ಚಪ್ಪಲಿ ಧರಿಸದೆ ಬಿಗ್​ಬಾಸ್ ವೇದಿಕೆಗೆ ಬಂದ ಸುದೀಪ್: ಕಾರಣವೇನು?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದ್ದು ಈ ವಾರದ ಮೊದಲ ವಾರದ ಪಂಚಾಯಿತಿಯನ್ನು ಸುದೀಪ್ ನಿನ್ನೆ (ಶನಿವಾರ) ನಡೆಸಿಕೊಟ್ಟರು. ಶೋ ನಡೆಸಿಕೊಡಲು ಬರಿಗಾಲಲ್ಲಿ ವೇದಿಕೆಗೆ ಬಂದಿದ್ದರು ಸುದೀಪ್.

ಚಪ್ಪಲಿ ಧರಿಸದೆ ಬಿಗ್​ಬಾಸ್ ವೇದಿಕೆಗೆ ಬಂದ ಸುದೀಪ್: ಕಾರಣವೇನು?
Follow us
ಮಂಜುನಾಥ ಸಿ.
|

Updated on: Oct 06, 2024 | 1:36 PM

ಬಿಗ್​ಬಾಸ್ ಕನ್ನಡ ಸೀಸನ್ 11 ಒಂದು ವಾರದ ಹಿಂದಷ್ಟೆ ಪ್ರಾರಂಭವಾಗಿದೆ. ಈ ಸೀಸನ್​ನ ಮೊದಲ ವಾರದ ಪಂಚಾಯಿತಿ ನಿನ್ನೆ (ಶನಿವಾರ) ನಡೆಯಿತು. ಕಿಚ್ಚ ಸುದೀಪ್ ತುಸು ಭಿನ್ನ ಸ್ಟೈಲ್​ನಲ್ಲಿ ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡರು. ಪ್ರತಿ ಬಾರಿ ಮೊದಲ ವಾರದ ಪಮಚಾಯಿತಿ, ಭರ್ಜರಿ ಉಡುಪು ಧರಿಸಿ, ಸಖತ್ ಸ್ಟೈಲಿಷ್ ಆಗಿ ಆಗಮಿಸುತ್ತಿದ್ದ ಸುದೀಪ್ ಈ ಬಾರಿ ಸ್ಟೈಲಿಷ್ ಆಗಿದ್ದರೂ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ವೇದಿಕೆ ಏರಿದ್ದರು. ಪ್ರೇಕ್ಷಕರು ಗುರುತಿಸಿದ ಪ್ರಮುಖ ಬದಲಾವಣೆ ಎಂದರೆ ಕಿಚ್ಚ ಸುದೀಪ್ ಬರಿಗಾಲಲ್ಲೆ ಬಿಗ್​ಬಾಸ್ ವೇದಿಕೆಗೆ ಬಂದಿದ್ದರು. ಹೀಗೆ ಬರಿಗಾಲಲ್ಲಿ ವೇದಿಕೆ ಬರಲು ಕಾರಣವೂ ಇತ್ತು.

ಕಿಚ್ಚ ಸುದೀಪ್ ಬೂದು ಬಣ್ಣದ ಶೇರ್ವಾನಿ ಮಾದರಿಯ ಉಡುಪು ಧರಿಸಿ ಸರಳವಾಗಿ ವೇದಿಕೆಗೆ ಎಂಟ್ರಿ ಕೊಟ್ಟರು. ಕಳೆದ ಬಾರಿ ‘ಕಿಚ್ಚ-ಕಿಚ್ಚ’ ಎಂದು ಮ್ಯೂಸಿಕ್ ಹಾಕಿ ಸುದೀಪ್ ಕಾಲಿನಿಂದ ಕ್ಯಾಮೆರಾ ಪ್ಯಾನ್ ಮಾಡಿ ಮುಖ ತೋರಿಸುತ್ತಿದ್ದರು. ಆದರೆ ಈ ಬಾರಿ ಹಾಗೆ ಸಹ ಮಾಡಲಿಲ್ಲ. ಬದಲಿಗೆ ಸರಳವಾಗಿ ಬಿಗ್​ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟರು, ಯಾವುದೇ ಗಾಗಲ್ಸ್ ಇಲ್ಲದೆ, ಸರಳವಾಗಿ ಆದರೆ ಸ್ಟೈಲಿಷ್​ ಆಗಿಯೇ ಕಿಚ್ಚ ಕಾಣುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅವರು ಬರಿಗಾಲಲ್ಲಿ ಬಿಗ್​ಬಾಸ್ ವೇದಿಕೆಗೆ ಬಂದಿದ್ದರು.

