ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್

| Updated By: ರಾಜೇಶ್ ದುಗ್ಗುಮನೆ

Updated on: Feb 27, 2025 | 2:35 PM

ಇತ್ತೀಚಿನ ಕನ್ನಡ ಧಾರಾವಾಹಿಗಳ ಟಿಆರ್​ಪಿ ರೇಟಿಂಗ್ಸ್ ಬಿಡುಗಡೆಯಾಗಿದ್ದು, ಜೀ ಕನ್ನಡದ ಈ ಹೊಸ ಧಾರಾವಾಹಿ ಅಗ್ರಸ್ಥಾನ ಪಡೆದಿದೆ. ಕೇವಲ 22 ಎಪಿಸೋಡ್‌ಗಳಲ್ಲಿ ಈ ಯಶಸ್ಸು ಸಾಧಿಸಿದೆ. ‘ಶ್ರಾವಣಿ ಸುಬ್ರಮಣ್ಯ’,‘ಲಕ್ಷ್ಮೀ ನಿವಾಸ’ ಮತ್ತು ‘ಅಮೃತಧಾರೆ’ ಧಾರಾವಾಹಿಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
ಧಾರಾವಾಹಿ ಟಿಆರ್​ಪಿ
Follow us on

ಸೀರಿಯಲ್ ಟಿಆರ್​ಪಿ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾವಣೆ ಕಾಣುತ್ತಲೇ ಇರುತ್ತವೆ. ಈ ಪೈಕಿ ಕೆಲವು ಯಶಸ್ಸು ಕಂಡರೆ ಇನ್ನೂ ಕೆಲವು ಫ್ಲಾಪ್ ಎನಿಸಿಕೊಂಡ ಉದಾಹರಣೆ ಇದೆ. ಈಗ ಸೀರಿಯಲ್ ಟಿಆರ್​ಪಿಯ ಲೆಕ್ಕಾಚಾರ ಹೊರ ಬಿದ್ದಿದೆ. ಈ ಬಾರಿ ಹೊಸ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಈ ಮೂಲಕ ಎಲ್ಲಾ ಧಾಖಲೆಗಳು ಧೂಳಿಪಟ ಆಗಿದೆ.

ಧಾರಾವಾಹಿ ಪ್ರಸಾರ ಆರಂಭಿಸಿದ ಬಳಿಕೆ ಕೆಲವೇ ವಾರಗಳಲ್ಲಿ ಧಾರಾವಾಹಿಯಲ್ಲಿ ಧಮ್ ಇದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗಿಬಿಡುತ್ತದೆ. ಈ ಆಧಾರದ ಮೇಲೆ ಟಿಆರ್​​ಪಿ ನಿರ್ಧಾರ ಆಗುತ್ತದೆ. ಈಗ ಧಾರಾವಾಹಿ ರೇಸ್​ನಲ್ಲಿ ಇತ್ತೀಚೆಗೆ ಪ್ರಸಾರ ಆರಂಭಿಸಿದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಕೇವಲ 22 ಎಪಿಸೋಡ್​​ಗಳನ್ನು ಪೂರ್ಣಗೊಳಿಸಿದ್ದು, ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ.

ಈ ಧಾರಾವಾಹಿ ಯಶಸ್ಸು ಕಾಣಲು ಒಂದು ಕಾರಣವೂ ಇದೆ. ಈ ಧಾರಾವಾಹಿಯಲ್ಲಿ ವೀಣಾ ಸುಂದರ್ ವಿಲನ್ ಪಾತ್ರ ಮಾಡಿದ್ದಾರೆ. ಮಾಟ-ಮಂತ್ರದ ಕಥೆ ಇದೆ. ಕಥೆಯ ನಿರೂಪಣೆ, ಗ್ರಾಫಿಕ್ಸ್ ಕೂಡ ಉತ್ತಮ ಗುಣಮಟ್ಟ ಹೊಂದಿದೆ. ಈ ಕಾರಣಕ್ಕೆ ಧಾರಾವಾಹಿ ನಂಬರ್ 1 ಸ್ಥಾನ ಪಡೆದುಕೊಂಡಿದೆ ಎಂಬ ಮಾತು ಕೇಳಿ ಬಂದಿದೆ.

ಇದನ್ನೂ ಓದಿ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
ಒಂದೇ ವಾರಕ್ಕೆ ಬೇರೆ ಭಾಷೆಗೆ ರಿಮೇಕ್ ಆಯ್ತು ಸೂಪರ್ ಹಿಟ್ ಧಾರಾವಾಹಿ
ಮೇಕಿಂಗ್ ಮೂಲಕ ಗಮನ ಸೆಳೆದ ನಾ ನಿನ್ನ ಬಿಡಲಾರೆ ಧಾರಾವಾಹಿ; ಸಿನಿಮಾ ಗುಣಮಟ್ಟ
ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ

ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ‘ಲಕ್ಷ್ಮೀ ನಿವಾಸ’ ಟಿಆರ್​ಪಿ ರೇಸ್​ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿಯ ಸಮಯದಲ್ಲಿ ಬದಲಾವಣೆ ಆಗಿದೆ. ಹೀಗಾಗಿ, ಟಿಆರ್​ಪಿ ಗಣನೀಯವಾಗಿ ಕುಸಿತ ಕಂಡಿದೆ ಎನ್ನಬಹುದು.

ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?

‘ಮ್ಯಾಕ್ಸ್’ ಚಿತ್ರ ಇತ್ತೀಚೆಗೆ ಪ್ರಸಾರ ಕಂಡಿತ್ತು. ಅದರ ಟಿಆರ್​ಪಿ ಕೂಡ ಹೊರ ಬಿದ್ದಿದೆ. ಈ ಧಾರಾವಾಹಿ ಬರೋಬ್ಬರಿ 7.1 ರೇಟಿಂಗ್ ಪಡೆದಿದೆ. ಈ ಮೂಲಕ ಕಿರುತೆರೆ ಲೋಕದಲ್ಲೂ ಈ ಧಾರಾವಾಹಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.