ವೀಕ್ಷಕರಿಗೂ ಸಿಗಲಿದೆ ‘ಬಿಗ್ ಬಾಸ್’ ಮನೆಯಲ್ಲಿ ವಾಸಿಸುವ ಅವಕಾಶ; ಸಿಕ್ತು ಗುಡ್ ನ್ಯೂಸ್

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದ ನಂತರ ಅಭಿಮಾನಿಗಳಿಗೆ ಮನೆಗೆ ಭೇಟಿ ನೀಡಲು ಅವಕಾಶ ಕೊಡುವ ಸಾಧ್ಯತೆ ಇದೆ. ‘ವೀಕೆಂಡ್ ಕಾ ವಾರ್' ಸಂಚಿಕೆಯ ಕೊನೆಯಲ್ಲಿ ಸಲ್ಮಾನ್ ಅವರು ಈ ಬಗ್ಗೆ ಮನವಿ ಒಂದನ್ನು ಮಾಡಿಕೊಂಡಿದ್ದಾರೆ.

ವೀಕ್ಷಕರಿಗೂ ಸಿಗಲಿದೆ ‘ಬಿಗ್ ಬಾಸ್' ಮನೆಯಲ್ಲಿ ವಾಸಿಸುವ ಅವಕಾಶ; ಸಿಕ್ತು ಗುಡ್ ನ್ಯೂಸ್
ಬಿಗ್ ಬಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 08, 2024 | 11:54 AM

ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ ಎಂದರೆ ಅದು ‘ಬಿಗ್ ಬಾಸ್’. ಕನ್ನಡ, ಹಿಂದಿ ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಯುತ್ತಿದೆ. ಕನ್ನಡದಲ್ಲಿ 10 ಹಾಗೂ ಹಿಂದಿಯಲ್ಲಿ 17ನೇ ಸೀಸನ್ ನಡೆಯುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪ್ರತಿ ಬಾರಿ ಬಿಗ್ ಬಾಸ್ ಮನೆ ನೋಡೋಕೆ ಅಭಿಮಾನಿಗಳಿಗೆ ಕಾದಿರುತ್ತಾರೆ. ಎಷ್ಟೋ ಜನರು ಬಿಗ್ ಬಾಸ್ (Bigg Boss) ಮನೆಯನ್ನು ಒಮ್ಮೆಯಾದರೂ ನೋಡಬೇಕು ಎಂದು ಬಯಸುತ್ತಾರೆ. ಶೀಘ್ರದಲ್ಲೇ ಈ ಆಸೆ ಈಡೇರಲಿದೆ. ಹಿಂದಿ ಬಿಗ್ ಬಾಸ್ ಮನೆಯಲ್ಲಿ ಅಭಿಮಾನಿಗಳಿಗೆ ಉಳಿಯಲು ಅವಕಾಶ ಕಲ್ಪಿಸಲಾಗುತ್ತಿದೆಯಂತೆ. ಸ್ವತಃ ಸಲ್ಮಾನ್ ಖಾನ್ ಅವರೇ ಈ ಬಗ್ಗೆ ಮನವಿ ಮಾಡಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ಸಲ್ಮಾನ್ ಅವರು ಈ ಬಗ್ಗೆ ಕೋರಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದ ನಂತರ ಅಭಿಮಾನಿಗಳಿಗೆ ಮನೆಗೆ ಭೇಟಿ ನೀಡಲು ಅವಕಾಶ ಕೊಡುವ ಸಾಧ್ಯತೆ ಇದೆ.

‘ವೀಕೆಂಡ್ ಕಾ ವಾರ್’ ಸಂಚಿಕೆಯ ಕೊನೆಯಲ್ಲಿ ಸಲ್ಮಾನ್ ಅವರು ಮನವಿ ಒಂದನ್ನು ಮಾಡಿಕೊಂಡರು. ‘ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿಯಲು ನಮಗೂ ಅವಕಾಶ ನೀಡುವಂತೆ ವಿನಂತಿಸುತ್ತಿದ್ದಾರೆ ಎಂದು ನಾನು ಕೇಳಿದೆ. ಹಾಗಾಗಿ ಅವರಿಗೂ ಈ ಐಷಾರಾಮಿ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕು. ಈ ಸೀಸನ್ ಮುಗಿದು ಸ್ಪರ್ಧಿಗಳು ಹೊರಗೆ ಹೋದ ನಂತರ ಅಂದರೆ ಗ್ರ್ಯಾಂಡ್ ಫಿನಾಲೆಯ ಮುಗಿದ ಬಳಿಕ, ಅಭಿಮಾನಿಗಳಿಗೆ ಈ ಮನೆಯಲ್ಲಿ ಉಳಿಯಲು ಅವಕಾಶ ನೀಡಬೇಕು’ ಎಂದು ಕೋರಿದ್ದಾರೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

‘ಬಿಗ್ ಬಾಸ್ OTT 2′ ವಿನ್ನರ್ ಎಲ್ವಿಶ್ ಯಾದವ್ ಅವರ ಪೋಸ್ಟ್​ನಿಂದ ಇದು ಸಾಧ್ಯವಾಗಿದೆ. ಸಲ್ಮಾನ್ ಮನೆಯ ಹೊರಗೆ ಅಭಿಮಾನಿಗಳು ನಿಂತಿರುವ ಫೋಟೋನ ಎಲ್ವಿಶ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ವಾಸಿಸಲು ನಮಗೆ ಅವಕಾಶ ನೀಡಿ’ ಎಂಬ ಹೋರ್ಡಿಂಗ್‌ಗಳನ್ನು ಹಿಡಿದು ಈ ಅಭಿಮಾನಿಗಳು ನಿಂತಿದ್ದರು. ‘ಸಲ್ಮಾನ್ ಭಾಯ್ ಏನಾದರೂ ವ್ಯವಸ್ಥೆ ಮಾಡಿ. ಈ ಅಭಿಮಾನಿಗಳಿಗೆ ಎಂಟ್ರಿ ಕೊಡಿ’ ಎಂದು ಅವರು ಈ ಪೋಸ್ಟ್ ಮೂಲಕ ಸಲ್ಮಾನ್ ಅವರನ್ನು ವಿನಂತಿಸಿದ್ದರು. ಈ ಬೆನ್ನಲ್ಲೇ ಅವರು ಬಿಗ್ ಬಾಸ್ ಬಳಿ ಸಲ್ಲು ಈ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ಮೌನಕ್ಕೆ ಶರಣಾದ ಪ್ರತಾಪ್; ಮೊದಲು ಮಾಡಿದ್ದೇನು?

ಈ ಮೊದಲು ಅನೇಕರಿಗೆ ಬಿಗ್ ಬಾಸ್ ಮನೆಗೆ ಭೇಟಿ ನೀಡಲು ಅವಕಾಶ ಕೊಡಲಾಗಿತ್ತು. ಬಿಗ್ ಬಾಸ್ ಮನೆ ನೋಡಬೇಕು ಎನ್ನುವವರಿಗೆ ಟಿಕೆಟ್ ನಿಗದಿ ಮಾಡಲಾಗುತ್ತದೆ. ಈ ರೀತಿ ಟಿಕೆಟ್ ಪಡೆದು ಒಮ್ಮೆ ಬಿಗ್ ಬಾಸ್ ಮನೆಯ ಟೂರ್ ಮಾಡಿ ಬರಹಬಹುದು. ಈ ಬಾರಿಯೂ ಅದೇ ರೀತಿಯ ಪ್ಲ್ಯಾನ್ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಈ ಮನೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