‘ಸೈಬರ್ ಲೋಕದಲ್ಲಿ ಹೆಣ್ಮಕ್ಕಳ ಖಾಸಗಿತನಕ್ಕೆ ಸೇಫ್ಟಿ ಇಲ್ಲ ಎಂದರೆ..’: ‘ಟಕ್ಕರ್​’ ಬಗ್ಗೆ ರಂಜನಿ ರಾಘವನ್​ ಮಾತು

Ranjani Raghavan | Takkar Kannada Movie: ಎಲ್ಲರೂ ಚಿತ್ರಮಂದಿರಕ್ಕೆ ಬಂದು ‘ಟಕ್ಕರ್​’ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ರಂಜನಿ ರಾಘವನ್​ ಹೇಳಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

‘ಸೈಬರ್ ಲೋಕದಲ್ಲಿ ಹೆಣ್ಮಕ್ಕಳ ಖಾಸಗಿತನಕ್ಕೆ ಸೇಫ್ಟಿ ಇಲ್ಲ ಎಂದರೆ..’: ‘ಟಕ್ಕರ್​’ ಬಗ್ಗೆ ರಂಜನಿ ರಾಘವನ್​ ಮಾತು
ರಂಜನಿ ರಾಘವನ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 27, 2022 | 4:35 PM

ನಟಿ ರಂಜನಿ ರಾಘವನ್​ (Ranjani Raghavan) ಅವರು ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಕಿರುತೆರೆಯ ಧಾರಾವಾಹಿಗಳ ಮೂಲಕ ಅವರು ಮನೆ ಮಾತಾಗಿದ್ದಾರೆ. ಪ್ರಸ್ತುತ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡತಿ’ ಸೀರಿಯಲ್​ನಿಂದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈ ನಡುವೆ ಹಲವು ಸಿನಿಮಾಗಳನ್ನು (Ranjani Raghavan Movies) ಕೂಡ ಅವರು ಒಪ್ಪಿಕೊಳ್ಳುತ್ತಿದ್ದಾರೆ. ರಂಜನಿ ರಾಘವನ್​ ನಟಿಸಿದ ಕೆಲವು ಸಿನಿಮಾಗಳ ಬಿಡುಗಡೆ ಕಾರಣಾಂತರಗಳಿಂದ ತಡವಾಯಿತು. ಆ ಪೈಕಿ ‘ಟಕ್ಕರ್​’ ಸಿನಿಮಾ ಪ್ರಮುಖವಾದದ್ದು. ಈಗ ಈ ಸಿನಿಮಾ ರಿಲೀಸ್​ಗೆ ಸಿದ್ಧವಾಗಿದೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ‘ಟಕ್ಕರ್​’ (Takkar Kannada Movie) ಸಿನಿಮಾದ ಥೀಮ್​ ಏನು ಎಂಬುದನ್ನು ಕೂಡ ವಿವರಿಸಿದರು. ಆ ಚಿತ್ರದ ಕಥೆ ರಂಜನಿ ರಾಘವನ್​ ಅವರಿಗೆ ವೈಯಕ್ತಿಕವಾಗಿ ಹೆಚ್ಚು ಕನೆಕ್ಟ್​ ಆಗುವಂತಿದೆ. ಅದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ. ಸೈಬರ್​ ಲೋಕದ ಅಪರಾಧಗಳ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ‘ಟಕ್ಕರ್​’ ಕೂಡ ಅಂಥದ್ದೇ ಒಂದು ಕಥೆಯನ್ನು ಜನರ ಮುಂದೆ ಇಡುತ್ತಿದೆ. ಈ ಸಿನಿಮಾದಲ್ಲಿ ಮನೋಜ್​ ನಾಯಕನಾಗಿ ನಟಿಸಿದ್ದಾರೆ.

