ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್; ನಂತರ ಆಗಿದ್ದೇನು?

ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಕ್ರಿಕೆಟ್ ಟೂರ್ನಿ ವೇಳೆ ವಾಶ್‌ರೂಂನಲ್ಲಿ ಅಪರಿಚಿತ ವ್ಯಕ್ತಿ ಇದನ್ನು ಚಿತ್ರೀಕರಿಸಿದ್ದಾನೆ. ವಿಡಿಯೋ ವೈರಲ್ ಮಾಡದಿರಲು ಹಣಕ್ಕೆ ಬೇಡಿಕೆ ಇಟ್ಟಿದ್ದು, ಸಂತ್ರಸ್ತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್; ನಂತರ ಆಗಿದ್ದೇನು?
ಕನ್ನಡದ ನಟಿ
Edited By:

Updated on: Feb 17, 2026 | 11:07 AM

ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿ ಈ ಕೃತ್ಯ ನಡೆಸಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಕ್ರಿಕೆಟ್ ಟೂರ್ನಿ ನಡೆದಿತ್ತು. ಟೂರ್ನಿಯ ಎರಡನೇ ದಿನ ವಾಶ್ ರೂಂ ಹೋದಾಗ ಎದುರಾದ ಅಪರಿಚಿತ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದ ಮತ್ತು ಫೊಟೋ ತೆಗೆದಿದ್ದ. ಬ್ಲ್ಯಾಕ್​​ಮೇಲ್ ಮಾಡುವ ಉದ್ದೇಶದಿಂದಲೇ ಫೊಟೋ ವಿಡೀಯೋ ರೆಕಾರ್ಡ್ ಮಾಡಿದ್ದ ಎಂಬ ಆರೋಪವನ್ನು ಮಾಡಲಾಗಿದೆ.

ಸಾಮಾನ್ಯವಾಗಿ ವಿಡಿಯೋ ಮಾಡಿದವರು ಅವರಿಗೆ ಕಳುಹಿಸಿ ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ವಿಡಿಯೋ ರೆಕಾರ್ಡ್ ಮಾಡಿ ಯುವತಿಗೆ ಕಳುಹಿಸಿದೆ ಆಕೆಯ ಆಪ್ತ ಸ್ನೇಹಿತೆಗೆ ಕಳುಹಿಸಿದ್ದ. ‘Swan.3704722’ ಇನ್ಸ್ಟಾ ಅಕೌಂಟ್​ನಿಂದ ಸಂದೇಶ ಕಳುಹಿಸಲಾಗಿದೆ.

ಇದನ್ನೂ ಓದಿ: ‘ಯಾರ ಜೊತೆ ಬೇಕಾದರೂ ಹೋಗಿ ಮಲಗು’: ಕನ್ನಡದ ನಟಿಗೆ ಗಂಡನಿಂದ ಕಿರುಕುಳ

‘ವಿಡೀಯೋ ವೈರಲ್ ಮಾಡಬಾರದೆಂದರೆ ಹಣ ಕೊಡಬೇಕು’ ಎಂದು ಅಪರಿಚಿತ ಬೆದರಿಕೆ ಹಾಕಿದ್ದ. ವೀಡಿಯೋ ಕಾಲ್ ಮಾಡಿಯೂ ಬೆದರಿಕೆ ಹಾಕಿದ್ದ. ಸದ್ಯ ಆತ ಕಳಿಸಿರುವ ಪೊಟೋಸ್, ವಿಡಿಯೋಗಳನ್ನ ನೀಡಿ ನಟಿ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಸದ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:35 am, Tue, 17 February 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us