ಈ ಬಾರಿ ಡಬಲ್ ಎಲಿಮಿನೇಷನ್: ಬಿಗ್​ಬಾಸ್ ಮನೆಯಿಂದ ಹೊರಹೋದವರ್ಯಾರು?

Bigg Boss Elimination: ಬಿಗ್​ಬಾಸ್ ಕನ್ನಡ ಸೀಸನ್ 10ರ ಈ ವೀಕೆಂಡ್​ನಲ್ಲಿ ಡಬಲ್ ಎಲಿಮಿನೇಷನ್. ಕಳೆದ ವಾರ ಅದೃಷ್ಟವಶಾತ್ ಮನೆಯಲ್ಲಿ ಉಳಿದುಕೊಂಡ ಸದಸ್ಯರೊಬ್ಬರೊಟ್ಟಿಗೆ ಇನ್ನೊಬ್ಬ ಸದಸ್ಯರೂ ಹೊರಗೆ ಹೋಗಲಿದ್ದಾರೆ. ಒಬ್ಬರ ಹೆಸರನ್ನು ಸುದೀಪ್ ಈಗಾಗಲೇ ಘೋಷಿಸಿದ್ದಾರೆ.

ಈ ಬಾರಿ ಡಬಲ್ ಎಲಿಮಿನೇಷನ್: ಬಿಗ್​ಬಾಸ್ ಮನೆಯಿಂದ ಹೊರಹೋದವರ್ಯಾರು?
ಎಲಿಮಿನೇಷನ್
Follow us
|

Updated on: Nov 18, 2023 | 11:20 PM

ಪ್ರತಿ ವೀಕೆಂಡ್​ಗೂ ಬಿಗ್​ಬಾಸ್ (Bigg Boss) ಮನೆಯಿಂದ ಒಬ್ಬರು ಹೊರಗೆ ಹೋಗುವುದು ಸಾಮಾನ್ಯ. ಆದರೆ ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಎರಡು ವಾರಗಳು ಯಾರೂ ಮನೆಯಿಂದ ಹೊರಗೆ ಹೋಗಿರಲಿಲ್ಲ. ಎಲಿಮಿನೇಟ್ ಆಗಿದ್ದ ಭಾಗ್ಯಶ್ರೀ ಅವರು ದಸರಾ ಹಬ್ಬದ ಸಂದರ್ಭದಲ್ಲಿ ಅದಷ್ಟವಶಾತ್ ಮನೆಯಲ್ಲಿಯೇ ಉಳಿದರು. ಅದಾದ ಬಳಿಕ ಕಳೆದ ವಾರ ಎಲಿಮಿನೇಷನ್​ನಿಂದ ಸೇಫ್ ಆದರೂ ವರ್ತೂರು ಸಂತೋಷ್ ತಾವು ಮನೆ ಬಿಟ್ಟು ಹೋಗಬೇಕು ಎಂದು ಪಟ್ಟು ಹಿಡಿದಿದ್ದರಿಂದ ಎಲಿಮಿನೇಷನ್ ಅನ್ನೇ ರದ್ದು ಮಾಡಿದ್ದರು ಸುದೀಪ್. ಹಾಗಾಗಿ ಈ ವಾರ ಒಂದೇ ದಿನ ಇಬ್ಬರು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ.

ಶನಿವಾರ ವೀಕೆಂಡ್ ಪಂಚಾಯಿತಿ ಆರಂಭಿಸಿದ ಸುದೀಪ್, ಎಲಿಮಿನೇಷನ್ ಮಾಡಿಯೇ ಇಂದಿನ ಎಪಿಸೋಡ್ ಪ್ರಾರಂಭಿಸುತ್ತೀನಿ ಎಂದಾಗ ಸ್ಪರ್ಧಿಗಳು ಶಾಕ್ ಆದರು. ಬಳಿಕ ಸುದೀಪ್, ತಾವು ತಮಾಷೆ ಮಾಡಿದ್ದಾಗಿ ಹೇಳಿದರು. ಅದಾದ ಬಳಿಕ ಡ್ರೋನ್ ಪ್ರತಾಪ್​ ತಮ್ಮ ತಂದೆಯೊಟ್ಟಿಗೆ ಫೋನ್​ನಲ್ಲಿ ಮಾತನಾಡಿ ಭಾವುಕಗೊಂಡರು. ಸ್ಪರ್ಧಿಗಳೂ ಭಾವುಕಗೊಂಡರು. ಸಂಗೀತಾ ಕಾರ್ತಿಕ್ ಹಾಗೂ ತನಿಷಾರ ನಡುವೆ ಬಂದಿರುವ ಭಿನ್ನಾಭಿಪ್ರಾಯದ ಬಗ್ಗೆ ಸುದೀಪ್ ತುಸು ಧೀರ್ಘವಾಗಿಯೇ ಮಾತನಾಡಿದರು.

