‘ಆಸ್ತಿಯಲ್ಲಿ ಪಾಲು ಕೊಡೋಕೆ ನಾನು ಅರ್ಹನಲ್ಲ’; ಸಾನಿಯಾ ಎದುರು ವಿಲ್ ವಿಚಾರ ಹೇಳಿದ ಹರ್ಷ

ಎಂಡಿ ಪಟ್ಟ ಪಡೆದುಕೊಳ್ಳಬೇಕು ಎಂಬುದು ಸಾನಿಯಾ ಉದ್ದೇಶ. ಆಸ್ತಿಯಲ್ಲಿ ಪಾಲು ಕೇಳಬೇಕು ಎಂಬುದು ಸುದರ್ಶನ್ ಆಲೋಚನೆ. ಈ ಎಲ್ಲಾ ಕನಸಿಗೆ ರತ್ನಮಾಲಾ ಮಣ್ಣೆರೆಚಿದ್ದಳು.

‘ಆಸ್ತಿಯಲ್ಲಿ ಪಾಲು ಕೊಡೋಕೆ ನಾನು ಅರ್ಹನಲ್ಲ’; ಸಾನಿಯಾ ಎದುರು ವಿಲ್ ವಿಚಾರ ಹೇಳಿದ ಹರ್ಷ
ಸಾನಿಯಾ-ಹರ್ಷ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 03, 2022 | 6:38 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಹರ್ಷ ಹಾಗೂ ಭುವಿ ಮಧ್ಯೆ ವೈಮನಸ್ಸು ಮೂಡುವ ಮುನ್ಸೂಚನೆ ಸಿಕ್ಕಿತ್ತು. ಆದರೆ, ಹರ್ಷ ಪ್ರೀತಿಯಿಂದ ಭುವಿಯನ್ನು ಗೆಲ್ಲಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಭುವಿಗೆ ಹರ್ಷ ಮೋಸ ಮಾಡುತ್ತಿದ್ದಾನೆ ಎಂದು ಅನಿಸುತ್ತಿದೆ. ಆದರೆ, ಭುವಿ ಮನಸ್ಸು ಹರ್ಷನನ್ನು ನಂಬು ಎನ್ನುತ್ತಿದೆ. ಈ ತಿಕ್ಕಾಟದ ಮಧ್ಯೆ ಏನು ಮಾಡಬೇಕು ಎಂಬುದು ಆಕೆಗೆ ತಿಳಿಯುತ್ತಿಲ್ಲ.

ಪ್ರಾಣ ಉಳಿಸಿದ ಹೂವು

ಭುವಿಗೆ ಹರ್ಷ ಪ್ರೀತಿಯಿಂದ ಮಲ್ಲಿಗೆ ಹೂವಿನ ಮಾಲೆ ತಂದುಕೊಟ್ಟಿದ್ದ. ಅದನ್ನು ಭುವಿ ಕೈಯಲ್ಲಿ ಹಿಡಿದುಕೊಂಡಿದ್ದಳು. ತಲೆ ಸುತ್ತು ಬಂದಿದ್ದರಿಂದ ಆಕೆ ನೀರಿಗೆ ಬಿದ್ದಿದ್ದಾಳೆ. ಭುವಿ ಎಲ್ಲಿ ಹೋದಳು ಎಂಬುದು ಹರ್ಷನಿಗೆ ಗೊತ್ತಾಗಲೇ ಇಲ್ಲ. ತಂದುಕೊಟ್ಟ ಹೂವು ನೀರಿನಲ್ಲಿ ಕಂಡಿದ್ದರಿಂದ ಹರ್ಷನಿಗೆ ಭುವಿ ನೀರಿಗೆ ಬಿದ್ದಿದ್ದಾಳೆ ಅನ್ನೋದು ಗೊತ್ತಾಗಿದೆ. ನೀರಿಗೆ ಹಾರಿ ಆಕೆಯನ್ನು ರಕ್ಷಣೆ ಮಾಡಿದ್ದಾನೆ.

ಹರ್ಷನ ಪ್ರೀತಿಗೆ ಮನಸೋತ ಭುವಿ

ಭುವಿ ನೀರಿಗೆ ಬಿದ್ದಿದ್ದರಿಂದ ಹರ್ಷ ಟೆನ್ಷನ್ ಆಗಿದ್ದಾನೆ. ನೀರಿನಿಂದ ಹೊರಗೆ ಕರೆದುಕೊಂಡು ಬಂದ ನಂತರದಲ್ಲಿ ಭುವಿಗೆ ಎಚ್ಚರವಾಗಿದೆ. ಪ್ರೀತಿಯಿಂದ ಆತ ಭುವಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ‘ಅಮ್ಮಮ್ಮ ಕೂಡ ಹೀಗೆ. ಹೇಳಿದ ಮಾತು ಕೇಳುತ್ತಿರಲಿಲ್ಲ. ಇವರು ಕೂಡ ಹಾಗೇ. ಹೇಳಿದ ಮಾತನ್ನು ಕೇಳುವುದಿಲ್ಲ. ಇವರು ಜೂನಿಯರ್ ಅಮ್ಮಮ್ಮ’ ಎಂದಿದ್ದಾನೆ ಹರ್ಷ. ಪತಿಯ ಪ್ರೀತಿ ಕಂಡು ತಾನು ಅಂದುಕೊಂಡಿದ್ದು ತಪ್ಪು ಅನ್ನೋದು ಭುವಿಗೆ ಗೊತ್ತಾಗಿದೆ.

