‘ಕರ್ಣ’ ಧಾರಾವಾಹಿ ಆರಂಭಕ್ಕೆ ದಿನಾಂಕ ನಿಗದಿ; ಇಲ್ಲಿದೆ ಮಾಹಿತಿ
ಜೀ ಕನ್ನಡದಲ್ಲಿ ಜೂನ್ 16 ರಿಂದ ‘ಕರ್ಣ’ ಧಾರಾವಾಹಿ ಪ್ರಸಾರ ಆರಂಭವಾಗಲಿದೆ. ಕಿರಣ್ ರಾಜ್ ಮುಖ್ಯ ಪಾತ್ರದಲ್ಲಿದ್ದು, ನಮ್ರತಾ ಗೌಡ ಮತ್ತು ಭವ್ಯಾ ಗೌಡ ನಾಯಕಿಯರಾಗಿ ನಟಿಸಲಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ವೈದ್ಯನಾಗಿ ಕರ್ಣನ ಪಾತ್ರವನ್ನು ಕಿರಣ್ ರಾಜ್ ನಿರ್ವಹಿಸುತ್ತಾರೆ.

ಜೀ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ (Karna Serial) ಪ್ರಸಾರ ಕಾಣಲಿದೆ ಎಂದು ಈ ಮೊದಲೇ ಮಾಹಿತಿ ಘೋಷಣೆ ಆಗಿತ್ತು. ಈವರೆಗೆ ಧಾರಾವಾಹಿಗಳ ಪ್ರೋಮೋಗಳು ಮಾತ್ರ ಬಿಡುಗಡೆ ಕಂಡಿದ್ದವು. ಆದರೆ, ಧಾರಾವಾಹಿ ಪ್ರಸಾರದ ಬಗ್ಗೆ ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಧಾರಾವಾಹಿ ಪ್ರಸಾರದ ಬಗ್ಗೆ ಮಾಹಿತಿಯೊಂದು ಕೇಳಿ ಬಂದಿದೆ. ಈ ಧಾರಾವಾಹಿ ಜೂನ್ 16ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ ಎಂದು ವರದಿ ಆಗಿದೆ.
ಸಾಮಾನ್ಯವಾಗಿ ಹೊಸ ಧಾರಾವಾಹಿಗಳು ಸೋಮವಾರ ಪ್ರಸಾರ ಕಾಣುತ್ತವೆ. ಈಗ ‘ಕರ್ಣ’ ಧಾರಾವಾಹಿ ಕೂಡ ಸೋಮವಾರದಿಂದ ಪ್ರಸಾರ ಕಾಣಲಿದೆ. ಈ ಧಾರಾವಾಹಿಯಲ್ಲಿ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಅವರದ್ದು ವೈದ್ಯನ ಪಾತ್ರ ಎಂಬುದು ತಿಳಿದು ಬಂದಿದೆ.
View this post on Instagram
‘ಕರ್ಣ’ ಧಾರಾವಾಹಿಯಲ್ಲಿ ಮತ್ತೊಂದು ವಿಶೇಷ ಇದೆ. ಅದುವೇ ಎರಡು ನಾಯಕಿಯರು. ಹೌದು,ಕರ್ಣ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಅವರು ನಾಯಕಿಯರು ಎಂದು ತಿಳಿದು ಬಂದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಧಾರಾವಾಹಿ ಪ್ರಸಾರಕ್ಕಾಗಿ ಅಭಿಮಾನಿಗಳು ಇಷ್ಟು ವರ್ಷಗಳ ಕಾಲ ಕಾದಿದ್ದರು.
ಇದನ್ನೂ ಓದಿ: ‘ಕರ್ಣ’ ಧಾರವಾಹಿಯಲ್ಲಿ ಕಿರಣ್ ರಾಜ್ಗೆ ನಾಯಕಿ ಆದ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ
ಹಾಗಾದರೆ ಧಾರಾವಾಹಿಯ ಸಮಯ? ಈ ಧಾರಾವಾಹಿ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರ ಕಾಣಲಿದೆ. ಈ ಸಮಯದಲ್ಲಿ ಸದ್ಯ ‘ಲಕ್ಷ್ಮೀ ನಿವಾಸ’ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನಿತ್ಯ ಒಂದು ಗಂಟೆ ಪ್ರಸಾರ ಕಾಣುತ್ತಿದೆ. ಅದನ್ನು ಅರ್ಧಗಂಟೆಗೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಧಾರಾವಾಹಿ ಕಥೆ ಏನು?
ಕರ್ಣನ ತುಂಬಾನೇ ಶ್ರೀಮಂತ ಹುಡುಗ. ಅವನು ವೈದ್ಯ. ಎಲ್ಲರಿಗೂ ಅವನು ಪ್ರೀತಿ ಪಾತ್ರನು. ಆದರೆ, ಕುಟುಂಬದವರಿಗೆ ಮಾತ್ರವಲ್ಲ. ಕುಟುಂಬದವರು ಅವನನ್ನು ಕಾಲ ಕಸದ ರೀತಿಯಲ್ಲಿ ನೋಡುತ್ತಾರೆ. ಅತ್ತ ಇಬ್ಬರು ನಾಯಕಿಯರು ಅಕ್ಕ-ತಂಗಿ. ಇಬ್ಬರಿಗೂ ಒಬ್ಬನ ಮೇಲೆ ಪ್ರೀತಿ ಮೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಧಾರಾವಾಹಿ ನೋಡಿದ ಬಳಿಕ ಕಥೆಯ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







