‘ಹೊರಗೆ ಹೋದ್ಮೇಲೆ ನಮಗೆ ಇಡ್ತಾರೆ’; ವೇದಿಕೆ ಮೇಲೆ ಆರ್ಯವರ್ಧನ್​​ಗೆ ಸುದೀಪ್ ತಿರುಗೇಟು

|

Updated on: Nov 19, 2023 | 8:18 AM

ಆರ್ಯವರ್ಧನ್ ಅವರು ಬಿಗ್ ಬಾಸ್ ಒಟಿಟಿ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಫೇಕ್ ಎಂದು ಹೇಳುವ ಪ್ರಯತ್ನವನ್ನು ಮನೆಯ ಒಳಗೆ ಇದ್ದಾಗಲೇ ಮಾಡಿದ್ದರು. ಸುದೀಪ್ ಸಿಟ್ಟಾದ ಕಾರಣ ಸುಮ್ಮನಾಗಿದ್ದರು.

‘ಹೊರಗೆ ಹೋದ್ಮೇಲೆ ನಮಗೆ ಇಡ್ತಾರೆ’; ವೇದಿಕೆ ಮೇಲೆ ಆರ್ಯವರ್ಧನ್​​ಗೆ ಸುದೀಪ್ ತಿರುಗೇಟು
ರಕ್ಷಕ್-ಸುದೀಪ್-ಆರ್ಯವರ್ಧನ್
Follow us on

ಬಿಗ್ ಬಾಸ್ (Bigg Boss)​ ಸ್ಕ್ರಿಪ್ಟೆಡ್ ಅಲ್ಲ, ಇಲ್ಲಿ ಎಲ್ಲವೂ ಓಪನ್ ಆಗಿ ನಡೆಯುತ್ತದೆ ಎಂದು ವಾಹಿನಿಯವರು ಹೇಳುತ್ತಲೇ ಬರುತ್ತಿದ್ದಾರೆ. ಸುದೀಪ್ ಕೂಡ ಈ ವಿಚಾರವನ್ನು ಅನೇಕ ಬಾರಿ ಹೇಳಿದ್ದಾರೆ. ಶೋನಿಂದ ಎಷ್ಟು ಜನಕ್ಕೆ ಒಳ್ಳೆಯದಾಗಿದೆ ಎಂಬುದನ್ನು ಅನೇಕ ಬಾರಿ ಅವರು ಉಲ್ಲೇಖಿಸಿದ್ದಾರೆ. ಒಂದು ವರ್ಗದ ಜನರು ಈ ಮಾತನ್ನು ನಂಬುವುದಿಲ್ಲ. ಇನ್ನು, ಬಿಗ್ ಬಾಸ್​ಗೆ ಹೋಗಿ ಬಂದವರಲ್ಲೇ ಕೆಲವರು ಶೋ ವಿರುದ್ಧವೇ ಮಾತನಾಡಿದ್ದಿದೆ. ವೇದಿಕೆ ಮೇಲೆ ಸುದೀಪ್ ಈ ವಿಚಾರವನ್ನು ಎತ್ತಿದ್ದಾರೆ. ಪರೋಕ್ಷವಾಗಿ ಅವರು ಆರ್ಯವರ್ಧನ್ ಹಾಗೂ ರಕ್ಷಕ್​ಗೆ ತಿರುಗೇಟು ಕೊಟ್ಟಿದ್ದಾರೆ.

