ಕೈ ಕೊಟ್ಟ ವರುಧಿನಿಯ ಮೊದಲ ಸಂಚು; ದೊಡ್ಡ ಅಪಾಯದ ಸೂಚನೆ?

| Updated By: ರಾಜೇಶ್ ದುಗ್ಗುಮನೆ

Updated on: Nov 18, 2022 | 7:00 AM

ಹರ್ಷ ಹಾಗೂ ಭುವಿ ತುಂಬಾನೇ ಅನ್ಯೋನ್ಯವಾಗಿದ್ದಾರೆ. ಕಂಪನಿ ನಿರ್ಧಾರದ ವಿಚಾರದಲ್ಲಿ ಭುವಿಯ ಸಲಹೆಯನ್ನು ಕೇಳಿ ಎಂದು ಹರ್ಷನಿಗೆ ವರುಧಿನಿ ಐಡಿಯಾ ಕೊಟ್ಟಿದ್ದಳು. ಇದನ್ನು ಹರ್ಷ ಪಾಲಿಸಲು ಶುರುಮಾಡಿದ್ದಾನೆ.

ಕೈ ಕೊಟ್ಟ ವರುಧಿನಿಯ ಮೊದಲ ಸಂಚು; ದೊಡ್ಡ ಅಪಾಯದ ಸೂಚನೆ?
ವರು
Follow us on

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

 ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭುವಿ ಹಾಗೂ ಹರ್ಷನನ್ನು ಬೇರೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ವರುಧಿನಿ ಬಂದಿದ್ದಾಳೆ. ಇದಕ್ಕಾಗಿ ಆಕೆ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾಳೆ. ಹರ್ಷನನ್ನು ನಾನು ಅರಿತುಕೊಂಡಿದ್ದೇನೆ ಎಂದು ಆಕೆ ಭಾವಿಸಿದ್ದಳು. ಆದರೆ ಅದು ಸುಳ್ಳಾಗಿದೆ. ಹರ್ಷನಿಗೆ ಏನು ಬೇಕು, ಏನು ಬೇಡ ಎಂಬ ಅರಿವು ಅವಳಿಗೆ ಬಂದೇ ಇಲ್ಲ. ಈ ಹರ್ಷನನ್ನು ಭುವಿ ಅರಿತುಗೊಂಡಿದ್ದಾಳೆ ಎಂಬುದು ಕೂಡ ಗೊತ್ತಾಗಿದೆ.

ವರುಧಿನಿಯ ಯೋಜನೆ ವಿಫಲ

ರತ್ನಮಾಲಾ ವಿಲ್ ಬರೆದು ಇಟ್ಟಿದ್ದಳು. ಈ ವಿಲ್​ನ ಭುವಿಗೆ ನೀಡಿದ್ದಳು ರತ್ನಮಾಲಾ. ‘ನಾನು ಸತ್ತ ನಂತರ ಇದನ್ನು ತೆಗೆದು ನೋಡು’ ಎಂದು ಭುವಿಗೆ ರತ್ನಮಾಲಾ ಸೂಚನೆ ನೀಡಿದ್ದಳು. ಈಗ ರತ್ನಮಾಲಾ ಮೃತಪಟ್ಟಿದ್ದಾಳೆ. ರತ್ನಮಾಲಾ ಕೊಟ್ಟ ಲಕೋಟೆಯಲ್ಲಿ ಏನಿದೆ ಎಂದು ನೋಡುವ ಕುತೂಹಲ ಭುವಿಯಲ್ಲಿ ಉಳಿದುಕೊಂಡಿಲ್ಲ. ಹೀಗಾಗಿ, ಆಕೆ ಅದನ್ನು ತೆಗೆದುನೋಡುವ ಉಸಾಬರಿಗೆ ಹೋಗಿಲ್ಲ. ಆದರೆ, ಅದರಲ್ಲಿ ತನ್ನ ಭವಿಷ್ಯವೇ ಅಡಗಿದೆ ಎನ್ನುವ ವಿಚಾರ ಆಕೆಗೆ ಗೊತ್ತಿಲ್ಲ.

ಸೀರೆಯ ಮಧ್ಯದಲ್ಲಿ ಈ ವಿಲ್ ಪತ್ರ ಇದೆ. ಈ ಸೀರೆಯನ್ನು ನೋಡಿ ವರುಧಿನಿ ಅದನ್ನು ವಾಶಿಂಗ್ ಮಶಿನ್​ಗೆ ಹಾಕಲು ತೆಗೆದಿಟ್ಟ ಬಟ್ಟೆಯ ಜತೆ ಸೇರಿಸಿದ್ದಳು. ಆದರೆ, ಕೆಲಸದವಳು ಅದನ್ನು ವಾಶಿಂಗ್ ಮಶಿನ್​ಗೆ ಹಾಕದೆ ಮರಳಿ ಭುವಿಗೆ ನೀಡಿದ್ದಳು. ಇದನ್ನು ನೋಡಿ ವರು ಸಿಟ್ಟು ಮಾಡಿದ್ದಾಳೆ. ಕೆಲಸದವಳ ಕೆನ್ನೆಗೆ ಹೊಡೆದಿದ್ದಾಳೆ ತನ್ನ ಮೊದಲ ಯೋಜನೆಯೇ ವಿಫಲವಾಯಿತಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ. ಇದು ಮುಂದಾಗುವ ಅಪಾಯದ ಸೂಚನೆ ಎಂದು ಕೂಡ ಆಕೆಗೆ ಅನಿಸಿದೆ.