‘ಜನರಿಗೆ ಈ ಸಿನಿಮಾದ ಸಾಂಗ್​ ಇಷ್ಟ ಆಗಿತ್ತು. ಯಾವಾಗ ಸಿನಿಮಾ ರಿಲೀಸ್​ ಆಗತ್ತೋ ಅನ್ನುವ ಕಾತರ ಇತ್ತು. ಈಗ ಬಿಡುಗಡೆ ಆಗುತ್ತಿರುವುದಕ್ಕೆ ಖುಷಿ ಇದೆ. ನಾನು ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ತುಂಬ ಕಾದ ಬಳಿಕ ‘ಟಕ್ಕರ್​’ ಚಿತ್ರ ರಿಲೀಸ್​ ಆಗುತ್ತಿರುವುದು ಸಂತಸದ ವಿಷಯ. ಈ ಸಿನಿಮಾದಲ್ಲಿ ನಾನು ಸೌಮ್ಯ ಎಂಬ ಮೆಡಿಕಲ್​ ಸ್ಟೂಡೆಂಟ್​ ಪಾತ್ರ ಮಾಡಿದ್ದೇನೆ’ ಎಂದು ರಂಜನಿ ರಾಘವನ್​ ಹೇಳಿದ್ದಾರೆ.

ಈ ಹಿಂದೆ ರಂಜನಿ ರಾಘವನ್​ ಅವರ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿತ್ತು. ಸೈಬರ್​ ಜಗತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿ ತೊಂದರೆ ಆದಾಗ ತುಂಬ ಆತಂಕ ಆಗುತ್ತದೆ ಎಂಬುದನ್ನು ರಂಜನಿ ರಾಘವನ್​ ವಿವರಿಸಿದ್ದಾರೆ. ತಮ್ಮ ವೈಯಕ್ತಿಕ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ‘ಇಂದು ಎಲ್ಲರೂ ಸೋಶಿಯಲ್​ ಮೀಡಿಯಾದಲ್ಲಿ ಇದ್ದೇವೆ. ಎಲ್ಲರೂ ಇಂಟರ್​ನೆಟ್​ ಬಳಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿತ್ತು. ಫೇಸ್​ಬುಕ್​​ನಲ್ಲಿ ಎಲ್ಲರೂ ನೋಡುವಂತಹ ಫೋಟೋಗಳೇ ಇರುತ್ತವೆ. ಆದರೂ ಸಹ ನನಗೆ ಎಷ್ಟು ಟೆನ್ಷನ್ ಆಗಿತ್ತು ಎಂದರೆ, ಎರಡು ದಿನ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಪರ್ಸನಲ್​ ಲೆವೆಲ್​ನಲ್ಲಿ ಸೇಫ್ಟಿ ಇಲ್ಲ ಅಂದರೆ ಹೆಣ್ಮಕ್ಕಳಿಗೆ ಎಷ್ಟು ದೊಡ್ಡ ಪ್ರಾಬ್ಲಂ ಆಗಬಹುದು ಎನ್ನುವಂತಹ ವಿಷಯ ಎಲ್ಲ ವರ್ಗದ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ’ ಎಂದು ರಂಜನಿ ರಾಘವನ್​ ಹೇಳಿದ್ದಾರೆ.

‘ಮನೋಜ್​ ಅವರು ತುಂಬ ಚೆನ್ನಾಗಿ ನಟನೆ ಮತ್ತು ಫೈಟ್ಸ್​ ಮಾಡಿದ್ದಾರೆ. ಇಷ್ಟು ದಿನ ಕಾದಿದ್ದರೂ ಕೂಡ ಇಡೀ ತಂಡದವರು ಮೊದಲಿನಷ್ಟೇ ಉತ್ಸಾಹದಲ್ಲಿ ಇದ್ದಾರೆ. ಇಂಥ ತಂಡದ ಭಾಗವಾಗಿ ಇರುವುದಕ್ಕೆ ಖುಷಿ ಇದೆ. ಮೇ 6ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದಿದ್ದಾರೆ ರಂಜನಿ ರಾಘವನ್​. ಈ ಚಿತ್ರಕ್ಕೆ ರಘು ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಕೆ.ಎನ್​. ನಾಗೇಶ್​ ಕೋಗಿಲು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:

‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ

‘ಪುಟ್ಟಗೌರಿ ಮದುವೆ’ ಬಗ್ಗೆ ಪುನೀತ್​ ಮಾತಾಡಿದ್ದರು; ಆ ದಿನಗಳನ್ನು ನೆನಪಿಸಿಕೊಂಡ ನಟಿ ರಂಜನಿ ರಾಘವನ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