ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್‌: ಭಾವುಕ ವೀಕೆಂಡ್ ಎಪಿಸೋಡ್

Drone Prathap: ಪ್ರತಾಪ್ ಬಹಳ ಗಟ್ಟಿಯಾಗಿ ಆಟ ಆಡವೇನೋ ಆಡುತ್ತಿದ್ದಾರೆ. ಆದರೆ ಅವರಿಗಿರುವ ಕೊರಗೆಂದರೆ ಅವರ ಕುಟುಂಬದ್ದು. ಅಪ್ಪನೊಟ್ಟಿಗೆ ಮಾತನಾಡಿ ವರ್ಷಗಳಾಯ್ತು, ಅವರೊಟ್ಟಿಗೆ ಮಾತನಾಡಬೇಕು ಎಂದು ಪ್ರತಾಪ್ ಹೇಳಿಕೊಂಡಿದ್ದರು. ಈಗ ಅಪ್ಪನ ಧ್ವನಿ ಕೇಳಿ ಕಣ್ಣೀರು ಹಾಕಿದ್ದಾರೆ ಪ್ರತಾಪ್.

ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್‌: ಭಾವುಕ ವೀಕೆಂಡ್ ಎಪಿಸೋಡ್
ಡ್ರೋನ್ ಪ್ರತಾಪ್
Follow us
|

Updated on:Nov 18, 2023 | 6:53 PM

ಡ್ರೋನ್ ಪ್ರತಾಪ್ (Drone Prathap) ಬಿಗ್​ಬಾಸ್ ಮನೆಯ ಟಾಪ್ ಸ್ಪರ್ಧಿಯಾಗಿಬಿಟ್ಟಿದ್ದಾರೆ. ಕೆಲ ವಾರಗಳ ಹಿಂದೆ ವಿನಯ್ ಗೆ ಸ್ಪರ್ಧೆಯೇ ಇಲ್ಲದಂತಾಗಿದೆ ಎಂದು ಇತರೆ ಸ್ಪರ್ಧಿಗಳ ನೀರಸ ಆಟವನ್ನು ಟೀಕಿಸುತ್ತಾ ಸುದೀಪ್ ಹೇಳಿದ್ದರು. ಆದರೆ ಕೆಲವೇ ವಾರಗಳಲ್ಲಿ ವಿನಯ್​ರ ಸ್ಪಷ್ಟ ಎದುರಾಳಿಯಾಗಿ ಪ್ರತಾಪ್ ಬೆಳೆದು ನಿಂತಿದ್ದಾರೆ. ತಮ್ಮ ಬುದ್ಧಿವಂತ ಹಾಗೂ ನಿಷ್ಪಕ್ಷಪಾತ ಆಟದಿಂದ ಪ್ರತಾಪ್ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಚೆನ್ನಾಗಿ ಆಟ ಆಡುತ್ತಿರುವ ಪ್ರತಾಪ್​ಗೆ ಇರುವ ಒಂದು ಬಯಕೆಯೆಂದರೆ ಮಾತನಾಡುವುದನ್ನು ನಿಲ್ಲಿಸಿರುವ ಅವರ ಅಪ್ಪನನ್ನು ನೋಡಬೇಕು, ಮಾತನಾಡಬೇಕು ಎಂಬುದು.

ಡ್ರೋನ್ ಪ್ರತಾಪ್ ಅವರು ಮೊದಲ ವಾರದಲ್ಲಿದ್ದ ರೀತಿಗೂ ಇಂದಿನ ರೀತಿಗೂ ಬಹಳಷ್ಟು ವ್ಯತ್ಯಾಸ ಎದ್ದು ಕಾಣುತ್ತಿದೆ. ಒಬ್ಬೊಬ್ಬರೇ ಇರುತ್ತಿದ್ದ, ಯಾರೊಂದಿಗೂ ಬೆರೆಯದ ಅವರು ನಂತರ ನಿಧಾನಕ್ಕೆ ಬೆರೆಯತೊಡಗಿದ್ದರು. ಆಗ ಅವರು ಸಾಕಷ್ಟು ವಿರೋಧವನ್ನೂ ಎದುರಿಸಬೇಕಾಯ್ತು. ಅದನ್ನು ಎದುರಿಸಿ ಬಿಗ್​ಬಾಸ್ ಮನೆಯಲ್ಲಿ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ. ವಿರೋಧಿಗಳೇ ಹೊಗಳುವ ಹಂತಕ್ಕೆ ಪ್ರತಾಪ್ ಏರಿದರು.

