Lakshana Serial: ಡೆವಿಲ್ ಮೂಲ ಪತ್ತೆ ಹಚ್ಚಲು ನ್ಯೂಸ್ ಪೇಪರ್ ಎಡಿಟರ್ ಹಿಂದೆ ಬಿದ್ದ ಭೂಪತಿ – ನಕ್ಷತ್ರ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 08, 2022 | 10:32 AM

ಸಿ.ಎಸ್ ಬಗ್ಗೆ ಫೇಕ್ ನ್ಯೂಸ್ ಪಬ್ಲಿಷ್ ಮಾಡಿರುವಂತಹ ನ್ಯೂಸ್ ಪೇಪರ್ ಎಡಿಟರ್. ಅದಕ್ಕಾಗಿ ನಕ್ಷತ್ರ ತನ್ನ ತಂದೆ ಸಿ.ಎಸ್‌ಗೆ ಕಾಲ್ ಮಾಡಿ ನ್ಯೂಸ್ ಪೇಪರ್ ಎಡಿಟರ್ ಅಡ್ರೆಸ್ ಮತ್ತು ಕಾಂಟೆಕ್ಟ್ ಡಿಟೇಲ್ಸ್ ಕಲೆಕ್ಟ್ ಮಾಡಿ ನೇರವಾಗಿ ನ್ಯೂಸ್ ಪೇಪರ್ ಆಫೀಸ್‌ಗೆ ಹೋಗುತ್ತಾರೆ. ಅಲ್ಲಿ ಈ ಡೆವಿಲ್ಲ ಯಾರು ಎಂಬುದನ್ನು ಪತ್ತೆ ಮಾಡಲು ಶುರು ಮಾಡಿದ್ದಾರೆ.

Lakshana Serial: ಡೆವಿಲ್ ಮೂಲ ಪತ್ತೆ ಹಚ್ಚಲು ನ್ಯೂಸ್ ಪೇಪರ್ ಎಡಿಟರ್ ಹಿಂದೆ ಬಿದ್ದ ಭೂಪತಿ - ನಕ್ಷತ್ರ
Lakshana Serial
Follow us on

ಧಾರಾವಾಹಿ: ಲಕ್ಷಣ (Lakshana)

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಶಕುಂತಳಾದೇವಿಗೆ ತನ್ನ ಮಗ ಮೌರ್ಯ ಬದುಕಿರುವ ವಿಷಯ ತಿಳಿಯುತ್ತದೆ. ಮಗನ ಜೊತೆ ಮಾತನಾಡಬೇಕೆಂದು ಹೇಳಿ ನಕ್ಷತ್ರಳ ಬಳಿ ವಿಡಿಯೋ ಕಾಲ್ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ.

ಡೆವಿಲ್ ಪತ್ತೆ  ಮಾಡಲು ಹೊಸ ಅಸ್ತ್ರ

ಮಗನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಶಕುಂತಳಾದೇವಿ ಅಳುತ್ತಾ ನೀನು ಮಾಡಿರುವಂತಹದ್ದು ದೊಡ್ಡ ತಪ್ಪು, ನಿನ್ನನ್ನು ನಾನು ಕ್ಷಮಿಸುವುದಿಲ್ಲ. ಕಾನೂನಿನ ಪ್ರಕಾರ ನೀನು ನಿನ್ನ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಲೇಬೇಕು ಅಂತ ಹೇಳಿ ಫೋನ್ ಕಟ್ ಮಾಡುತ್ತಾರೆ. ಅಮ್ಮನ ಬಳಿ ನನಗೆ ಕ್ಷಮೆ ಇಲ್ಲ ಎಂದು ತಿಳಿದ ಮೌರ್ಯನಿಗೆ ತುಂಬಾ ದುಃಖವಾಗುತ್ತೆ. ಇತ್ತ ಕಡೆ ಮಗನ ಜೊತೆ ಕಟುವಾಗಿ ಮಾತನಾಡಿದರೂ ಶಕುಂತಳಾದೇವಿಗೆ ಮನಸ್ಸಿಗೆ ನೋವಾಗಿ ಅಳುತ್ತಾ ಕೂರುತ್ತಾರೆ. ಅತ್ತೆಯ ನೋವನ್ನು ನೋಡಲಾರದೆ ನಕ್ಷತ್ರ ಅವರನ್ನು ಸಮಾಧಾನ ಮಾಡಲು ಬಂದಾಗ ನೀನು ಯಾವಾಗ ನಮ್ಮ ಮನೆಗೆ ಕಾಲಿಟ್ಟಿಯೋ ಅಲ್ಲಿಂದ ನಮ್ಮ ಮನೆಯ ನೆಮ್ಮದಿಯೇ ಹಾಳಾಗಿದೆ. ನೀನು ನನಗೆ ಸಮಾಧಾನ ಮಾಡಲು ಬರಬೇಡ. ನನ್ನ ಕಣ್ಣ ಮುಂದೆ ನಿಲ್ಲಬೇಡ ದಯವಿಟ್ಟು ಇಲ್ಲಿಂದ ಹೊರಟು ಹೋಗು ಎಂದು ಶಕುಂತಳಾದೇವಿ ಹೇಳುತ್ತಾರೆ.

