ಧಾರಾವಾಹಿ : ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಒಂದೊಳ್ಳೆ ಪ್ಲಾನ್ ಮಾಡಿ ಡೆವಿಲ್ ಲೇಡಿಯನ್ನು ಹಿಡಿಯುವ ಭೂಪತಿ ಮತ್ತು ಚಂದ್ರಶೇಖರ್ ಅವರ ತಂತ್ರ ಫಲಿಸಲಿಲ್ಲ. ಜೊತೆಗೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಲಾಗಿದ್ದ ಮೌರ್ಯ ಕೂಡಾ ಪರಾರಿಯಾಗಿರುತ್ತಾನೆ. ಇದೆಲ್ಲ ಘಟನೆಗಳು ಭೂಪತಿ ಹಾಗೂ ಚಂದ್ರಶೇಖರ್‌ಗೆ ಇನ್ನೊಂದು ತಲೆನೋವಾಗಿ ಪರಿಣಮಿಸಿದೆ.
ಆರತಿ ಮಾತು ಕೇಳಿ ಮೌರ್ಯನಿಗೆ ಶಾಕ್
ತಪ್ಪಿಸಿಕೊಂಡು ಹೋದ ಮೌರ್ಯನನ್ನು ಹೇಗಾದರೂ ಹಿಡಿದು ಜೈಲಿಗೆ ಹಾಕಲೇಬೇಕು. ಇಲ್ಲಂದ್ರೆ ತಪ್ಪು ಮೇಲೆ ತಪ್ಪು ಮಾಡಿ ದೊಡ್ಡ ಕ್ರಿಮಿನಲ್ ಆಗುತ್ತಾನೋ ಅಂತ ಅನಿಸುತ್ತೆ. ಹೇಗಾದರೂ ಮಾಡಿ ಮೌರ್ಯನನ್ನು ಹಿಡಿದು ಜೈಲಿಗೆ ಹಾಕಲೇಬೇಕು ಎಂದು ಇನ್ಸ್ಪೆಕ್ಟರ್ ಬಳಿ ಹೇಳುತ್ತಾನೆ. ಇದಾದ ಬಳಿಕ ಎಲ್ಲರೂ ಮನೆಗೆ ತೆರಳುತ್ತಾರೆ ಹಾಗೂ ನಕ್ಷತ್ರ ತನ್ನ ತಂದೆ ಮನೆಗೆ ಹೊರಡುತ್ತಾಳೆ. ಮನೆಗೆ ಬಂದ ತಂದೆ ಮಗಳು ಆರತಿಯನ್ನು ಸಮಾಧಾನ ಮಾಡುತ್ತಾ ನಮ್ಮನ್ನು ಕ್ಷಮಿಸಿ, ಡೆವಿಲ್‌ನ್ನು ಹಿಡಿಯಲು ಹೀಗೆ ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ಹೇಳಿ ಸಮಾಧಾನ ಪಡಿಸುತ್ತಾರೆ. ತಂದೆ ಮಗಳ ಮಾತಿಗೆ ಕೊನೆಗೂ ಆರತಿಯ ಕೋಪ, ಬೇಜಾರು ಕರಗುತ್ತದೆ.
ಇತ್ತ ಕಡೆ ಸಿ.ಎಸ್ ಚಕ್ರವ್ಯೂಹದಿಂದ ತಪ್ಪಿಸಿಕೊಂಡು ಬಂದ ಮೌರ್ಯ ಒಂದು ಅಜ್ಞಾತ ಸ್ಥಳದಲ್ಲಿ ಕುಳಿತು ಈ ನಕ್ಷತ್ರ ಅಷ್ಟು ಒಳ್ಳೆಯವಳಾ, ಅವಳ ಪ್ರಾಣ ತೆಗೆಯಲು ಬಂದ ನನ್ನನ್ನು ಆಕೆ ಯಾಕಾಗಿ ರಕ್ಷಣೆ ಮಾಡಬೇಕಿತ್ತು. ಇಲ್ಲ ಇಲ್ಲ ಅವಳು ಒಳ್ಳೆಯವಳಾಗಿರಲೂ ಸಾಧ್ಯನೇ ಇಲ್ಲ. ಎಷ್ಟಾದರೂ ಅವಳು ಸಿ.ಎಸ್ ಮಗಳು ಅಲ್ವ. ನನ್ನ ಅಣ್ಣ ಭೂಪತಿಯನ್ನು ಮೋಸದಿಂದ ಮದುವೆಯಾಗಿ ಅವನ ಜೀವನ ಹಾಳು ಮಾಡಿದ ಇವಳನ್ನು ಜೀವಂತ ಬಿಡುವ ಮಾತೇ ಇಲ್ಲ.
ನಕ್ಷತ್ರ ನನ್ನ ಪ್ರಾಣ ಉಳಿಸಿದರೆ ಏನಂತೆ ನಾನು ಅವಳ ಜೀವ ತೆಗಿತೀನಿ. ಈ ಒಂದು ಕೆಲಸ ಮಾಡಿ ನನ್ನ ಸೇಡನ್ನು ತೀರಿಸಿಕೊಳ್ಳುತ್ತೇನೆ ಅಂತ ಒಬ್ಬನೇ ಮಾತನಾಡಿಕೊಳ್ಳುತ್ತಾನೆ. ನಂತರ ಇಂತಹ ಒಳ್ಳೆಯ ಕೆಲಸಕ್ಕೆ ತಡ ಯಾಕೆ ಮಾಡೋದು ಅಂತ ಹೇಳಿ ನಕ್ಷತ್ರಳನ್ನು ಸಾಯಿಸುವ ಸಲುವಾಗಿ ನೇರವಾಗಿ ಸಿ.ಎಸ್ ಮನೆ ಬಳಿ ಹೋಗಿ, ಅವರ ಮನೆಯ ಸೆಕ್ಯುರಿಟಿ ಗಾರ್ಡ್ಗೆ ಹೊಡೆದು ಪ್ರಜ್ಞೆ ತಪ್ಪಿಸಿ ಮನೆ ಗೋಡೆ ಹಾರಿ ಮೇಲ್ಗಡೆ ಬಾಲ್ಕನಿಗೆ ಹೊಗುತ್ತಾನೆ. ಅವನು ಅಲ್ಲಿಗೆ ಹೋಗುವಂತಹ ಸಂದರ್ಭದಲ್ಲಿ ಸಿ.ಎಸ್, ಆರತಿ, ನಕ್ಷತ್ರ, ಭಾರ್ಗವಿ ಮಾತನಾಡಿಕೊಳ್ಳುತ್ತಿರುತ್ತಾರೆ. ಮಗಳೇ ನಿನಗೆ ತೊಂದರೆಯಾಗುತ್ತೆ ಎಂದರೆ ನಾನು ಹೇಗೆ ಸುಮ್ಮನಿರಲಿ, ಮಂಬೈ ಹಿಟ್ ಆಂಡ್ ರನ್ ಕೇಸನ್ನು ಮೌರ್ಯನ ತಲೆಗೆ ಕಟ್ಟಿ ಅವನನ್ನು ಪರ್ಮನೆಂಟ್ ಆಗಿ ಜೈಲಲ್ಲಿ ಕೊಳೆಯುವಂತೆ ಮಾಡಬೇಕು. ಆಗಲಾದರೂ ಅವನಿಂದ ನಿನಗೆ ತೊಂದರೆಯಾಗುವುದು ತಪ್ಪುತ್ತೆ ಎಂದು ಸಿ.ಎಸ್ ಹೇಳುತ್ತಾರೆ.
ಇದನ್ನು ಓದಿ: ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಡೆವಿಲ್
ಅಪ್ಪನ ಈ ಸ್ವಾರ್ಥದ ಮಾತಿಗೆ ಸಿಟ್ಟಾದ ನಕ್ಷತ್ರ, ಅಪ್ಪ ಏನು ತಪ್ಪು ಮಾಡದ ಮೌರ್ಯನ ಮೇಲೆ ಈ ರೀತಿಯಾಗಿ ಮಾಡುವುದು ನನಗೆ ಯಾಕೋ ಸರಿ ಕಾಣಿಸುತ್ತಿಲ್ಲ. ಏನಿದ್ದರೂ ಕಾನೂನು ಪ್ರಕಾರನೇ ಅವರಿಗಾಗುವ ಶಿಕ್ಷೆ ಸಿಗಬೇಕು. ಇದು ಮೀರಿಯೂ ಮೌರ್ಯನ ಮೇಲೆ ಇಲ್ಲಸಲ್ಲದ ಕೇಸ್ ಹಾಕಿದರೆ ನಾನು ಸುಮ್ಮನಿರಲ್ಲ ಅಪ್ಪ. ಎಷ್ಟೋ ಕನಸನ್ನು ಹೊತ್ತಿರೊ ಅವರ ಜೀವನವನ್ನು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಯಾವ ನ್ಯಾಯ ಅಪ್ಪ ಎಂದು ನಕ್ಷತ್ರ ಹೇಳುತ್ತಾಳೆ.
ನಕ್ಷತ್ರಳ ಪರ ವಹಿಸಿ ಮಾತನಾಡಿದ ಆರತಿಯೂ, ಮಗಳು ಇಷ್ಟಪಟ್ಟದ್ದೆಲ್ಲ ಸಿಗಬೇಕೆಂಬ ಕಾರಣಕ್ಕೆ ಮೌರ್ಯನನ್ನು ದಾಳವಾಗಿ ಬಳಸಿಕೊಂಡು ಭೂಪತಿಗೂ ನಕ್ಷತ್ರಳಿಗೂ ಮದುವೆ ಮಾಡಿದ್ರಿ ಅಲ್ವ. ನೀವು ಅವತ್ತು ಮಾಡಿರುವ ತಪ್ಪಿಗೆ ಇವತ್ತು ನಮ್ಮ ಮಗಳು ನೋವು ಅನುಭವಿಸುತ್ತಿದ್ದಾಳೆ ಎಂದು ಹೇಳುತ್ತಾರೆ. ಆರತಿಯ ಈ ಮಾತನ್ನು ಕೇಳಿ ಶಾಕ್ ಆದ ಮೌರ್ಯ ಮೆಲ್ಲನೆ ನಕ್ಷತ್ರಳ ಅಳುತ್ತಿರುವ ಮುಖವನ್ನು ನೋಡಿ ಇವಳೇನು ತಪ್ಪೇ ಮಾಡಿಲ್ವ. ಸುಮ್ಮನೆ ಏನು ತಪ್ಪೇ ಮಾಡದ ಜೀವವೊಂದನ್ನು ಬಲಿ ತೆಗೆದುಕೊಳ್ಳಬೇಕೆಂದು ಅಂದುಕೊಂಡಿದ್ದ ನಾನು ಎಂದು ಮೌರ್ಯನಿಗೆ ಅವನ ಮೇಲೆಯೇ ಜಿಗುಪ್ಸೆಯ ಭಾವನೆ ಮೂಡುತ್ತದೆ. ತನ್ನ ಅತ್ತಿಗೆಯದ್ದು ಏನು ತಪ್ಪಿಲ್ಲ ಎಂದು ತಿಳಿದ ಮೌರ್ಯ ಬದಲಾಗುತ್ತಾನಾ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 am, Tue, 13 December 22