ಪ್ರತಾಪ್ ಬಹಳ ಗಟ್ಟಿಯಾಗಿ ಆಟ ಆಡವೇನೋ ಆಡುತ್ತಿದ್ದಾರೆ. ಆದರೆ ಅವರಿಗಿರುವ ಕೊರಗೆಂದರೆ ಅವರ ಕುಟುಂಬದ್ದು. ಹೊರಗಡೆ ಡ್ರೋನ್ ಪ್ರತಾಪ್​ರದ್ದು ವಿವಾದ ಆದ ಬಳಿಕ ಪ್ರತಾಪ್ ಅವರ ಕುಟುಂಬದೊಟ್ಟಿಗೆ ಮಾತೇ ಆಡಿಲ್ಲವಂತೆ. ಕೆಲವು ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ಅವರೇ ಬೇಸರದಿಂದ ಹೇಳಿಕೊಂಡಿದ್ದರು. ಅಲ್ಲದೇ ತಂದೆ ತಾಯಿ ಜೊತೆಗೆ ತಂಗಿಯ ಜೊತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಹಿಂದೆ ಹೇಳಿಕೊಂಡಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾತು

ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಟಾಸ್ಕ್​ನಲ್ಲಿ ಸೋಲು ಪತ್ರ ಪಡೆಯಲು ಪ್ರತಾಪ್ ವಿಫಲರಾದರು. ಹಾಗಾಗಿ ಅವರು ನಿರಾಶೆಗೊಂಡಿದ್ದರು. ಈಗ ವೀಕೆಂಡ್‌ನ ‘ಕಿಚ್ಚನ ಪಂಚಾಯಿತಿ’ಯಲ್ಲಿ ಸುದೀಪ್, ಪ್ರತಾಪ್‌ಗೆ ಒಂದು ಸ್ವೀಟ್ ಸರ್ಪೈಸ್ ಕೊಟ್ಟಿದ್ದಾರೆ. ಈ ಸರ್ಫೈಸ್ ಅಷ್ಟೇ ಭಾವುಕವಾದದ್ದೂ ಆಗಿದೆ. ‘ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ?’ ಎಂದು ಪ್ರತಾಪ್ ಅವರನ್ನು ಕೇಳಿದ್ದಾರೆ. ಅದನ್ನು ಹೇಳುವ ಮೊದಲೇ ಮನೆಯೊಳಗೆ ಪ್ರತಾಪ್ ತಂದೆಯ ಧ್ವನಿ ಕೇಳಿದೆ. ಫೋನ್‌ನಲ್ಲಿ ತಂದೆಯ ಧ್ವನಿಯನ್ನು ಕೇಳಿದ ಪ್ರತಾಪ್, ‘ಅಪ್ಪಾ ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಪ್ರಥಮ್, ಬಿಕ್ಕಿ-ಬಿಕ್ಕಿ ಅಳುತ್ತಿದ್ದಾರೆ. ಅದನ್ನು ಕಂಡು ಮನೆಯ ಇತರೆ ಸದಸ್ಯರು ಸಹ ಬಹಳ ಭಾವುಕರಾಗಿದ್ದಾರೆ. ಅಂದಹಾಗೆ ಪ್ರತಾಪ್​ರ ತಂದೆ ಮಗನೊಟ್ಟಿಗೆ ಮಾತನಾಡಿದರಾ? ಮಗನನ್ನು ಕ್ಷಮಿಸಿದರಾ? ಅಪ್ಪ ಮಾತ್ರವೇ ಮಾತನಾಡಿದರಾ? ತಾಯಿ-ತಂಗಿಯೂ ಮಾತನಾಡಿದರಾ? ಎಂಬುದೆಲ್ಲ ತಿಳಿಯಬೇಕೆಂದರೆ ಇಂದಿನ ಎಪಿಸೋಡ್ ಪೂರ್ಣವಾಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Sat, 18 November 23

ತಾಜಾ ಸುದ್ದಿ
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!