ನಿಜ ಹೇಳಿದ ಹರ್ಷ

ಹರ್ಷನನ್ನು ಅರೆಸ್ಟ್ ಮಾಡೋಕೆ ಪೊಲೀಸರು ಬಂದಿದ್ದಾರೆ. ಸಾನಿಯಾ ಮೇಲೆ ಕೊಲೆ ಪ್ರಯತ್ನ ಮಾಡಿದ್ದ ಎಂಬ ಆರೋಪದ ಮೇಲೆ ಹರ್ಷನನ್ನು ಬಂಧಿಸಲಾಗುತ್ತಿದೆ. ಅರೆಸ್ಟ್ ಆಗುವುದಕ್ಕೂ ಮೊದಲು ಪೊಲೀಸರ ಬಳಿ 10 ನಿಮಿಷ ಕಾಲಾವಕಾಶ ಕೇಳಿದ್ದಾನೆ ಹರ್ಷ. ಈ ವೇಳೆ ಹರ್ಷ ನಿಜ ವಿಚಾರ ಹೇಳಿದ್ದಾನೆ.

ಎಂಡಿ ಪಟ್ಟ ಪಡೆದುಕೊಳ್ಳಬೇಕು ಎಂಬುದು ಸಾನಿಯಾ ಉದ್ದೇಶ. ಆಸ್ತಿಯಲ್ಲಿ ಪಾಲು ಕೇಳಬೇಕು ಎಂಬುದು ಸುದರ್ಶನ್ ಆಲೋಚನೆ. ಈ ಎಲ್ಲಾ ಕನಸಿಗೆ ರತ್ನಮಾಲಾ ಮಣ್ಣೆರೆಚಿದ್ದಳು. ಆಸ್ತಿಯಲ್ಲಿ ಪಾಲು ಕೇಳುವ ಮೊದಲೇ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ರತ್ನಮಾಲಾ ಬರೆದಿಟ್ಟಿದ್ದಳು. ಅವಳು ಆಸ್ತಿ ಪಡೆಯಲು ಸರಿಯಾದ ವ್ಯಕ್ತಿ ಎಂದು ಆಕೆಗೆ ಅನಿಸಿದೆ. ಈ ಕಾರಣಕ್ಕೆ ರತ್ನಮಾಲಾ ಈ ನಿರ್ಧಾರಕ್ಕೆ ಬಂದಿದ್ದಳು. ಈ ವಿಚಾರವನ್ನು ಹರ್ಷ ಸಾನಿಯಾ ಹಾಗೂ ಸುದರ್ಶನ್ ಎದುರು ಹೇಳಿಕೊಂಡಿದ್ದಾನೆ.

‘ನಾನು ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದೆ. ಸುದರ್ಶನ್​ಗೆ ಆಸ್ತಿಯಲ್ಲಿ ಪಾಲು ಕೊಡಬಾರದು ಎನ್ನುವ ನಿರ್ಧಾರಕ್ಕೆ ಬಂದೆ. ಆದರೆ, ಅಮ್ಮಮ್ಮನ ಆಲೋಚನೆ ಬೇರೆಯೇ ಇತ್ತು. ಸುದರ್ಶನ್​​ ಮಾವನಿಗೆ ಆಸ್ತಿಯಲ್ಲಿ ಪಾಲು ಕೊಡಲು ನನಗೆ ಹಕ್ಕೂ ಇಲ್ಲ, ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆಯಲು ನಾನು ಅರ್ಹನೂ ಅಲ್ಲ’ ಎಂದಿದ್ದಾನೆ. ಈ ಮೂಲಕ ಸಾನಿಯಾಗೆ ಶಾಕ್ ನೀಡಿದ್ದಾನೆ.

ಸೌಪರ್ಣಿಕಾ ಅನ್ನೋದು ಭುವಿಯ ಮೂಲ ಹೆಸರು. ಆಕೆಯ ಹೆಸರಿಗೆ ಆಸ್ತಿ ವರ್ಗಾವಣೆ ಆಗಿದೆ. ಈ ವಿಚಾರ ಗೊತ್ತಾದರೆ ಸಾನಿಯಾಗೆ ಶಾಕ್ ಆಗೋದು ಗ್ಯಾರಂಟಿ.

ವರುಧಿನಿ ಪ್ಲ್ಯಾನ್ ವಿಫಲ?

ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಅನ್ನೋದು ವರುಧಿನಿ ಪ್ಲ್ಯಾನ್. ಆದರೆ, ಆಕೆಯ ಎಲ್ಲಾ ಪ್ಲ್ಯಾನ್​ಗಳು ವಿಫಲವಾಗುತ್ತಿದೆ. ಭುವಿ ಬಳಿ ಹರ್ಷನ ವಿರುದ್ಧ ವರು ದ್ವೇಷದ ಬೀಜ ಬಿತ್ತುತ್ತಿದ್ದಾಳೆ. ಆದರೆ, ಹರ್ಷ ಹೆಚ್ಚೆಚ್ಚು ಪ್ರೀತಿ ತೋರುವ ಮೂಲಕ ಭುವಿ ಅಂದುಕೊಂಡಿದ್ದು ಸುಳ್ಳು ಎಂಬುದನ್ನು ಸಾಬೀತು ಮಾಡುತ್ತಿದ್ದಾನೆ.

ಶ್ರೀಲಕ್ಷ್ಮಿ ಎಚ್.