‘ನಿಮ್ಮ ತಮ್ಮ ಮಾತನಾಡಿದ್ದು ಸರಿಯಲ್ಲ, ನಿಮ್ಮನ್ನು ಹೊರಗೆ ಏಕೆ ಕಳಿಸಿಲ್ಲ?’; ಕಾವ್ಯಾಗೆ ಸುದೀಪ್ ಪ್ರಶ್ನೆ

ಕಳೆದ ವಾರ ಸುದೀಪ್ ಅವರು ‘ಮಾರ್ಕ್​’ ಸಿನಿಮಾದ ರಿಲೀಸ್ ಕಾರಣಕ್ಕೆ ಬರಲೇ ಇಲ್ಲ. ಅವರು ಈ ವಾರ ಆ ವಿಷಯವನ್ನು ಚರ್ಚೆ ಮಾಡಿದರು. ಅವರು ಕಾವ್ಯಾಗೆ ಪ್ರಶ್ನೆ ಮಾಡಿದರು. ‘ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ’ ಎಂದಿದ್ದಾರೆ ಸುದೀಪ್.

‘ನಿಮ್ಮ ತಮ್ಮ ಮಾತನಾಡಿದ್ದು ಸರಿಯಲ್ಲ, ನಿಮ್ಮನ್ನು ಹೊರಗೆ ಏಕೆ ಕಳಿಸಿಲ್ಲ?’; ಕಾವ್ಯಾಗೆ ಸುದೀಪ್ ಪ್ರಶ್ನೆ
ಕಾವ್ಯಾ-ಸುದೀಪ್-ಕಾರ್ತಿಕ್
Edited By:

Updated on: Jan 03, 2026 | 10:08 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫ್ಯಾಮಿಲಿ ವೀಕ್​​ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಅದರಲ್ಲಿ ಕಾವ್ಯಾ ಕುಟುಂಬ ಹಾಗೂ ಅವರ ಸಹೋದರ ಕಾರ್ತಿಕ್ ಮಾಡಿದ ಎಡವಟ್ಟು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಕಾವ್ಯಾಗೆ ಹೊರಗಿನ ವಿಷಯಗಳನ್ನು ಹೇಳಿದ್ದರು ಅವರ ಸಹೋದರ. ಈ ಕಾರಣಕ್ಕೆ ಅವರ ಕುಟುಂಬದವರನ್ನು ಹೊರಕ್ಕೆ ಕಳುಹಿಸಲಾಯಿತು. ಅವರ ಕುಟುಂಬ ಮಾತನಾಡಿದ್ದು ಸರಿ ಅಲ್ಲ ಎಂದು ಬಿಗ್ ಬಾಸ್ ಅಭಿಪ್ರಾಯಪಟ್ಟರು. ಸುದೀಪ್ ಕೂಡ ಹೀಗೆಯೇ ಅಂದರು.

ಕಳೆದ ವಾರ ಸುದೀಪ್ ಅವರು ‘ಮಾರ್ಕ್​’ ಸಿನಿಮಾದ ರಿಲೀಸ್ ಕಾರಣಕ್ಕೆ ಬರಲೇ ಇಲ್ಲ. ಅವರು ಈ ವಾರ ಆ ವಿಷಯವನ್ನು ಚರ್ಚೆ ಮಾಡಿದರು. ಅವರು ಕಾವ್ಯಾಗೆ ಪ್ರಶ್ನೆ ಮಾಡಿದರು. ‘ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ’ ಎಂದಿದ್ದಾರೆ ಸುದೀಪ್.

‘ಬಿಗ್ ಬಾಸ್ ಅನೇಕ ಬಾರಿ ವಾರ್ನ್ ಮಾಡುತ್ತಾ ಇದ್ದರು. ನಂತರ ಕಾಲ್ ತೆಗೆದುಕೊಂಡರು. ನೀವು ನಿಯಮ ಮೀರಿದ್ದಿರಿ. ಅದು ಸರಿ ಅಲ್ಲ. ನಿಮ್ಮ ತಮ್ಮ ಮಾತನಾಡಿದ್ದು ಸರಿ ಅಲ್ಲ. ನೀವು ಸೀಸನ್ ಇಡೀ ಬ್ಯಾಲೆನ್ಸ್ಡ್​ ಆಗಿ ಮಾತನಾಡುತ್ತಾ ಬಂದವರು.ಈಗ ಹೀಗೆ ಮಾಡಿದ್ದು ಎಷ್ಟು ಸರಿ’ ಎಂದು ಸುದೀಪ್ ಕೇಳಿದರು.

‘ಯಾರೂ ಮಾತನಾಡಕೂಡದು ಎಂದು ಕುಟುಂಬದವರಿಗೆ ಹೇಳಿ ಕಳಿಸಿದ್ದೆವು. ಎಲ್ಲ ಕುಟುಂಬದವರೂ ಹಿಂಟ್ ಕೊಡೋದಾಗಿದ್ರೆ ಈ ಸೀಸನ್ ಎಲ್ಲಿ ಹೋಗುತ್ತೆ? ನಿಮ್ಮನ್ನು ಹೊರಗೆ ಕರೆದಿಲ್ಲ. ಅದೇ ನನಗೆ ಆಶ್ಚರ್ಯ ಆಗಿದ್ದು. ಈ ಸೀಸನ್ ಬಿಗ್ ಬಾಸ್ ಅಷ್ಟು ಗಂಭೀರವಾಗಿ ಹೋಗಿಲ್ಲ. ಪ್ರೀತಿಯಿಂದ ಬೈಕೋತಾ ಇದೀರಾ, ಹೊಡ್ಕೋತಾ ಇದ್ರಿ. ಇದಕ್ಕೆ ಬಿಗ್ ಬಾಸ್ ಮಧ್ಯ ಪ್ರವೇಶಿಸಿಲ್ಲ’ ಎಂದರು ಸುದೀಪ್.

ಇದನ್ನೂ ಓದಿ: ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?

‘ಹಿಂಟ್ ಕೊಟ್ಟು ಹೋದಮೇಲೆ ಅದನ್ನು ಮರಳಿ ಪಡೆಯೋಕೆ ಆಗಲ್ಲ. ನಿಮ್ಮ ಮನಸ್ಸಿನ ಒಳಗೆ ಹೋಗಿ ಅಳಿಸೋಕೆ ಆಗಲ್ಲ. ಡ್ಯಾಮೇಜ್ ಮಾಡಿಯಾಗಿದೆ’ ಎಂದು ಸುದೀಪ್ ಬೇಸರ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.