‘ಜೈಲಿನಲ್ಲೂ ಬಿಗ್ ಬಾಸ್ ನೋಡ್ತಾರೆ’: ಈ ಮಾತು ವಿವಾದ ಆಗತ್ತೆ ಎಂದಿದ್ದಕ್ಕೆ ಸುದೀಪ್ ಹೇಳಿದ್ದೇನು?

ಕಿಚ್ಚ ಸುದೀಪ್​ ಅವರು ಸತತ 11ನೇ ಸೀಸನ್​ಗೆ ‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಜೈಲಿನ ಒಳಗೆ ಇರುವ ಖೈದಿಗಳು ಕೂಡ ನೋಡುತ್ತಾರೆ. ಆ ಬಗ್ಗೆ ಮಾತನಾಡಿದರೆ ವಿವಾದ ಆಗಬಹುದು ಎಂಬ ಅಭಿಪ್ರಾಯ ಬಂತು. ಆದರೆ ಆ ಮಾತನ್ನು ಕಿಚ್ಚ ಸುದೀಪ್​ ಅವರು ತಳ್ಳಿಹಾಕಿದರು. ಆ ಘಟನೆ ಬಗ್ಗೆ ಇಲ್ಲಿದೆ ಮಾಹಿತಿ..

‘ಜೈಲಿನಲ್ಲೂ ಬಿಗ್ ಬಾಸ್ ನೋಡ್ತಾರೆ’: ಈ ಮಾತು ವಿವಾದ ಆಗತ್ತೆ ಎಂದಿದ್ದಕ್ಕೆ ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್

Updated on: Sep 30, 2024 | 5:47 PM

ವಿವಾದಗಳಿಂದಲೇ ಸುದ್ದಿಯಾದ ಚೈತ್ರಾ ಕುಂದಾಪುರ ಅವರ ಈಗ ‘ಬಿಗ್​ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಸ್ಪರ್ಧಿಯಾಗಿ ದೊಡ್ಮನೆಗೆ ಬಂದಿದ್ದಾರೆ. ಮೊದಲ ಸಂಚಿಕೆಯಲ್ಲಿ ಅವರನ್ನು ಸುದೀಪ್​ ಮಾತನಾಡಿಸಿದರು. ತಾವು ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದು ಹೇಗೆ ಎಂಬುದನ್ನು ಚೈತ್ರಾ ಕುಂದಾಪುರ ವಿವರಿಸಿದರು. ಈ ಮೊದಲು ಅವರು ಜೈಲಿಗೆ ಹೋಗಿದ್ದರು. ಆಗಲೇ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ಪೂರ್ತಿಯಾಗಿ ನೋಡಿದ್ದು. ಆ ಕುರಿತು ಮಾತನಾಡುವಾಗ ಜೈಲಿನ ವಿಷಯ ಪ್ರಸ್ತಾಪ ಆಯಿತು.

‘ಮೊದಲು ಇದು ಸ್ಕ್ರಿಪ್ಟೆಡ್​ ಶೋ ಅಂತ ನನಗೆ ಅನಿಸಿತ್ತು. ನಾನು ಬಿಗ್​ ಬಾಸ್​ ಸೀಸನ್​ 10 ನೋಡಿದ್ದ ಜೈಲಿನಲ್ಲಿ. ಆಗ ವರ್ತೂರು ಸಂತೋಷ್​ ಕೂಡ ಜೈಲಿಗೆ ಬಂದಿದ್ದರು. ಅವರು ಬಂದಿದ್ದರಿಂದ ಇದು ಸ್ಕ್ರಿಪ್ಟೆಡ್​ ಅಲ್ಲ ಅಂತ ತಿಳಿಯಿತು. ಕಾಮನ್ ಸೆನ್ಸ್​ ಇರುವವರಿಗೆ ಇದು ಗೊತ್ತಾಗುತ್ತದೆ. ಕಳೆದ ಸೀಸನ್​ ಅನ್ನು ನಾನು ಪೂರ್ತಿಯಾಗಿ ನೋಡಿದ್ದರಿಂದ ಈ ಬಾರಿ ಬಿಗ್​ ಬಾಸ್​ಗೆ ಬರಲು ಒಪ್ಪಿಕೊಂಡೆ’ ಎಂದರು ಚೈತ್ರಾ ಕುಂದಾಪುರ.

‘ಬಿಗ್​ ಬಾಸ್​ಗೆ ಹೊರಗಡೆ ಎಷ್ಟು ಫ್ಯಾನ್ ಫಾಲೋಯಿಂಗ್​ ಇದೆಯೋ ಅದಕ್ಕಿಂತಲೂ ಜಾಸ್ತಿ ಫ್ಯಾನ್​ ಫಾಲೋಯಿಂಗ್​ ಜೈಲಿನ ಒಳಗೂ ಇದೆ ಅಂತ ನನಗೆ ಅನಿಸುತ್ತೆ’ ಎಂದು ಚೈತ್ರಾ ಹೇಳಿದಾಗ, ‘ಇದರ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ನನಗೆ ಗೊತ್ತಿಲ್ಲ’ ಎಂದರು ಸುದೀಪ್​. ‘ಇದು ಕೂಡ ಕಾಂಟ್ರವರ್ಸಿ ಆಗಬಹುದೇನೋ’ ಎಂದು ಚೈತ್ರಾ ಪ್ರತಿಕ್ರಿಯಿಸಿದರು. ‘ಹಾಗೇನೂ ಇಲ್ಲ. ಇದರಲ್ಲಿ ಕಾಂಟ್ರವರ್ಸಿ ಏನಿದೆ? ನಮ್ಮ ಕಾರ್ಯಕ್ರಮವನ್ನು ಎಲ್ಲ ಕಡೆ ಜನರು ನೋಡಿ ಮೆಚ್ಚುತ್ತಿದ್ದಾರೆ. ಅದಕ್ಕೆ ನಮಗೆ ಖುಷಿ ಇದೆ. ಈ ಕಾರ್ಯಕ್ರಮಕ್ಕೂ ಜೈಲಿಗೂ ಇರುವ ಸಂಬಂಧ ಏನು ಅಂತ ನಮಗೂ ಈಗಲೇ ಗೊತ್ತಾಗುತ್ತಿರುವುದು’ ಎಂದರು ಸುದೀಪ್​.

ಇದನ್ನೂ ಓದಿ: ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್​ ಬಾಸ್​ಗೆ ಬಂದ ನಟಿ ಹಂಸಾ

ಜೈತ್ರಾ ಕುಂದಾಪುರ ಮಾತ್ರವಲ್ಲದೇ ಲಾಯರ್​ ಜಗದೀಶ್​ ಕೂಡ ಈ ಮೊದಲು ಜೈಲಿಗೆ ಹೋಗಿದ್ದರು. ಅವರು ಕೂಡ ಜೈಲಿನಲ್ಲಿ ಇದ್ದಾಗಲೇ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಿದ್ದರು. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾರೆ. ಒಟ್ಟು 17 ಮಂದಿ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಸಿನಿಮಾ, ಸೀರಿಯಲ್​, ಕ್ರೀಡೆ, ಸೋಶಿಯಲ್​ ಮೀಡಿಯಾದಲ್ಲಿ ಖ್ಯಾತಿ ಗಳಿಸಿದವರು ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us