ಹಣ ಉಳಿಸಲು ಅಭಿಮಾನಿಗಳಿಗೆ ಐದು ಕಿವಿಮಾತು ಹೇಳಿದ ‘ಕನ್ನಡತಿ’ ನಟಿ ರಂಜನಿ ರಾಘವನ್​

ಕೆಲವರು ಹೊಸ ವರ್ಷಕ್ಕೆ ತಮ್ಮದೇ ಆದ ರೆಸಲ್ಯೂಷನ್​ ಹಾಕಿಕೊಳ್ಳುತ್ತಿದ್ದಾರೆ. ನಟಿ ರಂಜನಿ ರಾಘವನ್​ ಕೂಡ ಒಂದಷ್ಟು ಟಿಪ್ಸ್​ ನೀಡಿದ್ದಾರೆ. ಇದು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಟಿಪ್ಸ್​ ಅನ್ನೋದು ವಿಶೇಷ.

ಹಣ ಉಳಿಸಲು ಅಭಿಮಾನಿಗಳಿಗೆ ಐದು ಕಿವಿಮಾತು ಹೇಳಿದ ‘ಕನ್ನಡತಿ’ ನಟಿ ರಂಜನಿ ರಾಘವನ್​
ರಂಜನಿ ರಾಘವನ್​
Edited By:

Updated on: Jan 01, 2022 | 3:43 PM

ನಟಿ ರಂಜನಿ ರಾಘವನ್​ ‘ಕನ್ನಡತಿ’ ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಿಗೆ ಕಿರುತೆರೆ ಜಗತ್ತಿನಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಭುವನೇಶ್ವರಿ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಹರ್ಷ (ಕಿರಣ್​ ರಾಜ್​) ಮತ್ತು ಭುವಿ ನಡುವಣ ಪ್ರೀತಿ ವಿಚಾರ ಇತ್ತೀಚಿನ ಎಪಿಸೋಡ್​ಗಳಲ್ಲಿ ಹೆಚ್ಚು ಹೈಲೈಟ್​ ಆಗುತ್ತಿದೆ. ಹೀಗಾಗಿ, ವೀಕ್ಷಕರು ಹೆಚ್ಚೆಚ್ಚು ಈ ಧಾರಾವಾಹಿಯನ್ನು ಇಷ್ಟಪಡುತ್ತಿದ್ದಾರೆ. ಈಗ ನಟಿ ರಂಜನಿ ರಾಘವನ್​ ಹೊಸ ವರ್ಷದಂದು ಒಂದಷ್ಟು ಟಿಪ್ಸ್​ ನೀಡಿದ್ದಾರೆ.

ಇಡೀ ವಿಶ್ವಾದ್ಯಂತ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಕೊವಿಡ್​ ಇರುವ ಕಾರಣ ಭಾರತದಲ್ಲಿ ಅಷ್ಟಾಗಿ ಹೊಸ ವರ್ಷದ ಆಚರಣೆ ಇರಲಿಲ್ಲ. ಆದರೆ, ಹಲವು ರಾಷ್ಟ್ರಗಳಲ್ಲಿ ಹೊಸ ವರ್ಷದ ಆಚರಣೆ ಜೋರಾಗಿತ್ತು. ಇನ್ನೂ ಕೆಲವರು ಹೊಸ ವರ್ಷಕ್ಕೆ ತಮ್ಮದೇ ಆದ ರೆಸಲ್ಯೂಷನ್​ ಹಾಕಿಕೊಳ್ಳುತ್ತಿದ್ದಾರೆ. ನಟಿ ರಂಜನಿ ರಾಘವನ್​ ಕೂಡ ಒಂದಷ್ಟು ಟಿಪ್ಸ್​ ನೀಡಿದ್ದಾರೆ. ಇದು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಟಿಪ್ಸ್​ ಅನ್ನೋದು ವಿಶೇಷ.

‘ಹೊಸ ವರ್ಷಕ್ಕೆ ಈ ಐದು ರೆಸಲ್ಯೂಷನ್​ಗಳನ್ನು ತೆಗೆದುಕೊಂಡ್ರೆ ನಿಮ್ಮ ಜೇಬಲ್ಲಿ ಹಣ ಯಾವಾಗ್ಲೂ ಇದ್ದೇ ಇರುತ್ತೆ! ಏನಂತೀರಿ?’ ಎಂಬ ಕ್ಯಾಪ್ಷನ್​ನೊಂದಿಗೆ ರಂಜನಿ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಐದು ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ. ಹಾಗಾದರೆ ಯಾವುದು ಆ ಐದು ಟಿಪ್ಸ್? ಇಲ್ಲಿದೆ ಉತ್ತರ.

  1. ಅನಗತ್ಯವಾದ ವಸ್ತುಗಳನ್ನು ಕೊಳ್ಳುವುದು ಬೇಡ
  2. ನಮ್ಮ ಆದಾಯದಲ್ಲಿ ಶೇ.10 ಉಳಿತಾಯ ಮಾಡೋಣ
  3. ಸಾಲದಿಂದ ದೂರವಿರೋಣ
  4. ಎಲ್ಲಿ ಹಣ ಬರುತ್ತದೆಯೋ ಅಲ್ಲಿ ಹೂಡಿಕೆ ಮಾಡೋಣ
  5. ಜಿಪುಣರಾಗೋದು ಬೇಡ, ಅದು ಹಣ ಅಷ್ಟೇ

ಈ ಐದು ರೆಸಲ್ಯೂಷನ್​ಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ನಿಮ್ಮನ್ನು ಹಿಂಬಾಲಿಸೋಕೆ ಇದೂ ಒಂದು ಕಾರಣ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ನಾವು ಇದನ್ನು ಪಾಲಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ranjani Raghavan: ‘ಕನ್ನಡತಿ’ ರಂಜನಿಗೆ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ಕಿರುತೆರೆ ನಟಿ

 ನಿರ್ಧಾರ ಬದಲಿಸಲಿದ್ದಾಳೆ ಭುವಿ? ಹರ್ಷನ ಪ್ರೀತಿ ಒಪ್ಪಿಕೊಳ್ಳುತ್ತಾಳಾ ಭುವನೇಶ್ವರಿ?

Published On - 3:40 pm, Sat, 1 January 22