ನನ್ನನ್ನು ಯಾರಾದರೂ ಹಾಟ್​ ಎಂದರೆ ಅದನ್ನು ಅರಗಿಸಿಕೊಳ್ಳೋಕೆ ಆಗಲ್ಲ ಎಂದ ಕಿರುತೆರೆ​ ನಟಿ

ನನ್ನನ್ನು ಯಾರಾದರೂ ಹಾಟ್​ ಎಂದರೆ ಅದನ್ನು ಅರಗಿಸಿಕೊಳ್ಳೋಕೆ ಆಗಲ್ಲ ಎಂದ ಕಿರುತೆರೆ​ ನಟಿ
ನಿಯಾ ಶರ್ಮಾ

ನಿಯಾ ಅವರು ಬಣ್ಣದ ಬದುಕು ಆರಂಭಿಸಿದ್ದು ಕಿರುತೆರೆ ಜಗತ್ತಿನಿಂದ. ಹಲವು ವರ್ಷಗಳ ಹಿಂದೆಯೇ ಟಿವಿಯಲ್ಲಿ ಮಿಂಚೋಕೆ ಪ್ರಾರಂಭಿಸಿದರು. 2016ರಲ್ಲಿ ಅವರ ಖ್ಯಾತಿ ದುಪ್ಪಟ್ಟಾಯಿತು.

TV9kannada Web Team

| Edited By: Rajesh Duggumane

Jan 20, 2022 | 9:03 PM

ಅಭಿಮಾನಿಗಳು ಒಳ್ಳೆಯ ರೀತಿಯಲ್ಲಿ ಕಮೆಂಟ್​ ಮಾಡಿದರೆ ಹೀರೋ/ಹೀರೋಯಿನ್​ಗಳಿಗೆ ಖುಷಿಯಾಗುತ್ತದೆ. ಯಾವುದಾದರೂ ಹೀರೋಯಿನ್​ಗೆ ನೀವು ಹಾಟ್​ ಆಗಿ ಕಾಣುತ್ತಿದ್ದೀರಿ ಎಂದರೆ ಅವರು ತುಂಬಾನೇ ಸಂತಸಪಡುತ್ತಾರೆ. ಆದರೆ, ಹಿಂದಿ ಕಿರುತೆರೆ ನಟಿ (Serial Actress) ನಿಯಾ ಶರ್ಮಾ (Nia Sharma) ಇದಕ್ಕೆ ಭಿನ್ನ. ಅವರಿಗೆ ನೀವು ಹಾಟ್​ ಆಗಿದ್ದೀರಿ ಎಂದು ಯಾರಾದರೂ ಕರೆದರೆ ಬೇಸರವಾಗುತ್ತದೆ. ಅದನ್ನು ಅವರಿಂದ ಅರಗಿಸಿಕೊಳ್ಳೋಕೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿದ ಅವರ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ.

ನಿಯಾ ಅವರು ಬಣ್ಣದ ಬದುಕು ಆರಂಭಿಸಿದ್ದು ಕಿರುತೆರೆ ಜಗತ್ತಿನಿಂದ. ಹಲವು ವರ್ಷಗಳ ಹಿಂದೆಯೇ ಟಿವಿಯಲ್ಲಿ ಮಿಂಚೋಕೆ ಪ್ರಾರಂಭಿಸಿದರು. 2016ರಲ್ಲಿ ಅವರ ಖ್ಯಾತಿ ದುಪ್ಪಟ್ಟಾಯಿತು. ಅದಕ್ಕೂ ಕಾರಣವಿದೆ. ಇಂಟರ್​ನ್ಯಾಷನಲ್​ ಮ್ಯಾಗಜಿನ್​ ಒಂದು ಅವರಿಗೆ ಆ ವರ್ಷ ‘ಏಷ್ಯಾದ ಸೆಕ್ಸಿಯೆಸ್ಟ್​ ಮಹಿಳೆ’ ಎಂಬ ಬಿರುದನ್ನು ನೀಡಿತ್ತು. ಇದನ್ನು ಅವರಿಂದ ಒಪ್ಪಿಕೊಳ್ಳೋಕೆ ಸಾಧ್ಯವಾಗಿಲ್ಲ. ಅವರಿಗೆ ಈ ವಿಚಾರ ತುಂಬಾನೇ ಮುಜುಗರ ತಂದಿತ್ತು.

ಪಿಂಕ್​ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ನಿಯಾ ಈ ಬಗ್ಗೆ ಮಾತನಾಡಿದ್ದಾರೆ. ‘ಇತರರು ನಿಮ್ಮನ್ನು ಹೊಗಳಿದಾಗ ಧನ್ಯವಾದ ಹೇಳಬೇಕು. ಆದರೆ, ನಾನು ಅದನ್ನು ಮಾಡುವುದಿಲ್ಲ. ನನಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ‘ನೀವು ತುಂಬಾ ಸುಂದರವಾಗಿ ಕಾಣುತ್ತೀರಿ, ನೀವು ತುಂಬಾ ಹಾಟ್ ಆಗಿದ್ದೀರಿ’ ಎಂದರೆ ನನಗೆ ಅದನ್ನು ಸ್ವೀಕರೀಸೋಕೆ ಆಗುವುದಿಲ್ಲ. ಅವರು ಯಾಕೆ ನನಗೆ ತಪ್ಪು ವಿಚಾರಗಳನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ನನಗೆ ಅನಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ ನಿಯಾ.

‘ನಾನು ಹಾಟ್​ ಆಗಿಲ್ಲ. ನಾನು ಸಾಮಾನ್ಯ ಹುಡುಗಿ. ನಾನು ಯಾವುದೇ ಮೆಚ್ಚುಗೆ ಪಡೆಯಲು ಈ ರೀತಿ ಮಾಡುತ್ತಿಲ್ಲ. ಇದು ನನ್ನ ಅಜೆಂಡಾ’ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಫೂಂಕ್​ ಲೇ’ ಸಾಂಗ್​ನಲ್ಲಿ ಅವರು ಕಾಣಿಸಿಕೊಂಡಿದ್ದರು. ಇದನ್ನು ನಿಖಿತಾ ಗಾಂಧಿ ಹಾಡಿದ್ದಾರೆ. ಈ ಹಾಡಿನಲ್ಲಿ ಹೆಜ್ಜೆ ಹಾಕೋಕೆ ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಇದನ್ನೂ ಓದಿ: ಹೊಸ ಫೋಟೋ ಹಂಚಿಕೊಂಡ ನಟಿ; ಕಂಕುಳ ಕೂದಲ ನೋಡಿ ಕೆಟ್ಟದಾಗಿ ಕಮೆಂಟ್​ ಹಾಕಿದ ಅಭಿಮಾನಿಗಳು

Evelyn Sharma: ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಹಂಚಿಕೊಂಡ ಬಾಲಿವುಡ್​ ನಟಿ 

Follow us on

Related Stories

Most Read Stories

Click on your DTH Provider to Add TV9 Kannada