‘ಕನ್ನಡತಿ’ ನಟಿ ರಂಜನಿ ರಾಘವನ್​ಗೆ ಕೊವಿಡ್​ ಪಾಸಿಟಿವ್​; ಬೇಗ ಗುಣಮುಖರಾಗಿ ಚಾಂಪ್​ ಎಂದ ಕಿರಣ್​ ರಾಜ್​

ಕನ್ನಡತಿಯಲ್ಲಿ ಭುವಿಯಾಗಿ ಮಿಂಚುತ್ತಿರುವ ರಂಜನಿಗೆ ಕೊರೊನಾ ಪಾಸಿಟಿವ್​ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದ್ದಾರೆ.

‘ಕನ್ನಡತಿ’ ನಟಿ ರಂಜನಿ ರಾಘವನ್​ಗೆ ಕೊವಿಡ್​ ಪಾಸಿಟಿವ್​; ಬೇಗ ಗುಣಮುಖರಾಗಿ ಚಾಂಪ್​ ಎಂದ ಕಿರಣ್​ ರಾಜ್​
ಕಿರಣ್​ ರಾಜ್​-ರಂಜನಿ
Edited By:

Updated on: Jan 21, 2022 | 1:36 PM

ಕೊರೊನಾ ಮೂರನೇ ಅಲೆ (Covid 3rd Wave) ಕಾಣಿಸಿಕೊಂಡಿದೆ. ಮೊದಲ ಅಲೆಗೆ ಹೋಲಿಕೆ ಮಾಡಿದರೆ ಈ ಬಾರಿ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ದೇಶದಲ್ಲಿ ಬಹುತೇಕರಿಗೆ ಕೊರೊನಾ ಲಸಿಕೆ ಸಿಕ್ಕಿರುವುದು ಇದಕ್ಕೆ ಪ್ರಮುಖ ಕಾರಣ. ಸೆಲೆಬ್ರಿಟಿ ವಲಯಗಳಲ್ಲೂ ಅನೇಕರಿಗೆ ಕೊರೊನಾ ಪಾಸಿಟಿವ್​ ಆಗಿದೆ. ಶೂಟಿಂಗ್​ಗಾಗಿ ಬೇರೆಬೇರೆ ಕಡೆಗೆ ಸುತ್ತಾಟ ನಡೆಸುವುದರಿಂದ ಹೆಚ್ಚು ಜನರೊಂದಿಗೆ ಸಂಪರ್ಕ ಬೆಳೆಯುತ್ತದೆ. ಹೀಗಾಗಿ, ಸೆಲೆಬ್ರಿಟಿಗಳಿಗೆ ಕೊವಿಡ್​ ಅಂಟುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ‘ಕನ್ನಡತಿ’ ಧಾರಾವಾಹಿ (Kannadathi) ನಟಿ ರಂಜನಿ ರಾಘವನ್ (Ranjani Raghavan) ​ಅವರಿಗೆ ಕೊವಿಡ್​ ಪಾಸಿಟಿವ್​ ಆಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಸೆಲೆಬ್ರಿಟಿ ವಲಯದಲ್ಲಿ ಹಲವರಿಗೆ ಕೊರೊನಾ ಅಂಟಿದೆ. ಅನೇಕರು ಮನೆಯಲ್ಲೇ ಹೋಂ ಕ್ವಾರಂಟೈನ್​ ಆಗುತ್ತಿದ್ದಾರೆ. ಆ್ಯಂಕರ್​ ಅನುಶ್ರೀ, ಗಾಯಕ ವಿಜಯ್​ ಪ್ರಕಾಶ್​ ಮೊದಲಾದವರಿಗೆ ಕೊವಿಡ್​ ಆಗಿದೆ. ಈಗ ಕನ್ನಡತಿಯಲ್ಲಿ ಭುವಿಯಾಗಿ ಮಿಂಚುತ್ತಿರುವ ರಂಜನಿಗೆ ಕೊರೊನಾ ಪಾಸಿಟಿವ್​ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದ್ದಾರೆ.

‘ಬೇಗ ಗುಣಮುಖರಾಗಿ ಚಾಂಪ್​’ ಎಂದು ಕಿರಣ್​ ರಾಜ್​ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಪೋಸ್ಟ್ ಮಾಡಿ, ರಂಜನಿ ಅವರನ್ನು ಟ್ಯಾಗ್​ ಮಾಡಿದ್ದಾರೆ. ಇದನ್ನು ಸ್ಟೇಟಸ್​ನಲ್ಲಿ ರೀ ಪೋಸ್ಟ್ ಮಾಡಿಕೊಂಡಿರುವ ರಂಜನಿ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ. ಅಲ್ಲದೆ, ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

‘ಧನ್ಯವಾದಗಳು. ನಾನು ನಿಮ್ಮ ಸಂದೇಶಗಳನ್ನು ನೋಡುತ್ತಿದ್ದೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನನಗೆ ಕೊರೊನಾ ಪಾಸಿಟಿವ್​ ಆಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಚಿಂತಿಸುವ ಅಗತ್ಯವಿಲ್ಲ’ ಎಂದು ರಂಜನಿ ಅವರು ಬರೆದುಕೊಂಡಿದ್ದಾರೆ. ರಂಜನಿ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಕೋರುತ್ತಿದ್ದಾರೆ.

‘ಕನ್ನಡತಿ’ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲ ಹುಟ್ಟು ಹಾಕುತ್ತಿದೆ. ಈ ಧಾರಾವಾಹಿ ನಿತ್ಯ ಹೊಸಹೊಸ ಟ್ವಿಸ್ಟ್​ ಪಡೆದುಕೊಂಡು ಸಾಗುತ್ತಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಕೆಲ ವಿಚಾರಗಳು ಪ್ರಮುಖ ಘಟ್ಟ ತಲುಪಿವೆ. ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಿದ್ದಾಳೆ. ‘ನಿಮ್ಮ ಮನೆಯ ಸೊಸೆ ಆಗೋಕೆ ನನಗೆ ಇಷ್ಟ’ ಎಂದು ಹರ್ಷನ ತಾಯಿ ರತ್ನಮಾಲಾ ಎದುರು ಹೇಳಿಕೊಂಡಿದ್ದಾಳೆ ಭುವಿ. ಇಬ್ಬರ ಮದುವೆ ಯಾವಾಗ ನೆರವೇರಲಿದೆ ಎನ್ನುವ ಕುತೂಹಲ ಸದ್ಯದ್ದು.

ಇದನ್ನೂ ಓದಿ:‘ಕನ್ನಡತಿ’ ಭುವಿಗೆ ಎದುರಾಯ್ತು ಹೊಸ ತಲೆನೋವು; ವರುಧಿನಿಗೆ ಗೊತ್ತಾಗಲಿದೆ ಆ ಸತ್ಯ? 

ಟ್ರೆಡೀಷನಲ್​ ಲುಕ್​ನಲ್ಲಿ ಗಮನ ಸೆಳೆದ ಕನ್ನಡತಿ ವರುಧಿನಿ