
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಿರಣ್ ಶಾಸ್ತ್ರಿ ಉತ್ತಮವಾಗಿ ಆಡಿದ್ದಾರೆ. ಕಳೆದ ವಾರ ಅವರು ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡ ಬಳಿಕ ಕಿರಣ್ ಅವರು ಸಂಪೂರ್ಣವಾಗಿ ಆಟದ ಗತಿ ಬದಲಿಸಿದ್ದಾರೆ. ಇದಕ್ಕೆ ಸುದೀಪ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಸುದೀಪ್ ಅವರು ಕಿರಣ್ ಭೇಷ್ ಎಂದಿದ್ದಾರೆ. ಇದರಿಂದ ಕಿರಣ್ ಶಾಸ್ತ್ರಿಗೆ ಖುಷಿ ಆಗಿದೆ. ಅತ್ತ, ಲಿಖಿತ್ ಶಾಸ್ತ್ರಿ ಹಾಗೂ ಯಶಸ್ಗೆ ಸರಿಯಾಗಿ ಬೆಂಡೆತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13ರ’ ಎಮರ್ಜೆನ್ಸಿ ಎಕ್ಸಿಟ್‌ನಿಂದ ಈ ವಾರ ಸೇವ್ ಆಗಿದ್ದು ಕಿರಣ್. ಈ ವಿಷಯ ಅವರಿಗೆ ಖುಷಿ ನೀಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಅವರು ಸಂಪೂರ್ಣವಾಗಿ ಬದಲಾದರು. ಈ ಕಾರಣಕ್ಕೆ ಸುದೀಪ್ ಮೆಚ್ಚುಗೆ ಸೂಚಿಸಿದರು. ‘ಕಿರಣ್ ಶಾಸ್ತ್ರಿ ಸೇಫ್ ಆಗಿದ್ದಾರೆ. ಎಫರ್ಟ್ಸ್ ಕಾಣಿಸಿದೆ, ನಿಮಗಾಗಿ ನಿಂತುಕೊಂಡಿದ್ದೀರಿ, ಆಡುವಲ್ಲಿ ಆಡಿದ್ರಿ, ಮಾತನಾಡುವಾಗ ಮಾತನಾಡಿದ್ರಿ’ ಎಂದು ಭೇಷ್ ಎಂದರು ಸುದೀಪ್.
ಲಿಖಿತ್ ಬೋಂಧಿ ಹಾಗೂ ಯಶಸ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇದಕ್ಕೆ ಕಾರಣವೂ ಇತ್ತು. ಈ ವಾರ ಬಾತ್‌ರೂಂ ಕ್ಲೀನ್ ಮಾಡುವ ಜವಾಬ್ದಾರಿ ಇತ್ತು. ಆದರೆ, ಅದನ್ನು ಮಾಡಿಲ್ಲ. ಇದಕ್ಕೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ‘ಇದು ನಮ್ಮ ಬಳಿ ಬೇಡ’ ಎಂದು ನೇರವಾಗಿ ಹೇಳಿದರು. ರೂಲ್ಸ್ ಬ್ರೇಕ್ ಮಾಡಿ ಮಾಡಿ, ಲಿಖಿತ್ ಖುಷಿಯಾಗಿ ಇರುತ್ತಿದ್ದರು. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಇದು ನ್ಯಾಯಸಮ್ಮತವಲ್ಲ’; ತಾಂಡವ್ ಎಲಿಮಿನೇಷನ್ಗೆ ಓಪನ್ ಆಗಿ ಅಸಮಾಧಾನ ಹೊರಹಾಕಿದ ಗಗನ್
ಕಿರಣ್ ಶಾಸ್ತ್ರಿಗೆ ಸುದೀಪ್ ಬೈದರು. ಈ ವಾರ ಬಿಟ್ಟು ಬಿಡದೇ ಕಿರಣ್ ಅವರು ನಿದ್ದೆ ಮಾಡಿದ್ದರು. ಈ ರೂಲ್ಸ್ ಬ್ರೇಕ್ ಮಾಡಿದ್ದು ಕಿರಣ್ ಶಾಸ್ತ್ರಿ. ಇದು ಸರಿ ಅಲ್ಲ ಎಂದು ಸುದೀಪ್ ಖಡಕ್ ಆಗಿಯೇ ಕಿವಿಮಾತು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:28 pm, Sat, 26 September 26