ಈಶಾನಿ ಅವರು ಹಲವು ವಾರಗಳ ಹಿಂದೆಯೇ ಬಿಗ್ ಬಾಸ್ (Bigg Boss Kannada) ಮನೆಯಿಂದ ಔಟ್ ಆಗಿದ್ದರು. ಅವರು ಹೊರ ಹೋಗಿದ್ದೇ ಉತ್ತಮವಾಯ್ತು ಎಂದವರು ಅನೇಕರಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳಿಗೆ ಇತ್ತೀಚೆಗೆ ದೊಡ್ಮನೆಗೆ ಬರೋ ಅವಕಾಶ ಸಿಕ್ಕಿತ್ತು. ಈ ರೀತಿ ಬಂದಾಗ ಈಶಾನಿ (Eshani) ಅವರು ಪ್ರತಾಪ್ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ‘ಒಂದು ಕಾಗೆ ಕಕ್ಕ ಮಾಡಿಕೊಂಡು ಮನೆ ತುಂಬ ಓಡಾಡ್ತಿದೆ. ಸಿಂಪಥಿ ಕಾರ್ಡ್ ಬಳಕೆ ಮಾಡ್ತಿದೆ’ ಎಂದು ಹೇಳಿದ್ದರು. ಇದನ್ನು ಸುದೀಪ್ (Kichcha Sudeep) ಖಂಡಿಸಿದ್ದಾರೆ. ‘ನೀವು ಇದನ್ನು ನೋಡುತ್ತಿದ್ದೀರಿ ಅಂದುಕೊಂಡಿದ್ದೀನಿ’ ಎಂದು ಮಾತು ಶುರು ಮಾಡಿ ಚಾಟಿ ಬೀಸಿದ್ದಾರೆ.
ದೊಡ್ಮನೆಯಿಂದ ಹೊರ ಹೋದ ಬಳಿಕವೂ ಈ ರೀತಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ತುಂಬಾನೇ ಅಪರೂಪ. ಬಹಳ ಸಂದರ್ಭದಲ್ಲಿ ಅವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ತಮ್ಮ ಬಗ್ಗೆ, ಮನೆಯಲ್ಲಿರುವ ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಅವರು ಸುಮ್ಮನೆ ಇರುವುದಿಲ್ಲ. ಈಗ ಈಶಾನಿ ಅವರಿಗೆ ಚಾಟಿ ಬೀಸಿದ್ದಾರೆ. ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಜೊತೆಗೆ ಈ ಮಾತನ್ನು ಹೇಳಿಸಿಕೊಂಡ ಪ್ರತಾಪ್ಗೆ ಬಲ ತುಂಬಿದ್ದಾರೆ.
‘ಈಶಾನಿ ನೀವು ಇದನ್ನು ನೋಡ್ತಿದೀರಿ ಅಂದುಕೊಂಡಿದೀನಿ. ಕಾಗೆ ಕಕ್ಕ ಮಾಡಿಕೊಂಡು ಓಡಾಡಿಕೊಂಡು ಇದೆ ಅಂದ್ರಿ. ಸಿಂಪಥಿಯಿಂದ ಗೆದ್ದುಕೊಂಡು ಬಂದ ಅಂದ್ರಿ. ಈ ಸಾಹಿತ್ಯ ನನಗೆ ಇಷ್ಟ ಆಯ್ತು ಈಶಾನಿ. ಆ ಕಾಗೆ ಇನ್ನೂ ಮನೆಯಲ್ಲೇ ಇದೆ ಅನ್ನೋದು ನೆನಪಿರಲಿ. ಪ್ರತಾಪ್ ಗೆದ್ದು ಉಳಿದುಕೊಂಡಿದ್ದಾರೆ’ ಎಂದು ಈಶಾನಿಗೆ ಉತ್ತರ ಕೊಟ್ಟರು ಸುದೀಪ್. ‘ನಿಮಗೆ ಉತ್ತರ ಕೊಡೋಕೆ ಬರಲ್ವ ಪ್ರತಾಪ್’ ಎಂದರು ಸುದೀಪ್. ‘ಅತಿಥಿ ಅಂತ ಸುಮ್ಮನೆ ಇದ್ದೆ’ ಎಂದು ಪ್ರತಾಪ್ ಉತ್ತರಿಸಿದ್ದರು. ‘ನಾನು ಹಂಬಲ್. ಮೈ ಹಂಬಲ್ನೆಸ್ ಈಸ್ ನಾಟ್ ಮೈ ಕ್ಯಾರೆಕ್ಟರ್. ಇಟ್ ಈಸ್ ಅ ಜೆಸ್ಚರ್. ಯಾರಿಗೆ ಗೌರವ ಡಿಸರ್ವ್ ಇಲ್ಲವೋ ಅವರಿಗೆ ಉತ್ತರ ಕೊಡಿ’ ಎಂದರು ಸುದೀಪ್.
ಇದನ್ನೂ ಓದಿ: ‘ನಿಮ್ಮಿಬ್ಬರನ್ನು ಹೊರಗಿಟ್ಟರೆ ಈ ಸೀಸನ್ ಅಪೂರ್ಣ’: ದೊಡ್ಡ ಸೂಚನೆ ಕೊಟ್ರಾ ಸುದೀಪ್?
ಬಂದ ಅತಿಥಿಗಳು ಸ್ಪರ್ಧಿಗಳನ್ನು ಡಿಮೋಟಿವ್ ಮಾಡಿ ಹೋಗಿದ್ದರು. ಇದು ಸುದೀಪ್ ಅವರಿಗೆ ಇಷ್ಟ ಆಗಿಲ್ಲ. ನಮ್ರತಾ ಬಗ್ಗೆ ಕೆಟ್ಟ ಮಾತು ಚಾಲ್ತಿಯಲ್ಲಿದೆ ಎಂದು ಸ್ನೇಹಿತ್ ಅವರು ಹೇಳಿದ್ದರು. ಇದನ್ನು ಕೇಳಿ ಅವರು ಬೇಸರಗೊಂಡಿದ್ದರು. ಅವರು ಸಾಕಷ್ಟು ಕುಗ್ಗಿ ಹೋಗಿದ್ದರು. ಅವರಿಗೂ ಚೈತನ್ಯ ತುಂಬುವ ಕೆಲಸವನ್ನು ಮಾಡಿದ್ದರು ಸುದೀಪ್. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Sun, 21 January 24