ಆರ್ಯವರ್ಧನ್ ಅವರು ಬಿಗ್ ಬಾಸ್ ಒಟಿಟಿ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಫೇಕ್ ಎಂದು ಹೇಳುವ ಪ್ರಯತ್ನವನ್ನು ಮನೆಯ ಒಳಗೆ ಇದ್ದಾಗಲೇ ಮಾಡಿದ್ದರು. ಸುದೀಪ್ ಸಿಟ್ಟಾದ ಕಾರಣ ಸುಮ್ಮನಾಗಿದ್ದರು. ಈ ಬಾರಿ ಅವರು ಸಂದರ್ಶನ ನೀಡುವಾಗ ಸುದೀಪ್ ಹಾಗೂ ಬಿಗ್ ಬಾಸ್ ಬಗ್ಗೆ ಅಪಸ್ವರ ತೆಗೆದಿದ್ದರು. ಇತ್ತೀಚೆಗೆ ಸುದೀಪ್ ಫ್ಯಾನ್ಸ್ ಅವರಿಗೆ ಮುತ್ತಿಗೆ ಹಾಕಿದ್ದರು. ಆ ಬಳಿಕ ಕ್ಷಮೆ ಕೇಳಿದ್ದರು.

ಇನ್ನು, ಬುಲೆಟ್ ರಕ್ಷಕ್ ಅವರು ಕೂಡ ದೊಡ್ಮನೆಯಿಂದ ಹೊರ ಬಂದ ಬಳಿಕ ಬಿಗ್ ಬಾಸ್ ವಿರುದ್ಧವೇ ಮಾತನಾಡಿದ್ದರು. ‘ನಾಟಕ ಮಾಡಿದ್ರೆ ಮಾತ್ರ ಬಿಗ್ ಬಾಸ್​ನಲ್ಲಿ ಉಳಿಯುತ್ತಾರೆ, ನನ್ನನ್ನ ಹೆಚ್ಚು ತೋರಿಸಿಲ್ಲ’ ಎಂದು ಅವರು ಹೇಳಿದ್ದರು. ಈ ಎಲ್ಲಾ ವಿಚಾರಗಳನ್ನು ಸುದೀಪ್ ವೇದಿಕೆ ಮೇಲೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸುದೀಪ್ ಅಭಿಮಾನಿಗಳಿಂದ ಮುತ್ತಿಗೆ: ನಡೆದಿದ್ದೇನೆಂದು ವಿವರಿಸಿದ ಆರ್ಯವರ್ಧನ್ ಗುರೂಜಿ

ಭಾಗ್ಯಶ್ರೀ ಹಾಗೂ ಸ್ನೇಹಿತ್ ಮಧ್ಯೆ ಆಗಾಗ ಕಿರಿಕ್ ಆಗುತ್ತಲೇ ಇರುತ್ತದೆ. ಇದನ್ನು ಸುಧಾರಿಸುವ ಪ್ರಯತ್ನ ಮಾಡಿದ್ದಾರೆ ಸುದೀಪ್. ಈ ವೇಳೆ ಸುದೀಪ್ ಈ ವಿಚಾರ ಹೇಳಿದ್ದಾರೆ. ‘ಬಿಗ್ ಬಾಸ್ ಮನೆ ಒಳಗೆ ಇದ್ದಾಗ ಸ್ಪರ್ಧಿಗಳು ಚೆನ್ನಾಗಿಯೇ ಇರ್ತಾರೆ. ಹೊರಗೆ ಹೋದಮೇಲೇ ನಮಗೆ ಇಡ್ತಾ ಇರ್ತಾರೆ. ಅದಕ್ಕೆಲ್ಲ ತಲೆ ಕೆಡಸಿಕೊಳ್ಳಬಾರದು. ನೋಡಿ ನಮ್ಮ ತಲೆಯಲ್ಲಿ ಇನ್ನೂ ಕೂದಲು ಹಾಗೆಯೇ ಇದೆ. ಆದರೆ, ಕೆಲವರ ತಲೆಯಲ್ಲಿ ಏನು ಉಳಿದೇ ಇಲ್ಲ’ ಎಂದಿದ್ದಾರೆ ಸುದೀಪ್. ಇದು ಆರ್ಯವರ್ಧನ್ ಅವರನ್ನು ಉದ್ದೇಶಿಸಿ ಹೇಳಿದ ಮಾತು ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:28 am, Sun, 19 November 23