ಅತ್ತೆಯ ಕಟು ಮಾತಿನಿಂದ ಬೇಜಾರಾದ ನಕ್ಷತ್ರ ಅಲ್ಲಿಂದ ಹೊರಟು ಹೋಗುತ್ತಾಳೆ. ಅವಳ ಹಿಂದೆಯೇ ಭೂಪತಿಯೂ ಹೋಗುತ್ತಾನೆ. ಈಗ ಇವರಿಬ್ಬರ ಟಾರ್ಗೆಟ್ ಇರುವಂತಹದ್ದು ಸಿ.ಎಸ್ ಬಗ್ಗೆ ಫೇಕ್ ನ್ಯೂಸ್ ಪಬ್ಲಿಷ್ ಮಾಡಿರುವಂತಹ ನ್ಯೂಸ್ ಪೇಪರ್ ಎಡಿಟರ್. ಅದಕ್ಕಾಗಿ ನಕ್ಷತ್ರ ತನ್ನ ತಂದೆ ಸಿ.ಎಸ್‌ಗೆ ಕಾಲ್ ಮಾಡಿ ನ್ಯೂಸ್ ಪೇಪರ್ ಎಡಿಟರ್ ಅಡ್ರೆಸ್ ಮತ್ತು ಕಾಂಟೆಕ್ಟ್ ಡಿಟೇಲ್ಸ್ ಕಲೆಕ್ಟ್ ಮಾಡಿ ನೇರವಾಗಿ ನ್ಯೂಸ್ ಪೇಪರ್ ಆಫೀಸ್‌ಗೆ ಹೋಗುತ್ತಾರೆ. ಹೋಗುವ ದಾರಿ ಮಧ್ಯೆ ಆ ಎಡಿಟರ್‌ಗೆ ಕಾಲ್ ಮಾಡಿ ಒಂದು ನ್ಯೂಸ್ ಇದೆ. ಅದನ್ನು ಪಬ್ಲಿಷ್ ಮಾಡಬೇಕು, ದುಡ್ಡು ಎಷ್ಟು ಬೇಕಾದರೂ ಕೊಡುತ್ತೇವೆ. ಕೋಟಿಯಲ್ಲಿ ಬೇಕಾ ಲಕ್ಷದಲ್ಲಿ ಬೇಕಾ ಎಂಬುವುದನ್ನು ನೀವೆ ಡಿಸೈಡ್ ಮಾಡಿ ಎಂದು ಎಡಿಟರ್‌ಗೆ ದುಡ್ಡಿನ ಆಸೆಯನ್ನು ತೋರಿಸುತ್ತಾರೆ. ಆದರೂ ಆ ಮನುಷ್ಯ ಮೊದಲು ಇದಕ್ಕೆಲ್ಲ ಒಪ್ಪಿಕೊಳ್ಳದೆ ನೀವು ಯಾರೆಂಬುವುದೇ ಗೊತ್ತಿಲ್ಲ ಸೋ ಹಾಗೆಲ್ಲ ನ್ಯೂಸ್ ಪಬ್ಲಿಷ್ ಮಾಡಲು ಆಗಲ್ಲ ಎಂದು ಹೇಳಿದಾಗ ನಾವು ನಿಮ್ಮ ಆಫೀಸ್ ಕಡೆಗೆ ಬರುತ್ತಿದ್ದೇವೆ. ಅಲ್ಲೇ ಮಾತನಾಡುವ ಎಂದು ಹೇಳಿ ಭೂಪತಿ ಫೋನ್ ಕಟ್ ಮಾಡಿ ನೇರವಾಗಿ ನ್ಯೂಸ್ ಆಫೀಸ್‌ಗೆ ಕಡೆಗೆ ಪಯಣ ಬೆಳೆಸುತ್ತಾರೆ.

ಇದನ್ನು ಓದಿ:Lakshana Serial: ಮಗ ಬದುಕಿರುವ ವಿಷಯ ಶಕುಂತಳಾದೇವಿಗೆ ಗೊತ್ತಾಗಿದೆ, ಡೆವಿಲ್ ಹುಡುಕಾಟದಲ್ಲಿ ಭೂಪತಿ- ನಕ್ಷತ್ರ

