ನಾಟಕ ಮಾಡೋಕೆ ಹೋಗಿ ಅಪಾಯ ಮೈಮೇಲೆ ಎಳೆದುಕೊಂಡ ‘ಕನ್ನಡತಿ’ ಸಾನಿಯಾ; ಹರ್ಷನಿಗೆ ಬಂತು ಅನುಮಾನ

| Updated By: ಮದನ್​ ಕುಮಾರ್​

Updated on: Jan 29, 2022 | 8:14 AM

ಸೌಪರ್ಣಿಕಾಳನ್ನು ಹತ್ಯೆ ಮಾಡಿಸಲು ಸಾನಿಯಾ ಸುಪಾರಿ ಕಿಲ್ಲರ್​ಗೆ 25 ಲಕ್ಷ ರೂಪಾಯಿ ನೀಡಿದ್ದಳು. ಆದರೆ ಇದನ್ನು ಸ್ವಂತ ಖಾತೆಯಿಂದ ನೀಡಿರಲಿಲ್ಲ. ಬದಲಿಗೆ, ರತ್ನಾಮಾಲಾ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಿಂದ ತೆಗೆದು ಕೊಟ್ಟಿದ್ದಳು.

ನಾಟಕ ಮಾಡೋಕೆ ಹೋಗಿ ಅಪಾಯ ಮೈಮೇಲೆ ಎಳೆದುಕೊಂಡ ‘ಕನ್ನಡತಿ’ ಸಾನಿಯಾ; ಹರ್ಷನಿಗೆ ಬಂತು ಅನುಮಾನ
ಸಾನಿಯಾ-ಹರ್ಷ
Follow us on

‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಮುಖ ಘಟ್ಟಗಳನ್ನು ದಾಟಿ ಸಾಗುತ್ತಿದೆ. ಧಾರಾವಾಹಿಯಲ್ಲಿ ಹೊಸಹೊಸ ತಿರುವುಗಳು ಬರುತ್ತಿವೆ. ಧಾರಾವಾಹಿಯ ವಿಲನ್ ಸಾನಿಯಾ (Saniya) ಏನೋ ಮಾಡಲು ಹೋಗಿ ಇನ್ನೇನೋ ಮಾಡುತ್ತಿದ್ದಾಳೆ. ಅವಳಿಗೆ ಒಂದರ ಮೇಲೆ ಒಂದರಂತೆ ಸಮಸ್ಯೆಗಳು ಎದುರಾಗುತ್ತಿವೆ. ಈಗ ಅವಳು ಹೆಣೆದ ಹೊಸ ನಾಟಕದಲ್ಲಿ ಅವಳೇ ತೊಂದರೆಗೆ ಸಿಲುಕಿದ್ದಾಳೆ. ಈ ಸಮಸ್ಯೆಯಿಂದ ಸಾನಿಯಾ ಹೇಗೆ ಹೊರಬರುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದಲ್ಲಿ ಹೀರೋ ಹರ್ಷನಿಗೆ (Harsha) ಅನುಮಾನ ಬಂದಿದೆ. ಆತನ ಕೈಗೆ ಸಾನಿಯಾ ಸಿಕ್ಕಿ ಬೀಳುತ್ತಾಳಾ ಎಂಬುದನ್ನು ಕೂಡ ಕಾದು ನೋಡಬೇಕಿದೆ. ಅಷ್ಟಕ್ಕೂ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೌಪರ್ಣಿಕಾಳನ್ನು ಹತ್ಯೆ ಮಾಡಿಸಲು ಸಾನಿಯಾ ಸುಪಾರಿ ಕಿಲ್ಲರ್​ಗೆ 25 ಲಕ್ಷ ರೂಪಾಯಿ ನೀಡಿದ್ದಳು. ಆದರೆ ಇದನ್ನು ಸ್ವಂತ ಖಾತೆಯಿಂದ ನೀಡಿರಲಿಲ್ಲ. ಬದಲಿಗೆ, ರತ್ನಾಮಾಲಾ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಿಂದ ತೆಗೆದು ಕೊಟ್ಟಿದ್ದಳು. ಈ ಮೂಲಕ ಎಂಡಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಳು. ಈ ವಿಚಾರ ರತ್ನಮಾಲಾಗೆ ಗೊತ್ತಾಗಿದೆ. ಎರಡು ದಿನದಲ್ಲಿ ಹಣ ಹಿಂದಿರುಗಿಸಬೇಕು ಅಥವಾ ಆ ಹಣ ಎಲ್ಲಿ ಖರ್ಚಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಆದೇಶ ರತ್ನಮಾಲಾ ಕಡೆಯಿಂದ ಬಂದಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಾನಿಯಾ ಮಾಸ್ಟರ್​ ಪ್ಲ್ಯಾನ್​ ಒಂದನ್ನು ರೂಪಿಸಿದ್ದಳು.