ಎಪಿಸೋಡ್​ನ ಕೊನೆಯಲ್ಲಿ ಮತ್ತೆ ಎಲಿಮಿನೇಷನ್​ ಕಡೆಗೆ ಬಂದ ಸುದೀಪ್, ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ. ಈ ವಾರ ಬಿಗ್​ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಲಿದ್ದಾರೆ ಎಂದರು. ಮುಂದುವರೆದು, ಈ ವಾರ ಯಾರು ಮನೆಯಿಂದ ಹೊರಹೋಗಲಿದ್ದೀರಿ, ನೀವೇ ನಿರ್ಧರಿಸಿ ಎದ್ದು ನಿಲ್ಲಿ ಎಂದರು. ಮನೆಯ ಸ್ಪರ್ಧಿಗಳೆಲ್ಲ ಸುಮ್ಮನೆ ಕೂತಿದ್ದಾಗ ನಿಧಾನಕ್ಕೆ ಇಶಾನಿ ಎದ್ದು ನಿಂತರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾತು

ಕಳೆದ ಮೂರು ವಾರದಿಂದಲೂ ನಿಮ್ಮ ಮೇಲೆ ಕತ್ತಿ ತೂಗುತ್ತಲೇ ಇದೆ ಎಂದರು. ಕಳೆದ ವಾರ ಅದೃಷ್ಟವಷಾತ್ ಉಳಿದುಕೊಂಡಿರಿ. ಈಗ ನೀವೇ ಹೊರಗೆ ಹೋಗುವುದಾಗಿ ಎದ್ದು ನಿಂತಿದ್ದೀರಿ, ಅಂದಹಾಗೆ ನೀವು ಸರಿಯಾಗಿ ಊಹಿಸಿದ್ದೀರಿ, ಈ ವಾರ ಹೊರಗೆ ಹೋಗುತ್ತಿರುವುದು ನೀವೇ ಎಂದರು ಸುದೀಪ್.

ಎಲಿಮಿನೇಷನ್ ಆದ ಬಳಿಕ ಮಾತನಾಡಿದ ಇಶಾನಿ, ಈ ವೇದಿಕೆ ಸಿಕ್ಕಿದ್ದು ಭಾಗ್ಯ. ಆದರೆ ನಾನು ಇನ್ನೂ ಸ್ವಲ್ಪ ಎಫರ್ಟ್ ಹಾಕಬೇಕಿತ್ತು. ನಾನು ಸರಿಯಾಗಿ ಆಡಲಿಲ್ಲ. ಎಲ್ಲರೂ ನನ್ನನ್ನು ಬೆಂಬಲಿಸಿದ್ದೀರಿ ಅದಕ್ಕೆ ಧನ್ಯವಾದ. ಸುದೀಪ್ ಅವರೇ ನಿಮ್ಮ ಬಗ್ಗೆ ಬಹಳ ಗೌರವ ಇದೆ. ಎಲ್ಲರೂ ಚೆನ್ನಾಗಿ ಆಡಿ ಧನ್ಯವಾದ ಎಂದು ಹೇಳಿ ಕಣ್ಣೀರು ಹಾಕಿದರು.

ತಕಾಲಿ ಸಂತು, ತನಿಷಾ ಅವರು ಎಲಿಮಿನೇಷನ್​ನಿಂದ ಪಾರಾಗಿದ್ದಾರೆ. ವಿನಯ್, ಕಾರ್ತಿಕ್, ಭಾಗ್ಯಶ್ರೀ, ನೀತು ಅವರುಗಳು ನಾಮಿನೇಷನ್​ನಲ್ಲಿ ಇನ್ನೂ ಉಳಿದುಕೊಂಡಿದ್ದಾರೆ. ಇವರಲ್ಲಿ ಭಾನುವಾರ ಯಾರು ಹೊರಗೆ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