್ನುವ ಸತ್ಯವನ್ನು ಭೂಪತಿಗೆ ಹೇಳುತ್ತಾಳೆ. ಈಕೆಯ ಮಾತನ್ನು ಕೇಳಿ ಭೂಪತಿಗೆ ಒಂದು ಕ್ಷಣ ಉಸಿರು ನಿಂತಂತಾಗುತ್ತದೆ. ತಲೆ ಸರಿಯಿದೆಯಾ ನಕ್ಷತ್ರ. ಸತ್ತವರು ಅದು ಹೇಗೆ ಬದುಕಲು ಸಾಧ್ಯ. ನೀನು ಏನೇನು ಹೇಳಬೇಡ. ಮೊದಲೇ ತಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಇದ್ದೇವೆ. ನೀನು ಏನೇನೋ ಹೇಳಿ ಇನ್ನಷ್ಟು ನೋವು ತರಿಸಬೇಡ ನಕ್ಷತ್ರ ಅಂತ ಕೈ ಮುಗಿದು ಕೇಳಿಕೊಳ್ಳುತ್ತಾನೆ.

ಭೂಪತಿ ಹೀಗೆಲ್ಲಾ ಹೇಳಿದರೆ ನನ್ನ ಮಾತನ್ನು ನಂಬಲ್ಲ ಅಂತ ಅಂದುಕೊಂಡ ನಕ್ಷತ್ರ ತನ್ನ ತಾಯಿಯ ಮೇಲೆ ಆಣೆ ಮಾಡಿ ಮೌರ್ಯ ನಿಜವಾಗಿಯೂ ಬದುಕಿದ್ದಾರೆ ಭೂಪತಿ. ಅವರು ಸೇಫ್ ಆಗಿ ಇದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಹೋದ ಜೀವ ವಾಪಸ್ ಬಂದಂತಾಗುತ್ತದೆ ಭೂಪತಿಗೆ. ಇದು ನಿಜಾನ ಎಂದು ಇನ್ನೊಂದು ಬಾರಿ ಭೂಪತಿ ಕೇಳಿದಾಗ ನಿಜ ಕಣೋ, ಮೌರ್ಯನಿಗೆ ಏನು ಆಗಿಲ್ಲ. ಅವರನ್ನು ಕೊಲೆನೂ ಮಾಡಿಲ್ಲ ಇದೆಲ್ಲ ನಾವು ಮಾಡಿದ ನಾಟಕ ಎಂದು ಕೇಳುತ್ತಾಳೆ ನಕ್ಷತ್ರ. ಇವರು ಯಾತಕ್ಕಾಗಿ ಮೌರ್ಯನ ಕೊಲೆ ಮಾಡಿರುವ ನಾಟಕವಾಡಿದ್ದು, ಏನಿದರ ಉದ್ದೇಶ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.

ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Sat, 3 December 22