ತಾಯಿಗೆ ಹಾರ್ಟ್​ ಅಟ್ಯಾಕ್​ ಆಗಿದೆ ಎಂದು ಸುಳ್ಳು ಹೇಳುವ ಮೂಲಕ ಹಣ ಗಳಿಕೆಗೆ ಪ್ಲ್ಯಾನ್​ ರೂಪಿಸಿದ್ದಳು. ಈ ಪ್ಲ್ಯಾನ್​ ಅಂದುಕೊಂಡಂತೆ ನಡೆಯುವುದರಲ್ಲಿತ್ತು. ಆದರೆ, ಕೊನೇ ಕ್ಷಣದಲ್ಲಿ ಈ ಪ್ಲ್ಯಾನ್ ಕೈಕೊಟ್ಟಿದೆ. ಸಾನಿಯಾ ತಾಯಿಗೆ ನಿಜವಾಗಲೂ ಹೃದಯಾಘಾತವಾಗಿದೆ.

ಸಾನಿಯಾ ತಾಯಿಗೆ ಈ ಮೊದಲೇ ಹೃದಯಾಘಾತವಾಗಿತ್ತು. ಆದರೆ, ಈಗ ಸಾನಿಯಾ ಮಾಡಿದ ಹೊಸ ನಾಟಕದಿಂದ ಅವಳ ತಾಯಿ ಭಯ ಬಿದ್ದಿದ್ದಾಳೆ. ಹೀಗಾಗಿ, ಹೃದಯಾಘಾತವಾಗಿದೆ. ಈಗ ಸಾನಿಯಾ ಮುಂದೇನು ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ, ತಾನೇ ತೋಡಿದ ಹಳ್ಳದಲ್ಲಿ ಸಾನಿಯಾ ಸಿಕ್ಕಿ ಹಾಕಿಕೊಂಡಿದ್ದಾಳೆ.

ಕೊವಿಡ್​ನಿಂದ ಮುಕ್ತರಾದ ರಂಜನಿ

ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ಮಾಡುತ್ತಿರುವ ರಂಜನಿಗೆ ಕೊವಿಡ್ ಪಾಸಿಟಿವ್​ ಆಗಿತ್ತು. ಈ ಕಾರಣಕ್ಕೆ ಅವರು ಕ್ವಾರಂಟೈನ್​ ಆಗಿದ್ದರು. ಈಗ ಅವರು ಚೇತರಿಕೆ ಕಂಡಿದ್ದಾರೆ. ಕೊವಿಡ್​ ನೆಗೆಟಿವ್​ ಬಂದಿದೆ. ‘ಬೇಗ ಗುಣಮುಖರಾಗಿ ಚಾಂಪ್​’ ಎಂದು ಕಿರಣ್​ ರಾಜ್​ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಪೋಸ್ಟ್ ಮಾಡಿ, ರಂಜನಿ ಅವರನ್ನು ಟ್ಯಾಗ್​ ಮಾಡಿದ್ದರು. ಇದನ್ನು ಸ್ಟೇಟಸ್​ನಲ್ಲಿ ರೀ ಪೋಸ್ಟ್ ಮಾಡಿಕೊಂಡಿರುವ ರಂಜನಿ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದರು. ಅಲ್ಲದೆ, ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿಕೊಂಡಿದ್ದರು. ಈಗ ಅವರಿಗೆ ಕೊವಿಡ್​ ನೆಗೆಟಿವ್​ ಆಗಿದೆ.

ಇದನ್ನೂ ಓದಿ: Ranjani Raghavan: ‘ಕನ್ನಡತಿ’ ರಂಜನಿಗೆ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ಕಿರುತೆರೆ ನಟಿ

Ramola: ರಮೋಲಾ ಈಗ ನಾಯಕಿ; ‘ಕನ್ನಡತಿ’ ವಿಲನ್​ಗೆ ಸಿನಿಮಾದಲ್ಲಿ ಹೀರೋಯಿನ್​ ಪಟ್ಟ

Published On - 6:00 am, Fri, 28 January 22