ಪತ್ನಿ ಬಂದು ಹೋದ ಮೇಲೆ ಹೆಂಗ್​ ಹೆಂಗೋ ಆಡ್ತಿದ್ದಾರೆ ರೂಪೇಶ್ ರಾಜಣ್ಣ; ವೈರಲ್ ಆಯ್ತು ವಿಡಿಯೋ

TV9kannada Web Team

TV9kannada Web Team | Edited By: Rajesh Duggumane

Updated on: Dec 02, 2022 | 10:59 AM

ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಜೋಡಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇಬ್ಬರೂ ಉತ್ತಮವಾಗಿ ಮನರಂಜನೆ ನೀಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲ ಕಡೆಗಳಿಂದ ವ್ಯಕ್ತವಾಗಿದೆ.

ಪತ್ನಿ ಬಂದು ಹೋದ ಮೇಲೆ ಹೆಂಗ್​ ಹೆಂಗೋ ಆಡ್ತಿದ್ದಾರೆ ರೂಪೇಶ್ ರಾಜಣ್ಣ; ವೈರಲ್ ಆಯ್ತು ವಿಡಿಯೋ
ರೂಪೇಶ್ ರಾಜಣ್ಣ

ಬಿಗ್ ಬಾಸ್​ನಲ್ಲಿ (Bigg Boss) ಸ್ಪರ್ಧಿಗಳು 69 ದಿನ ಕಳೆದಿದ್ದಾರೆ. 11 ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಇನ್ನು ಒಂದು ತಿಂಗಳು ಕಳೆದರೆ ಬಿಗ್ ಬಾಸ್ ಪೂರ್ಣಗೊಳ್ಳಲಿದೆ. ಈ ವಾರ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಸ್ಪರ್ಧಿಗಳು ಈ ಅವಕಾಶದಿಂದ ಸಖತ್ ಖುಷಿಯಾಗಿದ್ದಾರೆ. ಮುಂದಿನ 30 ದಿನ ಕಳೆಯಲು ಹೊಸ ಚೈತನ್ಯ ಸಿಕ್ಕಿದೆ. ರೂಪೇಶ್ ರಾಜಣ್ಣ (Roopesh Rajanna) ಅವರಂತೂ ಪತ್ನಿ ಬಂದು ಹೋದ ನಂತರದಲ್ಲಿ ಹೆಂಗ್ ಹೆಂಗೋ ಆಡುತ್ತಿದ್ದಾರೆ. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್​ ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಆರಂಭದಲ್ಲಿ ಡಲ್ ಆಗಿದ್ದ ಅವರು ಹಲವು ಬಾರಿ ನಾಮಿನೇಟ್ ಆಗಿದ್ದರು. ಆದರೆ, ದಿನ ಕಳೆದಂತೆ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದರು. ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಜತೆ ಒಳ್ಳೆಯ ಫ್ರೆಂಡ್​​ಶಿಪ್ ಬೆಳೆಸಿಕೊಂಡಿದ್ದಾರೆ. ಈ ಮೂವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ರೂಪೇಶ್ ರಾಜಣ್ಣ ಅವರ ಪತ್ನಿ ಬಿಗ್ ಬಾಸ್​ ಮನೆ ಒಳಗೆ ಬಂದು ಹೋಗಿದ್ದಾರೆ.

ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರಿಗೆ ಮನೆ ಒಳಗೆ ಬರೋಕೆ ಅವಕಾಶ ನೀಡಲಾಗಿತ್ತು. ಇದಕ್ಕಾಗಿ ಟಾಸ್ಕ್​​ಗಳನ್ನು ಆಡಬೇಕಿತ್ತು. ರೂಪೇಶ್ ರಾಜಣ್ಣ ಈ ಟಾಸ್ಕ್​ನಲ್ಲಿ ಗೆದ್ದರು. ಹೀಗಾಗಿ, ಅವರ ಪತ್ನಿ ಮನೆ ಒಳಗೆ ಬಂದಿದ್ದಾರೆ. ಹೆಂಡತಿ ಜತೆ ಮಾತನಾಡಿ ರೂಪೇಶ್ ರಾಜಣ್ಣ ಸಖತ್ ಖುಷಿಯಾಗಿದ್ದಾರೆ.

ಹೆಂಡತಿ ಬಂದು ಹೋದ ನಂತರದಲ್ಲಿ ರೂಪೇಶ್ ರಾಜಣ್ಣ ಹೇಗೆ ನಡೆದುಕೊಂಡರು ಎನ್ನುವ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ರೂಪೇಶ್ ರಾಜಣ್ಣ ಮನೆಯ ಒಳಗೆ ಖುಷಿಯಿಂದ ಓಡಾಡಿದ್ದಾರೆ. ನೆಲದ ಮೇಲೆ ಬಿದ್ದು ಉರುಳಾಡಿದ್ದಾರೆ. ಬಿಗ್ ಬಾಸ್​ಗೆ ಧನ್ಯವಾದ ಹೇಳಿದ್ದಾರೆ. ರೂಪೇಶ್ ಶೆಟ್ಟಿ ಅವರು ರೂಪೇಶ್ ರಾಜಣ್ಣ ಅವರ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ

ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಜೋಡಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇಬ್ಬರೂ ಉತ್ತಮವಾಗಿ ಮನರಂಜನೆ ನೀಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲ ಕಡೆಗಳಿಂದ ವ್ಯಕ್ತವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada