ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಝೇಂಡೆ ಹಾಗೂ ಮೀರಾ ಹೆಗ್ಡೆ ಇಬ್ಬರು ಸಂಜು ಬಗ್ಗೆ ಚರ್ಚೆ ಮಾಡಿದ್ದರು. ಸಂಜು ನಡೆದುಕೊಳ್ಳುತ್ತಿರುವ ರೀತಿ ಇಬ್ಬರಿಗೂ ಅನುಮಾನ ಮೂಡಿಸಿದೆ. ಇತ್ತ ಸಂಜುಗೆ ತಾನು ಯಾರು ಎಂಬ ಪ್ರಶ್ನೆ ಕಾಡಿದೆ. ಈ ವಿಚಾರದಲ್ಲಿ ಆತ ಅನುಳ ಕೈ ಹಿಡಿದು ಹೇಳುವಂತೆ ಒತ್ತಾಯಿಸಿದ್ದಾನೆ. ತನ್ನ ಬಿಟ್ಟು ಹೋಗದಂತೆ ಬೇಡಿಕೊಂಡಿದ್ದಾನೆ.
ನಾನು ಯಾರು?
ನಾನು ಯಾರು ಎಂಬ ಪ್ರಶ್ನೆ ಸಂಜುಗೆ ಮೂಡಿದೆ. ಈ ಕಾರಣಕ್ಕೆ ತಾಯಿ ಪ್ರಿಯಾಗೆ ಆತ ಕರೆ ಮಾಡಿದ್ದಾನೆ. ‘ಅಮ್ಮ ನಾನು ಯಾರು? ನಾನು ಸಂಜುನಾ? ನಿಜಕ್ಕೂ ನಾನು ಯಾರು? ದಯವಿಟ್ಟು ಹೇಳು. ನೆನಪುಗಳು ಚೆದುರಿ ಹೋಗಿವೆ. ಅವೆಲ್ಲವನ್ನೂ ಒಟ್ಟು ಮಾಡೋಕೆ ನನಗೆ ಸಾಧ್ಯವಾಗುತ್ತಿಲ್ಲ. ಇವರೆಲ್ಲ ಹತ್ತಿರದವರು ಅನಿಸುತ್ತಿದೆ. ನನ್ನ ಹಿನ್ನೆಲೆ ಏನು ಎಂಬುದು ಗೊತ್ತಾಗಬೇಕು’ ಎಂದು ಪ್ರಶ್ನೆ ಮಾಡಿದ್ದಾನೆ. ಆದರೆ, ಸಂಜುನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
24 ಗಂಟೆಯ ಟಾಸ್ಕ್
ಸಂಜುಗೆ ಅನು ಮೇಲೆ ಭಾವನೆಗಳು ಹುಟ್ಟಿಕೊಳ್ಳುತ್ತಿವೆ. ಆ ಭಾವನೆಗಳನ್ನು ನಿಯಂತ್ರಿಸೋದು ಹೇಗೆ ಎಂಬುದು ಆತನಿಗೆ ತಿಳಿಯುತ್ತಿಲ್ಲ. ಈ ವಿಚಾರದಲ್ಲಿ ಆತ ಗೊಂದಲಕ್ಕೆ ಒಳಗಾಗಿದ್ದಾನೆ. ಅನು ಎದುರು ಈ ಭಾವನೆಗಳ ಬಗ್ಗೆ ಆತ ಹೇಳಿಕೊಂಡಿದ್ದಾನೆ. ಇದಕ್ಕೆ ಅನು ಸಿಟ್ಟಾಗಿದ್ದಾಳೆ. ಈಗ ಅನುಗೆ ಸಂಜು 24 ಗಂಟೆ ಟಾಸ್ಕ್ ನೀಡಿದ್ದಾನೆ. ‘ನಾವು ಮುಂದಿನ 24 ಗಂಟೆಯಲ್ಲಿ ಭೇಟಿ ಮಾಡುತ್ತೇವೆ. ಹೀಗೆ ಭೇಟಿ ಆದರೆ ನಮ್ಮ ಮಧ್ಯೆ ಇರುವ ಭಾವನೆ ಸುಳ್ಳಲ್ಲ’ ಎಂದು ಚಾಲೆಂಜ್ ಮಾಡಿದ್ದಾನೆ ಸಂಜು.
