
ಕುರಿ ಪ್ರತಾಪ್ ಅವರು ಎಲ್ಲರನ್ನೂ ನಗಿಸುತ್ತಾ ಇದ್ದವರು. ಅವರು ಕಲರ್ಸ್ ಕನ್ನಡದ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ. ‘ಬಿಗ್ ಬಾಸ್ ಕನ್ನಡ’ (Bigg Boss Kannada) ಶೋನಲ್ಲಿ ಭಾಗವಹಿಸಿ ಅವರು ದೊಡ್ಡ ಹೆಸರು ಮಾಡಿದರು. ಇದಾದ ಬಳಿಕ ಕುರಿ ಪ್ರತಾಪ್ ಕಲರ್ಸ್ನ ಅನೇಕ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಕುರಿ ಪ್ರತಾಪ್ ಅವರು ಮತ್ತೊಂದು ಶೋನಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇವರ ಜೊತೆ ಅನುಪಮಾ ಗೌಡ ಕೂಡ ಇದ್ದಾರೆ ಅನ್ನೋದು ವಿಶೇಷ.
ಕುರಿ ಪ್ರತಾಪ್ ಅವರು ‘ಮಜಾ ಟಾಕೀಸ್’ ಶೋನಲ್ಲಿ ಎಲ್ಲರ ನಗಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜೊತೆಯಾಗಿ ಅನೇಕರು ನಗಿಸುತ್ತಿದ್ದಾರೆ. ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ ಅನ್ನೋದು ಗೊತ್ತೇ ಇದೆ. ಈಗ ಕುರಿ ಪ್ರಾತಾಪ್ ಅವರು ಅನುಪಮಾ ಗೌಡ ಜೊತೆ ಸೇರಿ ಮತ್ತೊಂದು ಶೋ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.
‘ಕ್ವಾಟ್ಲೆ ಕಿಚನ್’ ಹೆಸರಿನ ಶೋ ಆರಂಭಿಸಲು ಕುರಿ ಪ್ರತಾಪ್ ಅವರು ರೆಡಿ ಆಗಿದ್ದಾರೆ. ಅನುಪಮಾ ಗೌಡ ಅವರು ಈ ಶೋನ ಭಾಗವಾಗಲಿದ್ದಾರೆ. ಅನುಪಮಾ ಗೌಡ ಕೂಡ ಕಲರ್ಸ್ ಕನ್ನಡದ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ. ಹಾಗೆ ನೋಡೋದಾದರೆ ಅವರು ಎರಡು ಎರಡೆರಡು ಬಾರಿ ಬಿಗ್ ಬಾಸ್ ಶೋಗೆ ಬಂದಿದ್ದರು ಎನ್ನಿ. ಅವರು ಇಷ್ಟು ದಿನ ‘ಬಾಯ್ಸ್ vs ಗರ್ಲ್ಸ್’ ಶೋ ಮಾಡುತ್ತಿದ್ದರು. ಈಗ ಅವರು ಹೊಸ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ‘ಮಜಾ ಟಾಕೀಸ್’ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ..
ಈ ಶೋಗಾಗಿ ಫ್ಯಾನ್ಸ್ ಕಾದಿದ್ದಾರೆ. ಅಡುಗೆ ಮಾಡುತ್ತಾ ಮತ್ತೊಂದಷ್ಟು ಫನ್ ಕೂಡ ಶೋನಲ್ಲಿ ನೀವು ಕಾಣಬುದು. ‘ಬಾಯ್ಸ್ vs ಗರ್ಲ್ಸ್’ ಪೂರ್ಣಗೊಂಡ ಬಳಿಕ ಕಲರ್ಸ್ನಲ್ಲಿ ಈ ಸಮಯಕ್ಕೆ ಯಾವುದೇ ಶೋ ಫಿಕ್ಸ್ ಆಗಿಲ್ಲ. ಈ ಸ್ಥಾನದಲ್ಲಿ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಈ ಸಮಯಕ್ಕೆ ಈ ಶೋ ಪ್ರಸಾರ ಕಾಣಲಿದೆಯೇ ಎನ್ನುವ ಅನುಮಾನ ಮೂಡಿದೆ. ಸಾಮಾನ್ಯವಾಗಿ ಅಡುಗೆ ಶೋ ಮಧ್ಯಾನ ಪ್ರಸಾರ ಕಾಣುತ್ತದೆ. ಅದೇ ರೀತಿ ಈ ಶೋ ಕೂಡ ಮಧ್ಯಾಹ್ನ ಪ್ರಸಾರ ಕಾಣುತ್ತದೆಯೇ ಎನ್ನುವ ಅನುಮಾನ ಮೂಡಿದೆ. ಸೆಲೆಬ್ರಿಟಿಗಳು ಅಡುಗೆ ಮಾಡಲು ಬರೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.