AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಕ್ ಕೊಟ್ಟ ಕಿಚ್ಚ ಸುದೀಪ್: ಪಂಚಾಯಿತಿಯ ಮೊದಲ ದಿನವೇ ಎಲಿಮಿನೇಷನ್

Bigg Boss 10: ಪ್ರತಿ ಭಾನುವಾರ ಒಬ್ಬ ಸ್ಪರ್ಧಿ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುವುದು ಸಾಮಾನ್ಯ. ಆದರೆ ಈ ಶನಿವಾರವೇ ಎಲಿಮಿನೇಷನ್ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಸುದೀಪ್.

ಶಾಕ್ ಕೊಟ್ಟ ಕಿಚ್ಚ ಸುದೀಪ್: ಪಂಚಾಯಿತಿಯ ಮೊದಲ ದಿನವೇ ಎಲಿಮಿನೇಷನ್
ಮಂಜುನಾಥ ಸಿ.
|

Updated on: Nov 18, 2023 | 3:48 PM

Share

ಈ ಬಾರಿ ಬಿಗ್​ಬಾಸ್ (BiggBoss) ಮನೆ ವಿವಾದಗಳಿಂದ ಹೆಚ್ಚು ಗಮನ ಸೆಳೆಯುತ್ತಿದೆ. ವಿವಾದಗಳು ಮಾತ್ರವೇ ಅಲ್ಲದೆ, ಹಿಂದಿನ ಬಿಗ್​ಬಾಸ್ ಸರಣಿಗಳಲ್ಲಿ ಪಾಲಿಸಿಕೊಂಡು ಬಂದಿದ್ದ ಕೆಲವು ನಿಯಮಾವಳಿಗಳನ್ನು ಈ ಬಾರಿಯ ಬಿಗ್​ಬಾಸ್​ನಲ್ಲಿ ಸುದೀಪ್ ಅವರು ಒಲ್ಲದ ಮನಸ್ಸಿನಿಂದ ಮುರಿದಿದ್ದಾರೆ. ಕಿಚ್ಚ ಸುದೀಪ್ ಸಹ ಈ ಬಾರಿಯ ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ವರ್ತನೆಗಳನ್ನು, ಆಟದ ರೀತಿಯನ್ನು ಟೀಕಿಸಿದಷ್ಟು ಇನ್ಯಾವುದೇ ಸೀಸನ್​ನಲ್ಲಿ ಟೀಕಿಸಿದ್ದಿಲ್ಲ ಅನ್ನಿಸುತ್ತದೆ. ಇದೆಲ್ಲದರ ನಡುವೆ, ಮತ್ತೊಂದು ವೀಕೆಂಡ್ ಬಂದಿದ್ದು, ಸುದೀಪ್ ಅವರು ಬಿಗ್​ಬಾಸ್​ನ ಮತ್ತೊಂದು ಸಂಪ್ರದಾಯವನ್ನು ಮುರಿದು ಶಾಕ್ ನೀಡಿದ್ದಾರೆ.

ಪ್ರತಿ ವಾರಾಂತ್ಯದಲ್ಲಿ ಒಬ್ಬ ಸ್ಪರ್ಧಿ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುವುದು ಸಾಮಾನ್ಯ. ಶನಿವಾರ ಮತ್ತು ಭಾನುವಾರ ಎರಡು ದಿನ ನಡೆಯುವ ಪಂಚಾಯಿತಿಯಲ್ಲಿ ಎರಡನೇ ದಿನ ಅಂದರೆ ಭಾನುವಾರ ರಾತ್ರಿ ಎಲಿಮಿನೇಷನ್ ಘೋಷಣೆ ಆಗುತ್ತದೆ. ಸುದೀಪ್ ಅವರು, ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದು ಅವರೊಟ್ಟಿಗೆ ಮಾತನಾಡಿ ಆತ್ಮೀಯವಾಗಿ ಬೀಳ್ಕೊಡುತ್ತಾರೆ. ಆದರೆ ಈ ವಾರಾಂತ್ಯದ ಎಪಿಸೋಡ್​ನಲ್ಲಿ ತಮ್ಮದೇ ನಿಯಮವನ್ನು ಸುದೀಪ್ ಮುರಿದಿದ್ದಾರೆ. ಸುದೀಪ್ ಅವರು ನಿಯಮ ಮುರಿದಿದ್ದಾರೆಂದರೆ ಅದಕ್ಕೆ ಬಲವಾದ ಕಾರಣವೂ ಇರಲೇ ಬೇಕು ಎಂಬುದು ವೀಕ್ಷಕರ ಅಭಿಪ್ರಾಯ.

ಕಳೆದ ವಾರಾಂತ್ಯದಲ್ಲಿ ಕೆಲವು ಡ್ರಾಮಾಗಳು ನಡೆದಿದ್ದವು. ವರ್ತೂರು ಸಂತೋಷ್, ನೀತು ಹಾಗೂ ಇಶಾನಿ ಅವರುಗಳು ಕೊನೆಯ ಮೂವರು ನಾಮಿನೇಟೆಡ್ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದರು. ಮೂವರಲ್ಲಿ ಮೊದಲಿಗೆ ವರ್ತೂರು ಸಂತೋಷ್ ಸೇಫ್ ಆದರು. ಆದರೆ ವರ್ತೂರು ಸಂತೋಷ್, ತಮ್ಮನ್ನು ಮನೆಯಿಂದ ಹೊರಗೆ ಕಳಿಸುವಂತೆ ಪಟ್ಟು ಹಿಡಿದರು. ಅತ್ತು ಗೋಗರೆದರು. ಆದರೆ ಇದಕ್ಕೆ ಒಪ್ಪದ ಸುದೀಪ್, ಜನ ನೀಡಿದ ತೀರ್ಪಿಗೆ ವಿರುದ್ಧವಾಗಿ ನಾನು ಹೋಗಲಾರೆ ಎಂದು ಹೇಳಿ ನಾಮಿನೇಷನ್ ರದ್ದು ಮಾಡಿ ವೇದಿಕೆ ಬಿಟ್ಟು ತೆರಳಿದ್ದರು.

