Michael Ajay: ಒಂದೇ ಮಾತಲ್ಲಿ ಸುದೀಪ್ ಮನಸ್ಸು ಗೆದ್ದ ಮೈಕಲ್ ಅಜಯ್

|

Updated on: Jan 08, 2024 | 7:31 AM

ಮೈಕಲ್ ಅವರ ತಂದೆ ನೈಜೀರಿಯಾ ಮೂಲದವರು. ಹೀಗಾಗಿ, ಮೈಕಲ್​ಗೆ ಸರಿಯಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ, ದೊಡ್ಮನೆ ಒಳಗೆ ಹೋದ ಬಳಿಕ ಅವರು ಕನ್ನಡ ಕಲಿಯಲು ಸಾಕಷ್ಟು ಪ್ರಯತ್ನಿಸಿದರು. ಈಗ ಅವರು ಸುದೀಪ್ ಮನಸ್ಸು ಗೆದ್ದಿದ್ದಾರೆ.

Michael Ajay: ಒಂದೇ ಮಾತಲ್ಲಿ ಸುದೀಪ್ ಮನಸ್ಸು ಗೆದ್ದ ಮೈಕಲ್ ಅಜಯ್
ಮೈಕಲ್-ಸುದೀಪ್
Follow us on

ಮೈಕಲ್ ಅಜಯ್ (Michael Ajay) ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 10’ರಿಂದ ಎಲಿಮಿನೇಟ್ ಆಗಿದ್ದಾರೆ. ಕನ್ನಡ ಸರಿಯಾಗಿ ಬರದೇ ಇರುವುದು ಮೈಕಲ್​ಗೆ ಹಿನ್ನಡೆ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ಕನ್ನಡ ಕಲಿಯಲು ಅವರು ಸಾಕಷ್ಟು ಪ್ರಯತ್ನಿಸಿದ್ದರು. ಒಳ್ಳೆಯ ರೀತಿಯಲ್ಲಿ ಟಾಸ್ಕ್ ಆಡಿದ್ದರು. ಹೀಗಾಗಿ 90 ದಿನಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಈಗ ಅವರ ಎಲಿಮಿನೇಷನ್ ಅನೇಕರಿಗೆ ಬೇಸರ ತಂದಿದೆ. ಎಲಿಮಿನೇಟ್ ಆದ ಬಳಿಕ ವೇದಿಕೆಗೆ ಬಂದ ಮೈಕಲ್ ಅವರು ಸುದೀಪ್ ಅವರ ಮನಸ್ಸು ಗೆದ್ದಿದ್ದಾರೆ.

ಮೈಕಲ್ ಅವರ ತಂದೆ ನೈಜೀರಿಯಾ ಮೂಲದವರು. ಹೀಗಾಗಿ, ಮೈಕಲ್​ಗೆ ಸರಿಯಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ, ದೊಡ್ಮನೆ ಒಳಗೆ ಹೋದ ಬಳಿಕ ಅವರು ಕನ್ನಡ ಕಲಿಯಲು ಸಾಕಷ್ಟು ಪ್ರಯತ್ನಿಸಿದರು. ಈ ಕಾರಣಕ್ಕೆ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಈಗ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ. ಅವರು ಹೊರ ಹೋಗುವಾಗ ಪ್ರತಿಯೊಬ್ಬ ಸ್ಪರ್ಧಿಯೂ ಕಣ್ಣೀರು ಹಾಕಿದ್ದಾರೆ. ಮೈಕಲ್ ಅವರಿಗೂ ದುಃಖ ತಡೆದುಕೊಳ್ಳಲು ಆಗಲಿಲ್ಲ.

ಎಲಿಮಿನೇಟ್ ಆದ ಬಳಿಕ ಮೈಕಲ್ ಅವರು ವೇದಿಕೆ ಮೇಲೆ ಬಂದರು. ಈ ವೇಳೆ ಅವರು ಸುದೀಪ್ ಅವರಿಗೆ ಹಗ್ ಕೊಟ್ಟರು. ಆಗ ಅವರು ಒಂದು ಮಾತನ್ನು ಹೇಳಿದರು. ‘ಸುದೀಪ್ ಅವರನ್ನು ಕಂಡರೆ ಭಯ ಆಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ನನಗೆ ಯಾವಾಗಲೂ ಆ ರೀತಿ ಅನಿಸಲೇ ಇಲ್ಲ. ಯಾವುದೋ ಹಳೆಯ ಗೆಳೆಯನ ಭೇಟಿ ಮಾಡುತ್ತಿದ್ದೇನೆ ಅನಿಸುತ್ತದೆ’ ಎಂದಿದ್ದಾರೆ ಮೈಕಲ್. ಈ ಮಾತನ್ನು ಕೇಳಿ ಸುದೀಪ್​ಗೆ ಖುಷಿ ಆಯಿತು. ಅವರು ಮತ್ತೊಮ್ಮೆ ಮೈಕಲ್​ನ ಖುಷಿಯಿಂದ ತಬ್ಬಿಕೊಂಡರು.

ಇದನ್ನೂ ಓದಿ: ‘ಇನ್ನು ಬಾಕಿ ಉಳಿದಿರೋದು ಒಂದು ಮಾತ್ರ’; ಟಾರ್ಗೆಟ್ ತಿಳಿಸಿದ ಮೈಕಲ್ ಅಜಯ್

‘ಹೋಗುವಾಗ ಕನ್ನಡ ಮಾತನಾಡೋಕೆ ಒದ್ದಾಡುತ್ತಿದ್ದಿರಿ. ಈಗ ಮರಳಿ ಬರುವಾಗ ದೊಡ್ಡ ಅಭಿಮಾನಿ ಬಳಗ ಪಡೆದಿದ್ದೀರಿ. ಮಣ್ಣಿನ ಮಗ ಆಗಿದ್ದೀರಿ’ ಎಂದು ಮೈಕಲ್ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದರು. ‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 8 ಮಂದಿ ಇದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