‘ಆಣೆ ಮಾಡಿ ಹೇಳುತೀನಿ..’ ಎಂದು ಲಂಗ ದಾವಣಿ ಚಾಲೆಂಜ್ ಸ್ವೀಕರಿಸಿದ ರಂಜನಿ ರಾಘವನ್

ಶರಣ್ ಹಾಗೂ ನಿಶ್ವಿಕಾ ‘ಗುರು ಶಿಷ್ಯರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ‘ಆಣೆ ಮಾಡಿ ಹೇಳುತೀನಿ..’ ಹಾಡು ಇತ್ತೀಚೆಗೆ ಬಿಡುಗಡೆ ಆಗಿ ಸಾಕಷ್ಟು ಗಮನ ಸೆಳೆಯುತ್ತಿದೆ.

‘ಆಣೆ ಮಾಡಿ ಹೇಳುತೀನಿ..’ ಎಂದು ಲಂಗ ದಾವಣಿ ಚಾಲೆಂಜ್ ಸ್ವೀಕರಿಸಿದ ರಂಜನಿ ರಾಘವನ್
ರಂಜನಿ
Edited By:

Updated on: Jul 05, 2022 | 4:41 PM

ನಟಿ ರಂಜನಿ ರಾಘವನ್ (Ranjani Raghavan) ಅವರು ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಕನ್ನಡತಿ’ ಧಾರಾವಾಹಿಗೆ (Kannadathi Serial) ವೀಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಭುವಿ ಪಾತ್ರದಲ್ಲಿ ರಂಜನಿ ಅವರು ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ರಂಗದಿಂದಲೂ ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ಮಧ್ಯೆ ನಟಿ ರಂಜನಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸಹೊಸ ಫೋಟೋಗಳನ್ನು ಹಂಚಿಕೊಂಡು ಅವರು ಗಮನ ಸೆಳೆಯುತ್ತಾರೆ. ಈಗ ಅವರು ಹೊಸ ಚಾಲೆಂಜ್ ಒಂದನ್ನು ಸ್ವೀಕರಿಸಿದ್ದಾರೆ. ಲಂಗ ದಾವಣಿ ಧರಿಸಿ ಅವರು ಹೆಜ್ಜೆ ಹಾಕಿದ್ದಾರೆ.

ಶರಣ್ ಹಾಗೂ ನಿಶ್ವಿಕಾ ‘ಗುರು ಶಿಷ್ಯರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ‘ಆಣೆ ಮಾಡಿ ಹೇಳುತೀನಿ..’ ಹಾಡು ಇತ್ತೀಚೆಗೆ ಬಿಡುಗಡೆ ಆಗಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಹಾಡು ಲಕ್ಷಾಂತರಬಾರಿ ವೀಕ್ಷಣೆ ಕಂಡಿದೆ. ಈ ಸಾಂಗ್​ನಲ್ಲಿ ನಿಶ್ವಿಕಾ ಅವರು ಲಂಗ ದಾವಣಿ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಅದೇ ರೀತಿ ರಂಜನಿ ಕೂಡ ಲಂಗ ದಾವಣಿ ಹಾಕಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ
ಅಭಿಮಾನಿಗಳ ಎದುರು ಒಂದು ಪ್ರಶ್ನೆ ಇಟ್ಟ ರಂಜನಿ ರಾಘವನ್​; ಉತ್ತರ ಕೊಟ್ಟ ಫ್ಯಾನ್ಸ್
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ

ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಅನ್ನು ರಂಜನಿ ಹಂಚಿಕೊಂಡಿದ್ದಾರೆ. ಈ ರೀಲ್ಸ್​ನಲ್ಲಿ ಅವರು ‘ಆಣೆ ಮಾಡಿ ಹೇಳುತೀನಿ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಯಾವ್ದ್ ಯಾವ್ದೋ ಚಾಲೆಂಜ್ ಮಾಡ್ತೀವಂತೆ, ನಮ್ಮ ‘ಲಂಗ ದಾವಣಿ’ ಚಾಲೆಂಜ್ ತಗೊಳಲ್ವಾ’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಧಾರಾವಾಹಿ ವಿಚಾರಕ್ಕೆ ಬರುವುದಾದರೆ ‘ಕನ್ನಡತಿ’ ಸೀರಿಯಲ್ ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿ ಮದುವೆ ನೆರವೇರಿದೆ. ಇಡೀ ಆಸ್ತಿಯನ್ನು ಭುವಿಯ ಹೆಸರಿಗೆ ಬರೆದಿದ್ದಾಳೆ ರತ್ನಮಾಲಾ. ಮುಂದಿನ ದಿನಗಳಲ್ಲಿ ಸಾನಿಯಾ ಕಡೆಯಿಂದ ಯಾವ ರೀತಿಯ ತೊಂದರೆಗಳು ಭುವಿಗೆ ಎದುರಾಗಬಹುದು ಎಂಬುದು ಸದ್ಯದ ಕುತೂಹಲ. ಇದರ ಜತೆಗೆ ವರುಧಿನಿ ಕೂಡ ಭುವಿಗೆ ತೊಂದರೆ ಕೊಡಲು ರೆಡಿ ಆಗಿದ್ದಾಳೆ.

ಇದನ್ನೂ ಓದಿ: ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನ ಹೇಗಿದೆ? ವಿಶೇಷ ವಿಡಿಯೋ ಮಾಡಿ ಪರಿಚಯಿಸಿದ ನಟಿ ರಂಜನಿ ರಾಘವನ್

ಅಭಿಮಾನಿಗಳ ಎದುರು ಒಂದು ಪ್ರಶ್ನೆ ಇಟ್ಟ ರಂಜನಿ ರಾಘವನ್​; ಉತ್ತರ ಕೊಟ್ಟ ಫ್ಯಾನ್ಸ್