‘ಸಾರಿ, ಸಾರಿ, ಸಾರಿ’; ಸುದೀಪ್ ಹಾಗೂ ಫ್ಯಾನ್ಸ್ ಬಳಿ ಆರ್ಯವರ್ಧನ್ ಗುರೂಜಿ ಬಹಿರಂಗ ಕ್ಷಮೆ
ಆರ್ಯವರ್ಧನ್ ಗುರೂಜಿ ಸುದೀಪ್ ಮತ್ತು ಬಿಗ್ ಬಾಸ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದಾರೆ. ಅಭಿಮಾನಿಗಳಿಂದ ತೀವ್ರ ವಿರೋಧ ಎದುರಿಸಿದ ನಂತರ, ಗುರೂಜಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. "ಮಾತನಾಡುವ ಭರದಲ್ಲಿ ಹೇಳಿದ್ದೇನೆ, ನೋವಾಗಿದ್ದರೆ ಕ್ಷಮಿಸಿ" ಎಂದು ಸುದೀಪ್ ಮತ್ತು ಅವರ ಅಭಿಮಾನಿಗಳಿಗೆ ಆರ್ಯವರ್ಧನ್ ಗುರೂಜಿ ಮನವಿ ಮಾಡಿದ್ದಾರೆ.

‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಫೇಮಸ್ ಆದವರು ಆರ್ಯವರ್ಧನ್ ಗುರೂಜಿ (Aryavardhan Guruji). ತಾವು ಸಂಖ್ಯಾ ಶಾಸ್ತ್ರಜ್ಞ ಎಂದು ಅವರು ಘೋಷಿಸಿಕೊಂಡಿದ್ದಾರೆ. ಅವರು ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಮೊದಲು ಬಿಗ್ ಬಾಸ್ಗೂ ಬಂದಿದ್ದರು. ಈಗ ಅವರು ಸುದೀಪ್ ಬಳಿ ಕ್ಷಮೆ ಕೇಳಿದ್ದಾರೆ. ಸುದೀಪ್ ವಿರುದ್ಧ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ತಪ್ಪನ್ನು ತಿದ್ದುಕೊಳ್ಳಲು ಚಾನ್ಸ್ ಕೇಳಿದ್ದಾರೆ.
ಆರ್ಯವರ್ಧನ್ ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂದು ಊಹಿಸೋದು ನಿಜಕ್ಕೂ ಕಷ್ಟ. ಬಿಗ್ ಬಾಸ್ ಅಲ್ಲಿ ಸ್ಪರ್ಧಿ ಆಗಿದ್ದಾಗ ಆ ಶೋ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ‘ಅನುಪಮಾ ಗೌಡ ಅವರನ್ನು ಉಳಿಸಲು ನೀವು ಪ್ರಯತ್ನಿಸುತ್ತಿದ್ದೀರಿ’ ಎಂದು ಸುದೀಪ್ ಎದುರೇ ಹೇಳಿದ್ದರು. ಇದರಿಂದ ಸಿಟ್ಟಾಗಿದ್ದ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.
ಆರ್ಯವರ್ಧನ್ ಮಾತನಾಡಿದ್ದ ವಿಡಿಯೋ
View this post on Instagram
ಬಿಗ್ ಬಾಸ್ನಿಂದ ಹೊರ ಬಂದ ಅವರು ಅನೇಕ ಬಾರಿ ಶೋ ವಿರುದ್ಧ ಹಾಗು ಸುದೀಪ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಇದೆ. ಇದಕ್ಕೆ ಸುದೀಪ್ ವೇದಿಕೆ ಮೇಲೆ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಈಗ ಆರ್ಯವರ್ಧನ್ ಮಾತು ಮತ್ತೂ ಕೆಳಹಂತಕ್ಕೆ ಹೋಗಿತ್ತು. ‘ದರ್ಶನ್ ಹೋದ್ಮೇಲೆ ಸುದೀಪ್ ಎಗರಾಡುತ್ತಿದ್ದಾರೆ’ ಎಂದು ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಆರ್ಯವರ್ಧನ್ಗೆ ಸುದೀಪ್ ಅಭಿಮಾನಿಗಳಿಗೆ ಸ್ಟ್ರಾಂಗ್ ಆಗಿಯೇ ಎಚ್ಚರಿಕೆ ಬಂದಿತ್ತು. ದುನಿಯಾ ವಿಜಯ್ ಅವರ ವಾರ್ನಿಂಗ್ ವಿಡಿಯೋ ಎಡಿಟ್ ಮಾಡಿ ಹರಿಬಿಡಲಾಗಿತ್ತು.
ಆರ್ಯವರ್ಧನ್ ಕ್ಷಮೆ ಕೇಳಿದ ವಿಡಿಯೋ
View this post on Instagram
ಫ್ಯಾನ್ಸ್ ಆಕ್ರೋಶದ ಬಳಿಕ ಆರ್ಯವರ್ಧನ್ ಕ್ಷಮೆ ಕೇಳಿದ್ದಾರೆ. ‘ಸುದೀಪ್ ಅವರಿಗೆ ನಮಸ್ಕಾರ. ಅವರ ಜೊತೆ ಕೆಲಸ ಮಾಡಿದ್ದೇನೆ. ಹೊಸ ವರ್ಷ ಅವರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆದು ಮಾಡಲಿ’ ಎಂದು ಮಾತು ಆರಂಭಿಸಿದ್ದಾರೆ.
ಇದನ್ನೂ ಓದಿ: ‘ಹೊರಗೆ ಹೋದ್ಮೇಲೆ ನಮಗೆ ಇಡ್ತಾರೆ’; ವೇದಿಕೆ ಮೇಲೆ ಆರ್ಯವರ್ಧನ್ಗೆ ಸುದೀಪ್ ತಿರುಗೇಟು
‘ಮಾತನಾಡುವ ಭರದಲ್ಲಿ ಏನೋ ಹೇಳಿದ್ದೇನೆ. ನೋವಾಗಿದ್ದರೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಅವರ ಮೇಲೆ ಅಪಾರ ನಂಬಿಕೆ ಇದೆ. ಸಾರಿ ಸಾರಿ ಸಾರಿ.. ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. ಅವರ ಅಭಿಮಾನಿಗಳಿಗೂ ಒಳ್ಳೆಯದಾಗಲಿ’ ಎಂದು ಆರ್ಯವರ್ಧನ್ ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:03 pm, Sat, 3 January 26