ವಿಲ್ ಪತ್ರದಲ್ಲಿ ಏನಿದೆ ಎನ್ನುವ ವಿಚಾರ ಭುವಿಗೆ ತಿಳಿಯಬಾರದು, ಅದನ್ನು ಲೀಕ್ ಮಾಡಿ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂಬುದು ವರುಧಿನಿಯ ಆಲೋಚನೆ ಆಗಿತ್ತು. ಆದರೆ, ಅವಳ ಮೊದಲ ಸಂಚು ಕೈ ಕೊಟ್ಟಿದೆ. ಆಕೆ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದಾಳೆ.

ಹರ್ಷನಿಗೆ ಭುವಿ ಸಲಹೆ

ಹರ್ಷ ಹಾಗೂ ಭುವಿ ತುಂಬಾನೇ ಅನ್ಯೋನ್ಯವಾಗಿದ್ದಾರೆ. ಕಂಪನಿ ನಿರ್ಧಾರದ ವಿಚಾರದಲ್ಲಿ ಭುವಿಯ ಸಲಹೆಯನ್ನು ಕೇಳಿ ಎಂದು ಹರ್ಷನಿಗೆ ವರುಧಿನಿ ಐಡಿಯಾ ಕೊಟ್ಟಿದ್ದಳು. ಇದನ್ನು ಹರ್ಷ ಪಾಲಿಸಲು ಶುರುಮಾಡಿದ್ದಾನೆ. ಆತ ಭುವಿಯ ಬಳಿ ಸಲಹೆ ಕೇಳಿದ್ದಾನೆ.

ರತ್ನಮಾಲಾ ಮೃತಪಟ್ಟ ನಂತರ ಮಾಲಾ ಸಂಸ್ಥೆಯ ಎಲ್ಲಾ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾನೆ ಹರ್ಷ. ಕಂಪನಿಯಲ್ಲಿ ಕಡಿಮೆ ಪರ್ಫಾರ್ಮೆನ್ಸ್ ನೀಡಿದವರನ್ನು ತೆಗೆದು ಹಾಕುವ ನಿರ್ಧಾರಕ್ಕೆ ಆತ ಬಂದಿದ್ದಾನೆ. ಈ ವಿಚಾರದಲ್ಲಿ ಆತ ಭುವಿಯ ಸಲಹೆ ಕೇಳಿದ್ದಾನೆ. ಆದರೆ, ಭುವಿಗೆ ಇದು ಹೊಸದು ಎನಿಸಿದೆ. ‘ಇದೇನು ಹೊಸ ನಡೆ? ನಾನು ನಿಮಗೆ ಸಲಹೆ ನೀಡುವುದೇ? ಅದು ಹೇಗೆ ಸಾಧ್ಯ? ಹಾಗೆ ಮಾಡಿದರೆ ನಿಮ್ಮ ವಿಚಾರದಲ್ಲಿ, ಕಂಪನಿ ವಿಚಾರದಲ್ಲಿ ಮೂಗು ತೂರಿಸಿದಂತೆ ಆಗುತ್ತದೆ. ಆ ರೀತಿ ಮಾಡಲು ನನಗೆ ಇಷ್ಟವಿಲ್ಲ’ ಎಂದಿದ್ದಾಳೆ. ಆದಾಗ್ಯೂ ಹರ್ಷ ಒತ್ತಾಯ ಮಾಡಿ ಭುವಿಯ ಸಲಹೆ ಕೇಳಿದ್ದಾನೆ.

‘ಓರ್ವ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಅದಕ್ಕೆ ಹಲವು ಕಾರಣಗಳು ಇರುತ್ತವೆ. ಮೇಲಿನ ಅಧಿಕಾರಿಗಳು ಹೇಗಿದ್ದಾರೆ ಅನ್ನೋದು ಕೂಡ ಇಲ್ಲಿ ಪ್ರಮುಖವಾಗುತ್ತದೆ. ಅವರನ್ನು ನಂಬಿಕೊಂಡು ಒಂದು ಕುಟುಂಬ ಇರುತ್ತದೆ. ಹೀಗಾಗಿ, ಏಕಾಏಕಿ ಅವರನ್ನು ತೆಗೆದು ಹಾಕುವ ನಿರ್ಧಾರ ಸರಿ ಅಲ್ಲ’ ಎಂದಳು ಭುವಿ. ಇದನ್ನು ಕೇಳಿ ಹರ್ಷನಿಗೆ ಅಚ್ಚರಿ ಆಗಿದೆ.

ರತ್ನಮಾಲಾ ಕೂಡ ಇದೇ ರೀತಿ ಮಾತನಾಡುತ್ತಿದ್ದಳು. ಹೀಗಾಗಿ, ಆಕೆಯನ್ನು ಜ್ಯೂನಿಯರ್ ರತ್ನಮಾಲಾ ಎಂದು ಕರೆದಿದ್ದಾನೆ ಹರ್ಷ. ಭುವಿ ಕಂಪನಿಯನ್ನು ನಡೆಸಿದರೆ ಕಷ್ಟ ಇದೆ ಎಂಬ ಮಾತನ್ನು ಕೂಡ ಹೇಳಿದ್ದಾನೆ.

ಶ್ರೀಲಕ್ಷ್ಮಿ ಎಚ್.