ನಟಿ ರಂಜನಿ ರಾಘವನ್ (Ranjani Raghavan) ಅವರು ಬಹುಮುಖ ಪ್ರತಿಭೆ. ನಟಿಯಾಗಿ, ಲೇಖಕಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ‘ಕನ್ನಡತಿ’ ಸೀರಿಯಲ್ (Kannadathi Serial) ಭುವಿ ಪಾತ್ರದ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರು ತುಂಬ ಫೇಮಸ್. ಇನ್ಸ್ಟಾಗ್ರಾಮ್ನಲ್ಲಿ ಅವರು ಆಗಾಗ ಏನಾದರೂ ಅಪ್ಡೇಟ್ ನೀಡುತ್ತಾ ಇರುತ್ತಾರೆ. ಅಭಿಮಾನಿಗಳಿಗಾಗಿ ತಮ್ಮ ದಿನಚರಿಯ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಈಗ ರಂಜನಿ ರಾಘವನ್ ಅವರು ಒಂದು ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಹಳ್ಳಿ ಮಹಿಳೆಯರ ಜೊತೆ ಸೇರಿ ಸೋಬಾನೆ ಪದ (Sobane Song) ಹಾಡುತ್ತಿರುವುದು ಸೊಗಸಾಗಿದೆ. ಅಭಿಮಾನಿಗಳಿಗೆ ಈ ವಿಡಿಯೋ ತುಂಬ ಇಷ್ಟ ಆಗಿದ್ದು, ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡನ್ನು ಹೇಳಿದ್ದಕ್ಕಾಗಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಂಜನಿ ಅವರು ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ.
ರಂಜನಿ ರಾಘವನ್ ಅವರು ಅಪ್ಪಟ ಕನ್ನಡದ ನಟಿ. ಧಾರಾವಾಹಿ ಪಾತ್ರದ ರೀತಿ ನಿಜಜೀವನದಲ್ಲಿಯೂ ಅವರು ಕನ್ನಡ ಭಾಷೆ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಬಾನೆ ಪದ ಕೇಳುವುದು ಕಡಿಮೆ ಆಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಪೀಳಿಗೆಯವರಿಗೆ ಪರಿಚಯಿಸಿದ್ದಕ್ಕಾಗಿ ಅನೇಕರು ರಂಜನಿ ರಾಘವನ್ಗೆ ಕಮೆಂಟ್ ಮೂಲಕ ಮೆಚ್ಚುಗೆ ಮತ್ತು ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ‘ಕನ್ನಡತಿ’ ನಟಿ ರಂಜನಿ ರಾಘವನ್ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ
‘ಜಾನಪದ ಸಾಹಿತ್ಯದಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಈ ಕಲೆಯನ್ನು ಉಳಿಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದು. ಕಂಚಿನ ಕಂಠದಲ್ಲಿ ಮೂಡಿಬರ್ತಿರೋ ಇವರ ಪದ ಇನ್ನಷ್ಟು ಕಿವಿಗಳನ್ನು ತಲುಪಿ ಹೃದಯಗಳನ್ನು ಮುಟ್ಟಲಿ ಅಂತ ಇದನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಈ ವಿಡಿಯೋದ ಜತೆ ಬರೆದುಕೊಂಡಿದ್ದಾರೆ ರಂಜನಿ ರಾಘವನ್.
(ಇನ್ಸ್ಟಾಗ್ರಾಮ್ನಲ್ಲಿ ರಂಜನಿ ಹಂಚಿಕೊಂಡ ಸೋಬಾನೆ ಹಾಡಿನ ವಿಡಿಯೋ ಇಲ್ಲಿದೆ)
‘ಕನ್ನಡತಿ’ ಧಾರಾವಾಹಿಯಲ್ಲಿ ನಟ ಕಿರಣ್ ರಾಜ್ ಜೊತೆ ರಂಜನಿ ರಾಘವನ್ ಅವರ ಕಾಂಬಿನೇಷನ್ ತುಂಬ ಚೆನ್ನಾಗಿ ಮೂಡಿಬರುತ್ತಿದ್ದು, ಅಭಿಮಾನಿಗಳಿಗೆ ಇಷ್ಟ ಆಗುತ್ತಿದೆ. ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರಿಗೆ ಬೇಡಿಕೆ ಇದೆ. ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಟಕ್ಕರ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.