‘ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್​ ಬಾಸ್​ನಲ್ಲಿ ಜಗದೀಶ್ ನಿರ್ಧಾರ

|

Updated on: Oct 06, 2024 | 9:33 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಜಗದೀಶ್​ ಸಿಕ್ಕಾಪಟ್ಟೆ ಹೈಲೈಟ್​ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ವರ್ತನೆ. ಕೋಪ ಬಂದಾಗ ಜಗದೀಶ್​ ತೀರಾ ಖರಾಬ್​ ಆಗಿ ನಡೆದುಕೊಳ್ಳುತ್ತಾರೆ. ಈಗ ತಮ್ಮ ಕೋಪಕ್ಕೆ ಬ್ರೇಕ್​ ಹಾಕಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಸುದೀಪ್ ಮಾತಿಗೆ ಬೆಲೆ ನೀಡಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಜಗದೀಶ್ ಹೇಳಿದ್ದಾರೆ.

‘ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್​ ಬಾಸ್​ನಲ್ಲಿ ಜಗದೀಶ್ ನಿರ್ಧಾರ
ಜಗದೀಶ್​, ಕಿಚ್ಚ ಸುದೀಪ್​
Follow us on

ಲಾಯರ್​ ಎಂದು ಹೇಳಿಕೊಂಡಿರುವ ಜಗದೀಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಸಖತ್​ ಕೋಪ ಮಾಡಿಕೊಂಡು ಸುದ್ದಿ ಆಗಿದ್ದಾರೆ. ಅವರ ಕೋಪದಿಂದಾಗಿ ಅನೇಕ ಜಗಳಗಳು ಆಗಿವೆ. ಶನಿವಾರದ (ಅ.5) ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರು ಜಗದೀಶ್​ಗೆ ಬುದ್ಧಿವಾದ ಹೇಳಿದ್ದರು. ಅದರ ಪರಿಣಾಮವಾಗಿ ಸಂಪೂರ್ಣ ಬದಲಾಗುವುದಾಗಿ ಜಗದೀಶ್ ತೀರ್ಮಾನಿಸಿದ್ದಾರೆ. ಅವರು ಈ ಮಾತಿಗೆ ಎಷ್ಟು ದಿನ ಬದ್ಧರಾಗಿ ಇರುತ್ತಾರೆ ಎಂಬುದನ್ನು ಕಾದುನೋಡಬೇಕು. ಜಗದೀಶ್​ ಖಂಡಿತವಾಗಿಯೂ ಮಾತಿನ ಮೇಲೆ ನಿಲ್ಲುವುದಿಲ್ಲ ಎಂಬುದು ಬಿಗ್​ ಬಾಸ್​ ಮನೆಯ ಎಲ್ಲರಿಗೂ ಗೊತ್ತಾಗಿದೆ.

ಮೊದಲ ವಾರದಲ್ಲೇ ಜಗದೀಶ್​ ಮಾಡಿದ ಅವಾಂತರಗಳು ಒಂದೆರಡಲ್ಲ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಇರುವ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಆಗುವ ರೀತಿಯಲ್ಲಿ ಪದ ಪ್ರಯೋಗ ಮಾಡಿದ್ದರು. ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಅವರು ಕ್ಯಾಮೆರಾ ಎದುರಿನಲ್ಲೇ ಮಾತನಾಡಿದರು. ಬೇಕುಬೇಕಂತಲೇ ನಿಯಮಗಳನ್ನು ಮುರಿದ್ದರು. ಅದಕ್ಕೆಲ್ಲ ಸುದೀಪ್​ ಕ್ಲಾಸ್​ ತೆಗೆದುಕೊಂಡರು.

ಭಾನುವಾರದ (ಅಕ್ಟೋಬರ್​ 6) ಸಂಚಿಕೆಯಲ್ಲಿ ಧನರಾಜ್​ ಜೊತೆ ಜಗದೀಶ್​ ಮಾತನಾಡುತ್ತಿದ್ದರು. ‘ಇನ್ಮೇಲೆ ನಾನು ಕೋಪ ಮಾಡಿಕೊಳ್ಳುವುದೇ ಇಲ್ಲ. ಸುದೀಪ್​ ಅವರು ಅಷ್ಟೆಲ್ಲ ನನಗೆ ಹೇಳಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿ ಹೇಳಿದ್ದಕ್ಕೆ ಗೌರವ ನೀಡುತ್ತೇನೆ’ ಎಂದು ಜಗದೀಶ್​ ಹೇಳಿದರು. ಆದರೆ ಅವರು ಹೇಳಿದ ರೀತಿಯಲ್ಲೇ ನಡೆದುಕೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸುವುದು ತುಂಬ ಕಷ್ಟ. ಆರಂಭದಲ್ಲಿ ಜಗದೀಶ್​ ಅವರಿಗೆ ಎಲ್ಲರೂ ಗೌರವ ನೀಡುತ್ತಿದ್ದರು. ಆದರೆ ಅವರ ವಿಚಿತ್ರ ವರ್ತನೆಗಳನ್ನು ನೋಡಿದ ಬಳಿಕ ಕೆಲವರು ಏಕವಚನದಲ್ಲಿ ಮಾತನಾಡಿದ್ದು ಕೂಡ ಇದೆ.

ಇದನ್ನೂ ಓದಿ: ಜಗದೀಶ್ ವಿರುದ್ಧ ಬೆಂಗಳೂರು ವಕೀಲರ ಸಂಘ ಗರಂ; ಕಲರ್ಸ್ ವಾಹಿನಿಗೆ ಬರೆದ ಪತ್ರದಲ್ಲಿ ಏನಿದೆ?

ಜಗದೀಶ್​ ಅವರು ಕ್ಷಣಕ್ಷಣಕ್ಕೂ ಮಾತು ಬದಲಿಸುತ್ತಾರೆ. ಹಿಂದಿನ ರಾತ್ರಿ ಬಿಗ್​ ಬಾಸ್​ ಬಗ್ಗೆ ಹಗುರವಾಗಿ ಮಾತನಾಡಿ, ಬೆಳಗ್ಗೆ ಎದ್ದು ಕ್ಷಮೆ ಕೇಳುತ್ತಾರೆ. ಮತ್ತೆ ಇನ್ನೇನೋ ಮಾತನಾಡಿ ಕಿರಿಕ್​ ಮಾಡಿಕೊಳ್ಳುತ್ತಾರೆ. ‘ಹಂಸಾ ಹೆಸರಿಗೆ ಮಾತ್ರ ಕ್ಯಾಪ್ಟನ್​. ಆದರೆ ಆಟ ನಡೆಯುವುದು ನನ್ನದು’ ಎಂದು ಜಗದೀಶ್ ಅವರು ಹೇಳಿದ್ದಾರೆ. ಒಟ್ಟು 17 ಜನರು ಬಿಗ್​ ಬಾಸ್​ ಮನೆಯಲ್ಲಿ ಆಟ ಆರಂಭಿಸಿದರು. ಅವರ ಪೈಕಿ ಒಬ್ಬರ ಆಟ ಇಂದು (ಅ.6) ಅಂತ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.