ಇದನ್ನೂ ಓದಿ:ಸ್ಪರ್ಧಿಗಳಿಂದ ವಿವಾದವಾದಾಗ ಬಿಗ್​ಬಾಸ್ ಏನು ಮಾಡುತ್ತಾರೆ? ಪ್ರಶಾಂತ್ ಸಂಬರ್ಗಿ ಹೇಳಿದ್ದು ಹೀಗೆ

ಆ ಘಟನೆ ಬಳಿಕ ಹೊರಗಡೆ ಸಾಕಷ್ಟು ಬದಲಾವಣೆ ಆಗಿದೆ. ವರ್ತೂರು ಸಂತೋಷ್ ವಿರುದ್ಧ ಮಹಿಳಾ ಪೀಡಕ ಆರೋಪ ಹೊರಿಸಲಾಗಿದೆ. ತನಿಷಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಬಿಗ್​ಬಾಸ್ ಮನೆ ಎಂಬುದು ವಿವಾದಗಳ ಬೀಡಾಗಿದೆ. ಇದರ ನಡುವೆ ಮತ್ತೊಂದು ವಾರಾಂತ್ಯ ಬಂದಿದ್ದು ಕಿಚ್ಚ ಸುದೀಪ್ ಮತ್ತೆ ಬಂದಿದ್ದಾರೆ. ಆದರೆ ಈ ಬಾರಿ ಶಾಕ್ ಒಂದು ನೀಡಲಿದ್ದಾರೆ.

ಸುದೀಪ್ ವಾರಾಂತ್ಯದಲ್ಲಿ ಬಂದಾಗ ಮೊದಲಿಗೆ ತುಸು ಹಾಸ್ಯ ಮಾಡಿ, ಸ್ಪರ್ಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಳಿಕ ಅವರ ತಪ್ಪು-ಒಪ್ಪುಗಳನ್ನು ತಿಳಿ ಹೇಳುವ ಪದ್ಧತಿ ಅನುಸರಿಸುತ್ತಾರೆ. ಆದರೆ ಇದೀಗ ಬಿಡುಗಡೆ ಆಗಿರುವ ಪ್ರೋಮೊ ಪ್ರಕಾರ, ಶೋ ಪ್ರಾರಂಭವಾಗುತ್ತಿದ್ದಂತೆ ಸುದೀಪ್, ತಮ್ಮ ಅಸಮಾಧಾನ ಪ್ರದರ್ಶಿಸಿರುವುದು ಮಾತ್ರವೇ ಅಲ್ಲದೆ. ಬಿಗ್​ಬಾಸ್ ಆರಂಭವಾದಾಗಿನಿಂದಲೂ ನಡೆಯುತ್ತಿದ್ದ ಭಾನುವಾರದ ಎಲಿಮಿನೇಷನ್ ಅನ್ನು ಶನಿವಾರವೇ ಮಾಡುವುದಾಗಿ ಹೇಳಿದ್ದಾರೆ. ಸ್ಪರ್ಧಿಗಳ ಬಗ್ಗೆ ಸುದೀಪ್​ಗೆ ಆಗಿರುವ ಅಸಮಾಧಾನದಿಂದ ಸುದೀಪ್ ಈ ನಿರ್ಧಾರ ಮಾಡಿದ್ದಾರೆ ಎಂಬುದು ಪ್ರೋಮೋದಿಂದ ತಿಳಿದು ಬರುತ್ತಿದೆ.

ಅದರ ಜೊತೆಗೆ ಭಾನುವಾರ ವಿಶ್ವಕಪ್ ಫೈನಲ್ ಇದ್ದು, ಭಾನುವಾರ ಬಹುತೇಕ ಜನ ಕ್ರಿಕೆಟ್ ವೀಕ್ಷಣೆಯಲ್ಲಿ ಬ್ಯುಸಿಯಾಗಿರುತ್ತಾರಾದ್ದರಿಂದ ಶನಿವಾರದ ಎಪಿಸೋಡ್​ನಲ್ಲಿಯೇ ಎಲಿಮಿನೇಷನ್ ಮಾಡುವ ನಿರ್ಧಾರವನ್ನು ಆಯೋಜಕರು ಮಾಡಿರುವ ಸಾಧ್ಯತೆಯೂ ಇದೆ. ಈ ಬಾರಿ ನಾಮಿನೇಷನ್​ನಲ್ಲಿ ವಿನಯ್ ಗೌಡ, ಕಾರ್ತಿಕ್, ಭಾಗ್ಯಶ್ರೀ, ನೀತು, ಇಶಾನಿ, ನಮ್ರತಾ, ತುಕಾಲಿ ಸಂತು ಅವರಿದ್ದಾರೆ. ಬಿಗ್​ಬಾಸ್​ ಮನೆಯಿಂದ ಹೊರಗೆ ಹೋಗಬೇಕು ಅಂದುಕೊಂಡಿದ್ದ ವರ್ತೂರು ಸಂತೋಷ್ ಈ ಬಾರಿ ನಾಮಿನೇಟ್ ಆಗಿಯೇ ಇಲ್ಲ. ಈಗ ನಾಮಿನೇಟ್ ಆದವರಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