ಆಫೀಸ್‌ಗೆ ತಲುಪಿದ ಬಳಿಕ ನಕ್ಷತ್ರ ಮತ್ತು ಭೂಪತಿ ಎಡಿಟರ್ ಚೇಂಬರ್‌ಗೆ ಹೋಗಿ ತಮ್ಮ ಪರಿಚಯವನ್ನು ಮಾಡುತ್ತಾ ಆಗಲೇ ಕಾಲ್ ಮಾಡಿದ್ದೆ ಅಲ್ವ ನಾನೇ ಅದು ಅಂತ ಭೂಪತಿ ಹೇಳುತ್ತಾನೆ. ನಂತರ ದುಡ್ಡು ಎಷ್ಟು ಬೇಕಾದರೂ ಕೇಳಿ ಈ ತಕ್ಷಣ ದುಡ್ಡು ಬಂದು ನಿಮ್ಮ ಅಕೌಂಟ್‌ಗೆ ಬಿದ್ದಿರುತ್ತದೆ. ಆದರೆ ನ್ಯೂಸ್ ಮಾತ್ರ ಪಬ್ಲಿಷ್ ಮಾಡಲೇಬೇಕು ಎಂದು ಭೂಪತಿ ನಕ್ಷತ್ರ ಒತ್ತಾಯ ಮಾಡುತ್ತಾರೆ. ಇವರ ಈ ನಡವಳಿಕೆಯನ್ನು ಕಂಡು ಇವರು ಒಳ್ಳೆ ಕುರಿನೇ ಇರಬೇಕು, ಇವರು ಕೊಡೋ ನ್ಯೂಸ್ ಹಾಕಿದರೆ ಕೈ ತುಂಬಾ ಹಣ ಸಿಗುತ್ತದೆ ಅಂತ ಅಂದುಕೊಂಡು ಅವರ ಮಾತಿಗೆ ಒಪ್ಪಿ ಏನು ನ್ಯೂಸ್ ಹೇಳಿ ನೋಡಿ ಪಬ್ಲಿಷ್ ಮಾಡುತ್ತೇನೆ ಎಂದು ಹೇಳುತ್ತಾನೆ.

ನಂತರ ಜೇಬಿನಿಂದ ಒಂದು ಚೀಟಿ ತೆಗೆದು ಅದನ್ನು ಭೂಪತಿ ಎಡಿಟರ್ ಕೈಗೆ ಕೊಟ್ಟು ಇದುವೇ ನ್ಯೂಸ್‌ನ್ನು ನೀವು ಪಬ್ಲಿಷ್ ಮಾಡಬೇಕಾಗಿರುವುದು ಎಂದು ಹೇಳುತ್ತಾನೆ. ಅದನ್ನು ಓದಿದ ಎಡಿಟರ್ ಶಾಕ್ ಆಗಿ ಏನು ನೀವು ತಮಾಷೆ ಮಾಡುತ್ತಿದ್ದೀರಾ, ಲಂಚಕ್ಕಾಗಿ ನಾನು ಯಾವ ಫೇಕ್ ನ್ಯೂಸ್ ಕೂಡಾ ಪಬ್ಲಿಷ್ ಮಾಡಿಲ್ಲ ಎಂದು ಹೇಳುತ್ತಾನೆ. ಆಗ ಭೂಪತಿ ಸಿ.ಎಸ್ ಬಗ್ಗೆ ಹಾಕಿರುವ ನ್ಯೂಸ್ ಫೇಕ್ ಎಂದು ಹೇಳಿ ನಡೆದ ಘಟನೆಯನ್ನು ವಿವರಿಸಿ ಡೆವಿಲ್ ಯಾರು ಅವಳು ನಿನಗೆ ಹೇಗೆ ಪರಿಚಯ ಬೇಗ ಬಾಯಿ ಬಿಡಿ ಎಂದು ಕೇಳುತ್ತಾನೆ. ಆಗ ಬೆಚ್ಚಿ ಬಿದ್ದ ಎಡಿಟರ್ ಅವಳು ಯಾರೆಂದು ಗೊತ್ತಿಲ್ಲ ಎಂದು ಹೇಳಿ ಓಡಿ ಹೋಗಲು ಯತ್ನಿಸುತ್ತಾನೆ. ಆಗ ಹೊರಗಡೆಯಿಂದ ಪೋಲಿಸರು ಆತನನ್ನು ಹಿಡಿಯುತ್ತಾರೆ. ಸಿಕ್ಕಿ ಬಿದ್ದ ಎಡಿಟರ್ ಡೆವಿಲ್ ಮುಖ ನೋಡಿಲ್ಲ, ಫೋನ್ ಮುಖಾಂತರವೇ ನಮ್ಮ ಮಾತುಕತೆ ನಡೆದಿದ್ದು ಅಂತ ಬಾಯಿ ಬಿಡುತ್ತಾನೆ.
ಡೆವಿಲ್ ಯಾರೆಂಬುವುದ ನಾವು ನೋಡಿಲ್ಲ ಅಲ್ವ. ಇವನ ಮುಖಾಂತರವೇ ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯೋಣ ಎಂದು ಪೋಲಿಸರಿಗೆ ಹೇಳಿ ಹೊಸ ಪ್ಲಾನ್ ರೂಪಿಸುತ್ತಾನೆ ಭೂಪತಿ. ಭೂಪತಿ ಬೀಸಿದ ಬಲೆಗೆ ಡೆವಿಲ್ ಬೀಳುತ್ತಾಳಾ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 8 December 22