ಅನುಗೆ ಆರ್ಯನ ನೆನಪು
ಅನುಗೆ ಸಂಜುನ ನೋಡಿದಾಗ ಪದೇ ಪದೇ ಆರ್ಯವರ್ಧನ್ನ ನೆನಪಾಗುತ್ತಿದೆ. ಈ ವಿಚಾರವನ್ನು ಗೆಳತಿಯ ಜತೆ ಮಾತನಾಡಿದ್ದಾಳೆ ಅನು. ‘ನನಗೆ ಸಂಜುನ ನೋಡಿದಾಗ ಆರ್ಯ ಸರ್ ನೆನಪಾಗುತ್ತಿದ್ದಾರೆ. ಸಂಜು ನಡೆದುಕೊಳ್ಳುವ ಪ್ರತಿ ವಿಚಾರವೂ ಹಾಗೆಯೇ ಇದೆ. ಮೊದಲ ದಿನ ಸಂದರ್ಶನದ ವೇಳೆ ಬಿಸ್ನೆಸ್ ಮಾಡೋಕೆ ಮುಖ್ಯವಾಗಿ ಬೇಕಾಗಿದ್ದು ಏನು ಕೇಳಿದಾಗ ನಂಬಿಕೆ ಎಂದರು. ನನ್ನನ್ನು ಲೇಡಿ ಆರ್ಯವರ್ಧನ್ ಎಂದು ಕರೆದರು. ಇದೆಲ್ಲ ಆರ್ಯ ಸರ್ ಹೇಳುತ್ತಿದ್ದ ಮಾತುಗಳು. ನನ್ನ ಮಾತುಗಳು ಭಾವನೆಗಳು ನಿಜ ಆಗಿದ್ದರೆ 24 ಗಂಟೆಯಲ್ಲಿ ನಮ್ಮ ಭೇಟಿ ಆಗುತ್ತದೆ ಎಂದು ಸಂಜು ಹೇಳಿದ್ದಾರೆ. ಇದನ್ನು ನಾನು ಸುಳ್ಳು ಮಾಡಬೇಕು’ ಎಂದು ಅನು ಪಣ ತೊಟ್ಟಿದ್ದಾಳೆ.
ದೇವಸ್ಥಾನಕ್ಕೆ ಬಂದ ಅನು-ಸಂಜು
ಆರ್ಯನ ಹೆಸರಲ್ಲಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿತ್ತು. ಈ ಅನ್ನ ಸಂತರ್ಪಣೆಗೆ ಅನು ಬರುವುದಿಲ್ಲ ಎಂದು ಹೇಳಿದ್ದಳು. ಸಂಜು ಭೇಟಿಯನ್ನು ತಪ್ಪಿಸಿಕೊಳ್ಳಲು ಅನು ಈ ರೀತಿ ಮಾಡಿದ್ದಳು. ಸಂಜುಗೂ ತನ್ನ ಮಾತಿನಿಂದ ಮುಜುಗರ ಆಗಿದೆ. ಅನುನ ಭೇಟಿ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡೇ ಈ ರೀತಿ ಹೇಳಿದ್ದೇನೆ ಎಂದು ಅನು ಅಂದುಕೊಳ್ಳುತ್ತಾಳೆ ಎಂಬ ಭಯ ಸಂಜುನ ಕಾಡಿದೆ. ಹೀಗಾಗಿ, ಆತ ಶಾರದಾ ದೇವಿ ಅವರ ಜೊತೆ ಹೋಗದೆ ದೇವಸ್ಥಾನದಲ್ಲೇ ಬೇರೆ ಕಡೆ ಸಾಗಿದ್ದಾನೆ.
ಮರುಕಳಿಸಲಿದೆ ಹಳೆಯ ಘಟನೆ?
ಆರ್ಯವರ್ಧನ್ಗೆ ಅನು ಮೇಲೆ ಪ್ರೀತಿ ಹುಟ್ಟಿದ ಕಾಲವದು. ಆ ಸಂದರ್ಭದಲ್ಲಿ ಅನು, ಆರ್ಯನಿಗೆ 24 ಗಂಟೆಯ ಚಾಲೆಂಜ್ ನೀಡಿದ್ದಳು. ಈ ಚಾಲೆಂಜ್ ವೇಳೆ ಸಂಜು ಗೆದ್ದಿದ್ದ. ಅಚಾನಕ್ಕಾಗಿ ಇಬ್ಬರೂ ದೇವಸ್ಥಾನದಲ್ಲಿ ಭೇಟಿ ಮಾಡುವ ಪರಿಸ್ಥಿತಿ ಬಂದೊದಗಿತ್ತು. ಆ ಬಳಿಕ ಭಾವನೆಗಳು ಅನುಗೆ ಅದು ನಿಜ ಎನಿಸಿತ್ತು. ಈಗಲೂ ಸಂಜು ಹಾಗೂ ಅನು ಇದೇ ರೀತಿಯಲ್ಲಿ ಭೇಟಿ ಆಗುವ ಸೂಚನೆ ಸಿಕ್ಕಿದೆ.
ಶ್ರೀಲಕ್ಷ್ಮಿ ಎಚ್.