ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್​ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್

ಈ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಪಟ್ಟಿಯಲ್ಲಿ ‘ಅಮೃತಧಾರೆ’ ಟಿವಿಆರ್ ಹೆಚ್ಚಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿಯೊಂದಿಗೆ ಮುಂದೆ ಸಾಗುತ್ತಿದೆ. ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಟಾಪ್ 5 ರಾಂಕಿಂಗ್‌ನಿಂದ ಹೊರಬಿದ್ದಿದೆ. ಟಾಪ್ ಮೂರು ಧಾರಾವಾಹಿಗಳು 9+ ಟಿವಿಆರ್ ಅನ್ನು ಪಡೆದಿವೆ ಎಂಬುದು ವಿಶೇಷ.

ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್​ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್
Serial Trp

Updated on: Sep 25, 2025 | 1:36 PM

ಈ ವರ್ಷದ 37ನೇ ವಾರದ ಧಾರಾವಾಹಿಗಳ ಟಿಆರ್​ಪಿ ಪಟ್ಟಿ ಹೊರ ಬಿದ್ದಿದೆ. ‘ಅಮೃತಧಾರೆ’ ಧಾರಾವಾಹಿ ಕಳೆದ ವಾರಗಳಿಗಿಂತ ಹೆಚ್ಚಿನ ಟಿಆರ್​ಪಿ ಪಡೆದುಕೊಂಡಿದೆ. ಉಳಿದ ಧಾರಾವಾಹಿಗಳಿಗೆ ಹೋಲಿಕೆ ಮಾಡಿದರೆ ಈ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳನ್ನು ಇಡಲಾಗಿತ್ತು. ಇದು ತಂಡಕ್ಕೆ ಸಹಕಾರಿ ಆಗಿದೆ. ಈ ಕಾರಣದಿಂದಲೇ ಧಾರಾವಾಹಿ ಮೆಚ್ಚುಗೆ ಪಡೆಯುತ್ತಿದೆ.

ಕಳೆದ ಕೆಲವು ವಾರಗಳಿಂದ ಧಾರಾವಾಹಿ ಮೊದಲ ಸ್ಥಾನ ‘ಕರ್ಣ’ ಧಾರಾವಾಹಿಗೆ ಸಿಗುತ್ತಿತ್ತು. ಆದರೆ, ಈ ಬಾರಿ ‘ಕರ್ಣ’ನಿಗೆ ಎರಡನೇ ಸ್ಥಾನ ಸಿಕ್ಕಿದೆ. ಮೊದಲ ಸ್ಥಾನವನ್ನು ‘ಅಣ್ಣಯ್ಯ’ ಧಾರಾವಾಹಿ ಪಡೆದುಕೊಂಡಿದೆ. ಕಳೆದ ಕೆಲವು ವಾರಗಳಿಂದ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್​ಪಿ ಹೆಚ್ಚಲು ಕಾರಣ ಆಗಿದೆ. ಈ ಧಾರಾವಾಹಿ ಮುಂದಿನ ವಾರ ಡಬಲ್ ಡಿಜಿಟ್ ಟಿಆರ್​ಪಿ ಪಡೆದರು ಅಚ್ಚರಿ ಏನಿಲ್ಲ.

ಎರಡನೇ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ಈ ಧಾರಾವಾಹಿಯ ಕಥೆಯಲ್ಲಿ ಹೆಚ್ಚಿನ ಬೆಳವಣಿಗೆಗಳು ನಡೆಯುತ್ತಿಲ್ಲ. ಇದನ್ನು ಕೆಲವರು ನಿಂತ ನೀರು ಎಂದು ಕೂಡ ಕರೆದಿದ್ದಾರೆ. ಆದರೆ, ಧಾರಾವಾಹಿ ಟಿಆರ್​ಪಿಯಲ್ಲಿ ಮಾತ್ರ ಮುಂದಿದೆ. ಈ ಧಾರಾವಾಹಿ ಸದ್ಯ ಲಿಸ್ಟ್​ನಲ್ಲಿ ಎರಡನೇ ಸ್ಥಾನದಲ್ಲಿ ಇದೆ.

ಮೂರನೇ ಸ್ಥಾನದಲ್ಲಿ ಅಮೃತಧಾರೆ ಧಾರಾವಾಹಿ ಇದೆ. ಈ ಧಾರಾವಾಹಿ ಮಹತ್ವದ ಘಟ್ಟ ತಲುಪಿದೆ. ಈ ಕಾರಣದಿಂದ ಧಾರಾವಾಹಿಗೆ ಭರ್ಜರಿ ಟಿಆರ್​ಪಿ ಸಿಕ್ಕಿದೆ. ಟಾಪ್ ಮೂರರಲ್ಲಿ ಇರುವ ಧಾರಾವಾಹಿಗಳ ಟಿವಿಆರ್ 9+ ಇದೆ ಎಂಬುದು ವಿಶೇಷ. ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾ ಸಾಗುತ್ತಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲಿ ಕಥಾ ನಾಯಕಿ ಪಾತ್ರವನ್ನೇ ಕೊನೆಗೊಳಿಸಿದ್ದೂ ಅಲ್ಲದೆ, ಧಾರಾವಾಹಿ ಸಮಯವನ್ನು ಬದಲಾಯಿಸಲಾಯಿತು. ಆದಾಗ್ಯೂ ಧಾರಾವಾಹಿ ಉತ್ತಮ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಆದರೆ, ಟಾಪ್ ಐದರಲ್ಲಿ ಸ್ಥಾನ ಪಡೆಯದೆ ಬಹಳ ಸಮಯ ಕಳೆದಿತ್ತು.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಶಾಕ್ ಕೊಟ್ಟ ಪ್ರೇಕ್ಷಕ; ಟಿಆರ್​ಪಿಯಲ್ಲಿ ಯಾರು ಟಾಪ್?

‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಶಾಕ್ ಎದುರಾಗಿದೆ. ಈ ಧಾರಾವಾಹಿ ಈ ಬಾರಿ ಆರನೇ ಸ್ಥಾನಕ್ಕೆ ಕುಸಿದಿದೆ. ಈ ಮೊದಲು ಟಾಪ್ ಎರಡರಲ್ಲಿ ಸ್ಥಾನ ಪಡೆದ ಉದಾಹರಣೆ ಇತ್ತು. ಆದರೆ, ಈ ಬಾರಿ ಆ ರೀತಿ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us