ಸುದೀಪ್ ಬರಿಗಾಲಲ್ಲಿ ಬಿಗ್​ಬಾಸ್​ಗೆ ಬರಲು ಕಾರಣವಿತ್ತು, ನವರಾತ್ರಿ ಪ್ರಾರಂಭ ಆಗಿರುವ ಕಾರಣ ಸುದೀಪ್, ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ಬರಿಗಾಲಿನಲ್ಲಿಯೇ ಬಿಗ್​ಬಾಸ್ ವೇದಿಕೆ ಏರಿದ್ದರು. ನವರಾತ್ರಿ ಆಚರಣೆ ಮಾಡುವಂತೆ ಸುದೀಪ್ ಅವರ ತಾಯಿ ಹೇಳಿದ್ದರಂತೆ. ಅದೇ ಕಾರಣಕ್ಕೆ ನಿನ್ನೆ ವೇದಿಕೆಗೆ ಬಂದ ಕೂಡಲೇ ಕ್ಯಾಮೆರಾ ನೋಡಿ, ‘ಬರಿಗಾಲಲ್ಲಿ ಬಂದಿದ್ದೀನಿ, ಬೂದು ಬಣ್ಣದ ಶೇರ್ವಾನಿ ಮಾದರಿ ಬಟ್ಟೆ ಹಾಕಿಕೊಂಡಿದ್ದೀನಿ, ಓಕೆ ನಾ ಅಮ್ಮ’ ಎಂದು ಬಿಗ್​ಬಾಸ್ ಶೋ ಮೂಲಕ ತಾಯಿಯ ಒಪ್ಪಿಗೆ ಪಡೆದುಕೊಂಡರು ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ಮೊದಲ ವಾರ ಎಲಿಮಿನೇಟ್ ಆಗಿದ್ದು ಇವರೇನಾ?

ಸುದೀಪ್ ಸಾಮಾನ್ಯವಾಗಿ ಸಖತ್ ಸ್ಟೈಲಿಷ್ ಆಗಿ ಬಿಗ್​ಬಾಸ್ ವೇದಿಕೆಗೆ ಬರುತ್ತಾರೆ. ಜನ ವೀಕೆಂಡ್​ನಲ್ಲಿ ಬಿಗ್​ಬಾಸ್ ಶೋ ನೋಡುವ ಜೊತೆಗೆ ಸುದೀಪ್ ಅವರ ಬಟ್ಟೆಯನ್ನು ನೋಡಲು ಸಹ ಟಿವಿ ಮುಂದೆ ಕೂತಿರುತ್ತಾರೆ. ಸೀಸನ್​ನಿಂದ ಸೀಸನ್​ಗೆ ಭಿನ್ನ ರೀತಿಯ ಹಾಗೂ ಪ್ರತಿಬಾರಿ ಒಂದು ಥೀಮ್ ಇಟ್ಟುಕೊಂಡು ಸುದೀಪ್​ ಅವರು ಬಟ್ಟೆಗಳನ್ನು ತೊಡುತ್ತಾರೆ. ಸುದೀಪ್ ಅವರ ಬಿಗ್​ಬಾಸ್​ನ ಉಡುಗೆಗಳನ್ನು ವಿನ್ಯಾಸ ಮಾಡಲು ಪ್ರತ್ಯೇಕ ತಂಡವೇ ಇದೆ. ಉಡುಗೆಗಳಿಗೆ ತಕ್ಕಂತೆ ದುಬಾರಿ ಶೂಗಳನ್ನು ಸುದೀಪ್ ಧರಿಸುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು