ಕಾರ್ತಿಕ್ ಮಹೇಶ್ (Karthik Mahesh) ಅವರಿಗೆ ಬಿಗ್ ಬಾಸ್ನಿಂದ ಸಿಕ್ಕ ಜನಪ್ರಿಯತೆ ಸಣ್ಣದಲ್ಲ. ಅವರ ಹಿಂಬಾಲಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಕಾರ್ತಿಕ್ ಅವರು ಈಗ ಅನೇಕರ ಫೇವರಿಟ್ ಎನಿಸಿಕೊಂಡಿದ್ದಾರೆ. ಅವರಿಗೆ ತಂಗಿ ತೇಜಸ್ವಿನಿ ಬಗ್ಗೆ ಎಲ್ಲಿಲ್ಲದ ಪ್ರೀತಿ. ಇಬ್ಬರೂ ಒಟ್ಟಿಗೆ ನಿಂತು ಪೋಸ್ ಕೊಟ್ಟಿರೋ ಫೋಟೋನ ತೇಜಸ್ವಿನಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಕಾರ್ತಿಕ್ ಫ್ಯಾನ್ಸ್ ಈ ಫೋಟೋಗೆ ಲೈಕ್ಸ್ ಒತ್ತುತ್ತಿದ್ದಾರೆ.
ಕಾರ್ತಿಕ್ ಮಹೇಶ್ಗೆ ತಂಗಿ ಮೇಲೆ ಅಪಾರ ಪ್ರೀತಿ. ಕಾರ್ತಿಕ್ ಬಿಗ್ ಬಾಸ್ಗೆ ಬರುವ ಸಂದರ್ಭದಲ್ಲಿ ಅವರು ಪ್ರೆಗ್ನೆಂಟ್ ಆಗಿದ್ದರು. ದೊಡ್ಮನೆಯಲ್ಲಿದ್ದಾಗ ತಂಗಿಯ ಆರೋಗ್ಯದ ಬಗ್ಗೆ ಅವರು ಚಿಂತೆಗೆ ಒಳಗಾಗಿದ್ದರು. ಫಿನಾಲೆ ತಲುಪಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಎಲ್ಲಾ ಸ್ಪರ್ಧಿಗಳ ಒಂದು ಕೋರಿಕೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಹೇಳಿದ್ದರು. ಆಗ ಕಾರ್ತಿಕ್ ಅವರು ತಂಗಿಯ ಜೊತೆ ಮಾತನಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದು ಅವರು ತಂಗಿಯ ಮೇಲೆ ಇಟ್ಟ ಪ್ರೀತಿಗೆ ಒಳ್ಳೆಯ ಉದಾಹರಣೆ.
ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ತಂಗಿಯನ್ನು ಭೇಟಿ ಮಾಡಿದ್ದಾರೆ. ಅವರ ತಂಗಿ ತೇಜಸ್ವಿನಿ ಅವರೇ ಫೋಟೋ ಹಂಚಿಕೊಂಡಿದ್ದಾರೆ. ಅಣ್ಣ ಹಾಗೂ ಅಮ್ಮನ ಜೊತೆ ನಿಂತಿರೋ ಫೋಟೋನ ತೇಜಸ್ವಿನಿ ಹಂಚಿಕೊಂಡಿದ್ದಾರೆ. ‘ಬಹಳ ಸಮಯದ ನಂತರ ನನ್ನವರ ಜೊತೆ. ನನ್ನ ಅಣ್ಣನ ಯಶಸ್ಸು ನೋಡಲು ಖುಷಿ ಆಗುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಲೈವ್ನಲ್ಲಿ ನಮ್ರತಾ ಗೌಡ ಅಂದ ಹೊಗಳಿದ ಕಾರ್ತಿಕ್ ಮಹೇಶ್; ವಿಡಿಯೋ ವೈರಲ್
ಮತ್ತೊಂದು ಫೋಟೋದಲ್ಲಿ ಅಣ್ಣನ ಜೊತೆ ಮಾತ್ರ ಇರೋ ಫೋಟೋ ಹಂಚಿಕೊಂಡಿದ್ದಾರೆ. ‘ಅಣ್ಣ ನನ್ನ ಎರಡನೇ ತಂದೆ, ನನ್ನ ಗೆಳೆಯ, ಗುಟ್ಟನ್ನು ಕಾಪಾಡಿಕೊಳ್ಳುವವ, ಎಲ್ಲವೂ’ ಎಂದು ಬರೆದುಕೊಂಡಿದ್ದಾರೆ ತೇಜಸ್ವಿನಿ. ಈ ಫೋಟೋಗೆ ಒಂದು ಲಕ್ಷ ಲೈಕ್ಸ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